ಹೊಳೆ ನರಸೀಪುರ ಪಟ್ಟಣದಿಂದ ಸೆಪ್ಟಂಬರ್ 30ರಂದು ಕಾಣೆಯಾಗಿದ್ದ ಶಿವಪ್ಪ (65)ಅವರ ಮೃತದೇಹ ಹೇಮಾವತಿ ನದಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಕಿಸಲಾಗಿದೆ. ಸೆಪ್ಟೆಂಬರ್ 30ರಂದು ಮನೆಯಿಂದ ಹೊರ ಹೊದವರು ವಾಪಸ್ ಬಾರದ ಕಾರಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಶುಕ್ರವಾರ ಸಂಜೆ ಅರಕಲಗೂಡು ರಸ್ತೆಯ ಚಿಟ್ಟನಹಳ್ಳಿ ಬಡಾವಣೆ ತಿರುವಿನ ಹತ್ತಿರದ ರೇವಣ್ಣ ಎಂಬುವರ ಮನೆ ಸಮೀಪದಲ್ಲಿ ಹರಿಯುತ್ತಿರುವ ಹೇಮಾವತಿ ನದಿ ತೀರದಲ್ಲಿ ಶಿವಪ್ಪನವರ ಮೃತ ದೇಹ ಪತ್ತೆಯಾಗಿದೆ.
ಶಿವಪ್ಪನವರ ಬಟ್ಟೆ ಹಾಗೂ ಚಪ್ಪಲಿಯಿಂದ ಮೃತದೇಹ ಶಿವಪ್ಪನವರದು ಎಂದು ಕುಟುಂಬ ಸದಸ್ಯರು ಗುರುತಿಸಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಮೃತ ದೇಹವನ್ನು ಪ್ರಮುಖ ಅಗ್ನಿಶಾಮಕ ರೇವಣ್ಣ ಹಾಗೂ ಅಗ್ನಿಶಾಮಕರಾದ ಜಯರಾಮ ಹಾಗೂ ರಂಗಸ್ವಾಮಿ ಮೃತದೇಹವನ್ನು ಹೊರ ತಂದರು ಪ್ರೊಫೇಶನರಿ ಡಿವೈಎಸ್ಪಿ ಮಂಜುನಾಥ್, ಪಿಎಸ್ಐ ಅರುಣ್, ಚಾಲಕ ನಾಗಪ್ಪ ಹಾಗೂ ಪಿ ಸಿ ಪ್ರವೀಣ್ ಅವರು ಜನರನ್ನು ನಿಯಂತ್ರಿಸಿ ಅಗ್ನಿಶಾಮಕರ ಕಾರ್ಯಕ್ಕೆ ನೆರವಾದರು.