ಸಕಾಲ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ

0

ಸಕಾಲ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುವಂತೆ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವರು ಹಾಗೂ ಸಕಾಲ ಸಚಿವರಾದ ಸುರೇಶ್ ಕುಮಾರ್‍ರವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸುವುದರ ಜೊತೆಗೆ ಇಂದಿನಿಂದ ಪ್ರಾರಂಭವಾಗಿರುವ ಸಕಾಲ ಸಪ್ತಾಹಕ್ಕೆ ವಿಧಾನ ಸೌಧದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು 2012 ರ ಏಪ್ರಿಲ್ 2ರಂದು ಸಕಾಲ ಯೋಜನೆಯನ್ನು ಜಾರಿಗೆ ತರಲಾಗಿದೆ ಇದುವರೆಗೆ ಸಕಾಲ ಯೋಜನೆಯಡಿ 22,88,81,652 ಅರ್ಜಿಗಳು ಸ್ವೀಕೃತವಾಗಿದು 22,88,55,866 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು .
ಯಾವುದೇ ಅರ್ಜಿಗಳನ್ನು ಸ್ವೀಕರಿಸುವಾಗ ಸಕಾಲ ಯೋಜನೆಯಡಿಯೇ ಸ್ವೀಕರಿಸಿ ಎಂದರಲ್ಲದೆ ಸಕಾಲ ಮುಖಾಂತರ ಅರ್ಜಿ ಸಲ್ಲಿಸುವಂತೆ ಸಾರ್ವಜನಿಕರಿಗೆ ಪ್ರೋತ್ಸಾಹ ನೀಡಬೇಕು ಎಂದ ಸಚಿವರು

ಸಕಾಲ ಯೋಜನೆ ಜಾರಿಗೆ ಬಂದ ಸಂಧರ್ಭದಲ್ಲಿ 151, ಸೇವೆಗಳನ್ನು ನೀಡಲಾಗುತ್ತಿತ್ತು ಈಗ 1025 ಸೇವೆಗಳನ್ನು ಸಕಾಲ ಮೂಲಕ ಒದಗಿಸಲಾಗುತ್ತಿದೆ ಎಂದರು.
ಕೋವಿಡ್19 ಬಂದ ನಂತರ ಸಕಾಲ ಸೇವೆಗೆ ಹಿನ್ನೆಡೆಯಾಗಿತ್ತು ಎಂದ ಸಚಿವರು ಮತ್ತೆ ಚುರುಕುಗೊಳಿಸುವ ನಿಟ್ಟಿನಲ್ಲಿ ಸಕಾಲ ಸಪ್ತಾಹವನ್ನು ಇಂದಿನಿಂದ ಪ್ರಾರಂಭಿಸಲಾಗಿದೆ ಎಂದರು ಸಕಾಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.
ಮೊದಲನೇ ಹಂತದಲ್ಲಿ ನ.30 ರಿಂದ ಡಿ.5 ರವೆರೆಗೆ ನಗರಾಭಿವೃದ್ದಿ ಇಲಾಖೆ, ಕಂದಾಯ ಇಲಾಖೆ, ಸಾರಿಗೆ ಇಲಾಖೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಸಪ್ತಾಹ ಆಚರಿಸಲಾಗುವುದು ಡಿ.7 ರಿಂದ 11ರವೆರೆಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಹಾಗೂ ಡಿ.14 ರಿಂದ 19ರವರೆಗೆ ಉಳಿದ ಇಲಾಖೆಗಳಲ್ಲಿ ಸಕಾಲ ಸಪ್ತಾಹ ಅಚರಿಸಲಾಗುತ್ತಿದೆ ಎಂದರು.
ಯಾವುದೇ ನಾಗರೀಕರು ತಮ್ಮಗೆ ಅಗತ್ಯವಾದ ಸೇವೆಯನ್ನು ಪಡೆಯುವುದು ಅವನ ಹಕ್ಕು ಅದೇರೀತಿ ಸೇವೆ ಒದಗಿಸುವುದು ಸರ್ಕಾರ ಮತ್ತು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಸಚಿವರು ತಿಳಿಸಿದರು.
ಸಕಾಲ ಯೋಜನೆಯಡಿ ಅರ್ಜಿಗಳನ್ನು ಪಡೆಯುವಾಗಲೆ ಅಗತ್ಯ ದಾಖಲಾತಿಗಳನ್ನು ಪಡೆದು ತಿರಸ್ಕಾರಕ್ಕೆ ಅವಕಾಶವಿಲ್ಲದಂತೆ ಅರ್ಜಿ ಸ್ವೀಕರಿಸುವುರ ಜೋತೆಗೆ ವಿಳಂಬ ಮಾಡದೆ ನಿಗದಿತ ಸಮಯಕ್ಕೆ ಸೇವೆ ಒದಗಿಸುವಲ್ಲಿ ಅಧಿಕಾರಿಗಳು ಮಹತ್ವದ ಪಾತ್ರವಹಿಸಬೇಕು ಎಂದು ಸಚಿವರು ತಿಳಿಸಿದರು.

ಪ್ರತಿ ಕಚೇರಿ ಮುಂಬಾಗದಲ್ಲಿ ಸಕಾಲ ಯೋಜನೆಯಡಿ ನೀಡುವ ಸೇವೆಗಳ ಕುರಿತು ಬೋರ್ಡ್ ಹಾಕಬೇಕು ಜನ ಸಾಮಾನ್ಯರಿಗೆ ಅರಿವು ಮೂಡಬೇಕು ಎಂದು ಸಚಿವರು ಈ ಸಪ್ತಾಹದಲ್ಲಿ ಜನ ಸಾಮಾನ್ಯರಿಗೆ ಪ್ರಶ್ನಾವಳಿ ನೀಡಿ ಅವರಿಂದ ಭರ್ತಿಮಾಡಿಸಿ ಸೇವೆಯ ಬಗ್ಗೆ ಫೀಡ್‍ಬ್ಯಾಕ್ ಪಡೆಯಬೇಕು ಎಂದರು
ಅಕ್ಟೋಬರ್ ಮಾಹೆಯಲ್ಲಿ ಸಕಾಲ ಯೋಜನೆ ಅನುಷ್ಠಾನದಲ್ಲಿ ಮಂಡ್ಯ ಜಿಲ್ಲೆ ಮೊದಲ ಸ್ಥಾನ, ಚಿಕ್ಕಮಗಳೂರು ಜಿಲ್ಲೆ 2ನೇ ಸ್ಥಾನ ಹಾಗೂ ಚಿಕ್ಕಬಳ್ಳಪುರ ಮೂರನೇ ಸ್ಥಾನ ಪಡೆದಿದೆ ಈ ಜಿಲ್ಲೆಗಳ ಅಧಿಕಾರಿಗಳನ್ನು ಸಚಿವರು ವಿಶೇಷ ಅಭಿನಂದನೆ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಜಿಲ್ಲಾ ಮಟ್ಟದ ಸಕಾಲ ಸಮನ್ವಯ ಸಮಿತಿ ಸಭೆ ನಡೆಸಿ ಅರ್ಜಿ ವಿಲೇವಾರಿ, ಅರ್ಜಿ ಸ್ವೀಕಾರ , ತಿರಸ್ಕಾರ, ವಿಳಂಬ ಮತ್ತಿತರ ವಿಷಯಗಳ ಕುರಿತು ಪರೀಶಿಲಿಸುವಂತೆ ಸೂಚಿಸಿದ. ಸಚಿವರು ಈ ಸಪ್ತಾಹ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ರಾಜ್ಯ ಮುಖ್ಯ ಕಾರ್ಯದರ್ಶಿಗಳದ ಟಿ.ಎಂ. ವಿಜಯಭಾಸ್ಕರ್ ಅವರು ಪ್ರಶ್ನಾವಳಿಯ ಹಾಗು ಕರ ಪತ್ರ ಬಿಡುಗಡೆ ಮಾಡಿ ಮಾತನಾಡುತ್ತ ಸಕಾಲ ಯೋಜನೆಯಡಿ ನಿಗದಿತ ಸಮಯಕ್ಕೆ ಸೇವೆ ನೀಡದಿದ್ದಾರೆ ಮೇಲ್ಮನವಿ ಸಲ್ಲಸಿ ಸೇವೆ ಪಡೆಯಲು ಅವಕಾಶವಿದೆ ಎಂಬುದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಎಂದು ತಿಳಿಸಿದರು.
ಅರ್ಜಿ ವಿಲೇವಾರಿಯನ್ನು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿದರೆ ದಂಡ ವಿಧಿಸಲು ಸಹ ಅವಕಾಶವಿದೆ ಎಂದು ತಿಳಿಸಿದ ಮುಖ್ಯ ಕಾರ್ಯದರ್ಶಿ ಅವರ ಮೇಲ್ಮನವಿ ಸಲ್ಲಿಸಿ ಅರ್ಜಿಗಳನ್ನು ಶೀಘ್ರ ವಿಲೇವಾರಿಗೆ ಕ್ರಮವಹಿಸುವಂತೆ ಸೂಚಿಸಿದರು.

