Home Hassan Taluks Hassan ಸಂಜೀವಿನಿ ವೈದ್ಯಕೀಯ ಸಹಕಾರಿ ಸಂಘದ ಅಧ್ಯಕ್ಷರಾಗಿ ಹೆಚ್ ಪಿ ಸ್ವರೂಪ್ ಆಯ್ಕೆ

ಸಂಜೀವಿನಿ ವೈದ್ಯಕೀಯ ಸಹಕಾರಿ ಸಂಘದ
ಅಧ್ಯಕ್ಷರಾಗಿ ಹೆಚ್ ಪಿ ಸ್ವರೂಪ್ ಆಯ್ಕೆ

0

ನಗರದ ಸಂಜೀವಿನಿ ವೈದ್ಯಕೀಯ ಸಹಕಾರಿ ಸಂಘದ ಅಧ್ಯಕ್ಷರಾಗಿ ಹೆಚ್.ಪಿ. ಸ್ವರೂಪ್, ಉಪಾಧ್ಯಕ್ಷರಾಗಿ ಸುರೇಶ್ ಹಾಗೂ ಖಜಾಂಚಿಯಾಗಿ ದೇವೇಗೌಡ ರವರು ಅವಿರೋಧವಾಗಿ ಆಯ್ಕೆಯಾದರು.

ನಗರದ ಸಂಜೀವಿನಿ ವೈದ್ಯಕೀಯ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಆರ್.ಪುರಂ ಸಂಜೀವಿನಿ ಆಸ್ಪತ್ರೆ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಕವಿತಾ ರಾಜರಾಂ ನೇತೃತ್ವದಲ್ಲಿ ಚುನಾವಣೆ ನಡೆಯಿತು. ನಂತರ ಮಾತನಾಡಿದ ನೂತನ ಅಧ್ಯಕ್ಷರಾದ ಹೆಚ್.ಪಿ. ಸ್ವರೂಪ್ ರವರು, ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲ ಸಂಜೀವಿನಿ ಸಹಕಾರಿ ಸಂಘದ ನಿರ್ದೇಶಕರಿಗೆ ಧನ್ಯವಾದಗಳು ಸಲ್ಲಿಸುತ್ತೆ. ಮುಂದಿನ ದಿನಗಳಲ್ಲಿ ಹಾಸನ ನಗರದ ಸರಸ್ವತಿಪುರಂನಲ್ಲಿ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಾಣ ಮಾಡಲಾಗುವುದು. ಆಸ್ಪತ್ರೆಗೆ ಕಾರ್ಡಿಯಾಲಾಜಿ ವೈದ್ಯಕೀಯ ಶಾಖೆ ತೆರೆಯಲಾಗುವುದು ಎಂದರು. ಬಡವರಿಗೆ ಉತ್ತಮ ಚಿಕಿತ್ಸೆ ನೀಡಲು ಸಂಜೀವಿನಿ ಸಹಕಾರಿ ಆಸ್ಪತ್ರೆ ತೆರೆಯಲಾಗಿದೆ. ಇಡಿ ರಾಜ್ಯದಲ್ಲಿಯೇ ಸಹಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನಿಡಲಾಗುತಿದೆ. ಅಧ್ಯಕ್ಷರಾಗಿ ಆಯ್ಕೆ ಯಾಗಲು ಸಹಕರಿಸಿದ ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರಿಗೆ ರವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಂಜೀವಿನಿ ವೈದ್ಯಕೀಯ ಸಹಕಾರಿ ಸಂಘದ ನಿರ್ದೇಶಕರಾದ ವಿಮಲ ಮಂಜುನಾಥ್, ಡಾ. ಕಾವ್ಯ ಸೇರಿದಂತೆ ಉಳಿದ ನಿರ್ದೇಶಕರು ಮತ್ತು ಚುನಾವಣೆಯಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ಜನ ಜೆಡಿಎಸ್ ಬೆಂಬಲಿತ ಕಾರ್ಯಕರ್ತರು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
%d bloggers like this: