ಸಕಲೇಶಪುರದ ಮಂಜ್ರಾಬಾದ್ ಕೋಟೆ ವೀಕ್ಷಣೆ ವೇಳೆ ಕಾಲು ಜಾರಿ ಬಿದ್ದಿದ್ದ ಪ್ರವಾಸಿಗನ ರಕ್ಷಣೆ

0

ಹಾಸನ : ಸಕಲೇಶಪುರದ ಮಂಜ್ರಾಬಾದ್ ಕೋಟೆ ವೀಕ್ಷಣೆ ವೇಳೆ ಕಾಲು ಜಾರಿ ಬಿದ್ದಿದ್ದ ಪ್ರವಾಸಿಗನ ರಕ್ಷಣೆ ಮಾಡಲಾಗಿದೆ ., ದಟ್ಟ ಕೋಟೆಯ ಗೋಡೆ ಮೇಲ್ಬಾಗದಿಂದ ಕೆಳ ಭಾಗದ ಕಾಲ್ಜಾರಿ ಬಿದ್ದಿದ್ದ ಯುವಕನ ರಕ್ಷಣೆಮಾಡಲಾಗಿದೆ , ಬೆಂಗಳೂರು ಮೂಲದ ವಿನಯ್ ಎಂಬ ಯುವಕ ಕಾಲು ಜಾರಿ ಬಿದ್ದು , ಅಪಾಯದಲ್ಲಿದ್ದ ಯುವಕನ ರಕ್ಷಿಸಿದ ಪ್ರವಾಸಿ ಮಿತ್ರ ಪೊಲೀಸ್ ಲೋಹಿತ್ ಮತ್ತು ಪ್ರವಾಸಿಗರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಒಳಗಾಗುತ್ತಿದ್ದಾರೆ ,

ಅಯ್ಯೋ !! , ಕಾಪಾಡಿ.. ಕಾಪಾಡಿ.. ಎಂದು ಕಿರುಚುತ್ತಿದ್ದ ಯುವಕನ , ಏಣಿ ಮೂಲಕ ಮೇಲಕ್ಕೆ ಹತ್ತಿಸಿ ಆಪತ್ತಿನಲ್ಲಿದ್ದವನ ರಕ್ಷಣೆ ಮಾಡಿದ್ದು ರೋಚಕವಾಗಿತ್ತು , ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಂಜ್ರಾಬಾದ್ ಕೋಟೆ ವಿಶ್ಚ ಪ್ರಸಿದ್ಧ , ಕೋಟೆಯ ಗೋಡೆ ಮೇಲೆ ಪ್ರಕೃತಿ ವೀಕ್ಷಣೆ ವೇಳೆ ಕಾಲು ಜಾರಿ ಕೆಳಗೆ ಬಿದ್ದಿದ್ದ ಯುವಕನ , ಪ್ರವಾಸಿ ಮಿತ್ರ ಪೊಲೀಸರ ಸಮಯಪ್ರಜ್ಞೆಯಿಂದ ಆತನ ಜೀವ ಉಳಿದಿದೆ ., ಜೀವ ರಕ್ಷಿಸಿದವರಿಗೆ ಕೃತಜ್ಞತೆ ಸಲ್ಲಿಸಿದ ಪ್ರವಾಸಿಗ ವಿನಯ್ ಹಾಗೂ ಬೆಂಗಳೂರಿನ ಅವರ ಕುಟುಂಬ .

LEAVE A REPLY

Please enter your comment!
Please enter your name here