ಸಕಾಲದಲ್ಲಿ ಉತ್ತಮ ಕಾರ್ಯನಿರ್ವಹಣೆಯನ್ನು ನಿರ್ಧರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸ್ವೀಕರಿಸುವುದು, ಶೀಘ್ರ ವಿಲೇವಾರಿ, ವಿಳಂಬವಿಲ್ಲದೆ ಅರ್ಜಿ ವಿಲೇವಾರಿ ಹಾಗೂ ಕಡಿಮೆ ತಿರಸ್ಕಾರ ಮಾಡಿದ ಅಂಶಗಳನ್ನು ಪರಿಗಣಿಸಿ ನಿರ್ಧರಿಸಲಾಗುವುದು ಎಂದು ವಿಜಯ ಭಾಸ್ಕರ್ ಅವರು ತಿಳಿಸಿದರು.
ಎಲ್ಲ ಇಲಾಖೆಗಳು ಸ್ಪರ್ಧಾ ಮನೋಭಾವದಿಂದ ಅರ್ಥಪೂರ್ಣವಾಗಿ ಸಕಾಲ ಸಪ್ತಾಹವನ್ನು ಆಚರಿಸುವ ಮೂಲಕ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿ ಎಂದರು.
ಸಕಾಲ ಮಿಷನ್ ಸಿಬಂದ್ದಿ ಮತ್ತು ಆಡಳಿತ ಸುಧಾರಣ ಇಲಾಖೆ (ಇ-ಆಡಳಿತ) ನಿರ್ದೇಶಕರು, ಹಾಗೂ ಸಕಾಲ ಮಿಷನ್ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಮಹೇಂದ್ರ ಜೈನ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು
ಸಕಾಲ ಮಿಷನ್ ಅಪರ ಮಿಷನ್ ನಿರ್ದೆಶಕರಾದ ಡಾ.ಮಮತ ಬಿ.ಆರ್ ಅವರು ಕಾರ್ಯಕ್ರಮದ ಪ್ರಾರಂಭದಲ್ಲಿ ಗಣ್ಯರನ್ನು ಸ್ವಾಗತಿಸಿ ಯೋಜನೆ ಕುರಿತು ಪ್ರಾಸ್ತವಿಕ ನುಡಿಗಳನ್ನಾಡಿದರು.
ಜಿಲ್ಲಾಧಿಕಾರಿಯವರ ವಿಡಿಯೋ ಸಂವಾದದ ನಂತರ ಅಧಿಕಾರಿಗಳೊಂದಿಗೆ ಮಾತನಾಡಿ ಏಲ್ಲಾ ಇಲಾಖೆಗಳಲ್ಲಿ ಸಕಾಲ ಯೋಜನೆ ಕುರಿತು ಬೋರ್ಡ್ ಹಾಕುವುದರ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ತಿಳಿಸಿದರು.
ಉಪ ವಿಭಾಗಧಿಕಾರಿ ಬಿ. ಎ. ಜಗದೀಶ್ ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here