ಹಾಸನದಲ್ಲಿ ನಗರಸಭೆ ಸದಸ್ಯನ ಕೊಲೆ ಪ್ರಕರಣ

0

ಘಟನೆ : ಇಂದು ಜೂನ್ 1 ಬುಧವಾರ ಸಂಜೆ ವೇಳೆ ಬೈಕ್ ನಲ್ಲಿ ತೆರಳುವಾಗ ಹಿಂಬಾಲಿಸಿ, ಹಾಸನ ನಗರಸಭೆಯ JDS ಸದಸ್ಯನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ ಹಂತಕರು , ಹಾಸನ ನಗರದ 16ನೇ ವಾರ್ಡ್ನಿಂದ JDS ಅಭ್ಯರ್ಥಿಯಾಗಿ ಪ್ರಶಾಂತ್ ಆಯ್ಕೆಯಾಗಿ ಕೆಲವೇ ವರ್ಷವಾಗಿತ್ತು , ಕಟ್ಟಿನ ಕೆರೆ ಮಾರ್ಕೆಟ್ , ನಗರಸಭೆ ಎಂದು ಓಡಾಡಿಕೊಂಡಿದ್ದ , ಜನರೊಂದಿಗೆ ಇರುತ್ತಿದ್ಸ ವ್ಯಕ್ತ ಇಂದು ಇಲ್ಲ .,  ಇಂದು ಸಂಜೆ ಕೆಲಸ ಮುಗಿಸಿ ಮನೆಗೆ ತೆರಳೋ ವೇಳೆ ಅಟ್ಟಾಡಿಸಿ ಅಟ್ಯಾಕ್ ಮಾಡಿ ಹತ್ಯೆ ಮಾಡಲಾಗಿದೆ. ಕೊಲೆ ಭೀಕರತೆ ಹಾಸನದ ಎಲ್ಲಾ ವಾಟ್ಸಾಪ್ ಗಳಲ್ಲಿ ಓಡಾಡುತ್ತಿವೆ . .,

ತನ್ನ ಬಿಳಿ ಮೊಪೆಡ್ ಬೈಕ್ನಲ್ಲಿ (activa) ಹೋಗುತ್ತಿದ್ದ ವೇಳೆ ಪ್ರಶಾಂತ್ನನ್ನು ಹಿಂಬಾಲಿಸಿ ಅಟ್ಟಾಡಿಸಿ ಕೊಲೆ ಮಾಡಲಾಗಿದ್ದು . ಹಾಸನ ನಗರದ ಲಕ್ಷ್ಮಿಪುರ ಬಡಾವಣೆಯ ಜವೇನಹಳ್ಳಿ ಮಠದ ಹತ್ತಿರ  .   ಹಾಸನ ಪೆನ್ನನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಾಸನ ನಗರದಲ್ಲಿ ನಗರಸಭೆ ಸದಸ್ಯನೋರ್ವನ ಭೀಕರ ಹತ್ಯೆ ವಿಷಯ ತಿಳಿದ ಹಾಸನ ಜನತೆ ಭಯಭೀತಿ ಗೊಳ್ಳವ ಸ್ಥಿತಿ ಕೆಲವೊತ್ತು ನಿರ್ಮಾಣ ವಾಗಿದ್ದು ನಿಜ , ಏಕೆಂದರೆ .,  ಜನತೆ ಕೊಲೆ ಯಾಗಿದೆಯಂತೆ ಕೇಳಿದ್ದಲ್ಲ , ನಗರಸಭೆ ಸದಸ್ಯನೆ ಕೊಲೆಯಾದನ ಎಂದು ಚರ್ಚೆ ಶುರುವಾಗಿತ್ತು , ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ನಡೆದಿದೆ.

​ ​ ​ ​ ​ ​ ಪ್ರಶಾಂತ್ ಅವರು ಕೆಲಸ ಮುಗಿಸಿಕೊಂಡು ವಾಪಸ್ ತನ್ನ ಬೈಕಿನಲ್ಲಿ ತೆರಳುತ್ತಿದ್ದಾಗ ದೂರದಿಂದಲೇ ಹಿಂಬಾಲಿಸಿಕೊಂಡು ಬಂದಿರುವ ದುಷ್ಕರ್ಮಿಗಳು ಜವನಹಳ್ಳಿ ಮಠದ ರಸ್ತೆ, ಕಿರಣ್ ಕಾನ್ವೇಂಟ್ ಕ್ರಾಸ್ ಬಳಿ ಅಡ್ಡ ಹಾಕಿದಾಗ ತಪ್ಪಿಸಿಕೊಳ್ಳಲು ಬೈಕನ್ನು ಅಲ್ಲೆ ಬಿಟ್ಟು ಸಲ್ಪ ದೂರ ಓಡಿದ್ದಾರೆ ಪ್ರಶಾಂತ್ . ಮೊದಲೇ ಶಸ್ತ್ರ ಸಜ್ಜಿತವಾಗಿ ಕೊಲ್ಲಲೇ ಬೇಕೆಂದು ಬಂದಿರುವ ದುಷ್ಕರ್ಮಿಗಳು ಆತನನ್ನು ಹಿಡಿದು ಕೆಳಗೆ ಬೀಳಿಸಿ ಮನ ಬಂದಂತೆ ಮಚ್ಚು ಲಾಂಗ್ ಗಳಿಂದ ಕೊಚ್ಚಿ ಹಾಕಿ , ಉಸಿರು ನಿಲ್ಲೋ ವರೆಗೂ ನಿಂತು ಹೊರಟಿದ್ದಾರೆ. ಈ ವೇಳೆ ಆತನ ಎಡ ಕೈ ಕತ್ತರಿಸಿದ್ದು, ಕೆನ್ನೆ ಕುತ್ತಿಗೆಗೆ ಹಾಗೂ ಹೃದಯ ಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ. ಹೃದಯ ಕಾಣುವಂತೆ ಸೀಳಿದೆ ., ರಸ್ತೆಯಲ್ಲೆ ರಕ್ತ ಹರಿದಿದ್ದರಿಂದ ಹೊಡೆತದ ತೀವ್ರತೆ ತಾಳದೆ ಕೊನೆ ಉಸಿರು ಎಳೆದಿದ್ದಾರೆ.

ಹಾಸನ ನಗರದಲ್ಲಿ ಈ ಹಿಂದೆ ಹಾ.ರ. ನಾಗರಾಜು , ಕಟ್ಟಿನಕೆರೆ ಮಾರ್ಕೆಟ್ ನಾಗರಾಜು ಎಂದೆ ಹೆಸರಾಗಿದ್ದ ಅವರ ಪುತ್ರ ಈ ಪ್ರಶಾಂತ್ ನಾಗರಾಜು ಅವರು ಜೆಡಿಎಸ್ ಬೆಂಬಲಿತದಲ್ಲಿ 16ನೇ ವಾರ್ಡಿಗೆ ಸ್ಪರ್ದೆ ಮಾಡಿ ಗೆಲುವು ಪಡೆದಿದ್ದರು. ವಾರ್ಡಿಗೆ ಉತ್ತಮ ಕೆಲಸ ಮಾಡಿಕೊಡುವ ಮೂಲಕ ಜನಮನದಲ್ಲಿ ಉಳಿದಿದ್ರು. ಹಿಂದೆ ಹಾ.ರಾ. ನಾಗರಾಜು ಮತ್ತು ಗ್ಯಾರಳ್ಳಿ ತಮ್ಮಯ್ಯ ನಡುವೆ ಘರ್ಷಣೆ ಉಂಟಾಗಿ ಇಬ್ಬರೂ ಕೂಡ ಹತ್ಯೆಯಾಗಿದ್ದರು. ಕೆಲ ವರ್ಷಗಳ ನಂತರ ಪ್ರಶಾಂತ್ ಅವರು ನಗರಸಭೆ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಯಾವ ಗಲಾಟೆಗೂ ಹೋಗದೇ , ಗಲಾಟೆ ಮಾಡುತ್ತಿದ್ದವರ ಸಮಾಧಾನ ಗೊಳಿಸಿ ವಾರ್ಡಿನ ಕೆಲಸ ಮಾಡಿಕೊಂಡು ಜನ ಮೆಚ್ಚಿಗೆ ಪಡೆದಿದ್ದರು.

​ ​ ​ ​ ​ ಕೊಲೆಯಾದ ವಿಷಯ ತಿಳಿಯುತ್ತಿದ್ದಂತೆ ನೂರಾರು ಜನರು ಸ್ಥಳಕ್ಕೆ ದಾವಿಸಿ ವೀಕ್ಷಣೆ ಮಾಡಿದ್ದು . ಇತ್ತಿಚಿಗೆ ಯಾವ ಸಂಘರ್ಷಕ್ಕೂ ಹೋಗದೇ ತನ್ನ ಪಾಡಿಗೆ ತಾನು ವಾರ್ಡಿನ ಕೆಲಸ ಮಾಡಿಕೊಂಡು ಇದ್ದ ವ್ಯಕ್ತಿ ಕೊಲೆ ಆಗಿರುವುದಕ್ಕೆ ಜನತೆ ದಿಗ್ಬ್ರಮೆಗೊಂಡರು. ಹಳೇ ಧ್ವೇಷವೇ ಕೊಲೆ ಆಗಿರಬಹುದೇ ಇಲ್ಲವೇ ಬೇರೆ ಯಾವ ವಿಚಾರವಾಗಿ ಈ ದುರ್ಘಟನೆ ನಡೆದಿರಬಹುದು ಎಂಬ ವಿಚಾರವನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು. ಕೊಲೆಯಾದ ಸಲ್ಪ ಸಮಯದಲ್ಲೆ DYSP ಉದಯಭಾಸ್ಕರ್ ಹಾಗೂ ಇತರೆ ಅಧಿಕಾರಿಗಳು ಆಗಮಿಸಿ ಮೃತ ದೇಹವನ್ನು ಆಸ್ಪತ್ರೆಗೆ ಕೊಂಡಯ್ಯಲಾಗಿದ್ದು. ನಂತರ ಶವಗಾರಕ್ಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ(ಹೊಳೆನರಸೀಪುರ ಶಾಸಕರು) ಇತರ ಧುರೀಣರು ಆಗಮಿಸಿ ವಿಚಾರಿಸಿದರು.

ಕೊಲೆಗಾರರು ಯಾರು , ಈ ಕೊಲೆಗೆ ಕಾರಣ ಏನು ಎಂದು ಪ್ರಾಥಮಿಕವಾಗಿ ಗೊತ್ತಾಗದಿದ್ದರು , ಪೊಲೀಸ್ ತನಿಖೆ ಚುರುಕುಗೊಂಡಿದ್ದು ಶೀಘ್ರದಲ್ಲೇ ಕೊಲೆಗಾರರ ಎಡೆಮುರಿಕಟ್ಟುವಲ್ಲಿ ಹಾಸನ ಜಿಲ್ಲಾ ಪೋಲೀಸರು ಯಶಸ್ವೀ ಆಗುವರು ಕಾದು ನೊಡೋಣ .

LEAVE A REPLY

Please enter your comment!
Please enter your name here