ಹಾಸನ ನಗರದಲ್ಲಿ ದರೋಡೆಗೆ ಹೈಟೆಕ್ ಪ್ಲಾನ್ : ಸಿನಿಮೀಯ ರೀತಿ ಇಬ್ಬರ ಬಂಧನ

0

ಹಾಸನ: ದರೋಡೆಗೆ ಒಂದಕ್ಕೆ ಅಥಾರಗಳ ಸಮೇತ ಪ್ಲಾನ್ ಹಾಕುತ್ತಿದ್ದ ಇಬ್ಬರ ಹಾಸನ ಪೊಲೀಸರು ಕಳೆದ ಭಾನುವಾರ ಬಂಧಿಸಿ, ಈ ನಡುವೆ ಐವರಲ್ಲಿ ಮೂವರು ಪರಾರಿಯಾಗಿದ ಘಟನೆ ನಡೆದಿದೆ

ಹಾಸನ ನಗರದ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ತಣ್ಣೀರುಹಳ್ಳದ ದೇವರಾಯಪಟ್ಟಣದ ರೈಲ್ವೆ ಬ್ರಿಡ್ಜ್‌ ಹತ್ತಿರ ಐವರು ದುಷ್ಕರ್ಮಿಗಳು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಒಂದು ಕಾರಿನೊಂದಿಗೆ ಅಥಾರಗಳಾದ ಖಾರದ ಪುಡಿ ಬುರ್ಜಿ ಹಿಡಿದು ದಾರಿಯಲ್ಲಿ ಹೋಗುವ ದುಬಾರಿ ವಾಹನ ತಡೆದು ದರೋಡೆ ಮಾಡಲು ಹೊಂಚು ಹಾಕಿದ್ದರಂತೆ

ಬೆಳಗಿನ ಜಾವ ಇದೇ ರಸ್ತೆಯಲ್ಲಿ ಬೀಟ್ಸ್ ನಲ್ಲಿದ್ದ ಹಾಸನ ನಗರದ ರೇಣುಕಾಪ್ರಸಾದ್ (CPI) ಮತ್ತು ತಂಡ ಅಲ್ಲೇ ಸೇತುವೆ ಪಕ್ಕ ಗುಂಪು ಕಟ್ಟಿಕೊಂಡು ಕೈಯಲ್ಲಿ ಖಾರದ ಪುಡಿ ಮತ್ತು ಚಾಕು ಹಿಡಿದು ನಿಂತಿದ್ದವರ ಅವರಿಗೆ ತಿಳಿಯದಂತೆ ರೌಂಡಪ್ ಮಾಡಿ , ಸಿನಿಮೀಯ ರೀತಿ ಸೆರೆ ಮಾಡುವಾಗ ಐವರಲ್ಲಿ ಇಬ್ಬರು ಅಂದರೆ ಮಂಗಳೂರಿನ ಮಹಮದ್‌ ರಿಯಾಜ್‌ ಮತ್ತು ಅಕ್ಬರ್‌ನನ್ನು ವಶಕ್ಕೆ ಪಡೆದಿದ್ದು , ಇನ್ನು ಪುತ್ತೂರಿನ ಮಹಮ್ಮದ್‌ ಆರೀಫ್, ಮಹಮ್ಮದ್‌ ಮುನೀರ್ ಮತ್ತು ಸೈಯದ್ ತೌಸೀಫ್‌ ಪರಾರಿಯಾಗಿರುವ ವರದಿಯಾಗಿದ್ದು , ಸಿಕ್ಕಿರುವ ಇಬ್ಬರ ಮೂಲಕವೇ ಉಳಿದ ಮೂವರ ಸೆರೆ ಹಿಡಿಯಲು ಬಲೆ ಎಣೆಯಲಾಗಿದೆ ., ದುಷ್ಕ್ರತ್ಯಕ್ಕೆ ಬಳಸಲು ಹೊಂದಿದ್ದ ಕಾರು , ಖಾರದ ಪುಡಿ , ಇತರೆ ಅಥಾರಗಳು , ಮೊಬೈಲ್ ಪೊಲೀಸರ ವಶದಲ್ಲಿದ್ದು ತನಿಖೆ ಪ್ರಗತಿಯಲ್ಲಿದೆ

ಹಾಸನ ಜಿಲ್ಲಾ ಪೊಲೀಸರಿಗೆ ಹಾಸನ ನಗರದ ವಾಸಿಗಳ ಪರವಾಗಿ ಕೃತಜ್ಞತೆಗಳು

LEAVE A REPLY

Please enter your comment!
Please enter your name here