ರೈತರು ಸ್ವತಃ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಲು ತಾವೇ ಸ್ವತ: ಅಥವಾ ತಮ್ಮ ಗ್ರಾಮದ  ಖಾಸಗಿ ನಿವಾಸಿಗಳ ಸಹಾಯದೊಂದಿಗೆ ಬೆಳೆ ಸಮೀಕ್ಷೆ ಆಪ್‍ನಲ್ಲಿ ಅವಕಾಶ!!

0

ಹಾಸನ ಜ.6 (ಹಾಸನ್_ನ್ಯೂಸ್): ಹಾಸನ ತಾಲ್ಲೂಕಿನ ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್ಲೋಡ್ ಮಾಡುವ ಒಂದು ವಿನೂತನ ಯೋಜನೆ.  ಪ್ರತಿ ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳ ವಿವರಗಳನ್ನು ಬೆಳೆ ಆವರಿಸಿದ ವಿಸ್ತೀರ್ಣದೊಂದಿಗೆ ಜಿಪಿಎಸ್ ಆಧಾರಿತ ಛಾಯಾ ಚಿತ್ರದ ಸಹಿತ ಬೆಳೆ ಸಮೀಕ್ಷೆ ಆಪ್‍ನಲ್ಲಿ ದಾಖಲಿಸಬಹುದಾಗಿರುತ್ತದೆ.

ರೈತರು ಸ್ವತಃ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಲು ತಾವೇ ಸ್ವತ: ಅಥವಾ ತಮ್ಮ ಗ್ರಾಮದ  ಖಾಸಗಿ ನಿವಾಸಿಗಳ ಸಹಾಯದೊಂದಿಗೆ ಬೆಳೆ ಸಮೀಕ್ಷೆ ಆಪ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ.  ಈ ಯೋಜನೆಯಡಿ ರೈತರು / ಖಾಸಗಿ ನಿವಾಸಿಗಳು (Pಖ) ರೈತರ ಜಮೀನಿನಲ್ಲಿ ಸಮೀಕ್ಷೆ ಕೈಗೊಳ್ಳುವಾಗ ಆಧಾರ್‍ಕಾರ್ಡ್ ಹಾಗೂ ಸಂಬಂಧಿಸಿದ ವಿವರಗಳನ್ನು ನೀಡಿ ಖುದ್ದು ಜಮೀನಿನಲ್ಲಿ ಹಾಜರಿದ್ದು, ಛಾಯಾಚಿತ್ರ ತೆಗೆಯಲು ಸಹಕರಿಸಲು ಕೋರಲಾಗಿದೆ.  ನಂತರ ದಾಖಲಿಸಿದ ದತ್ತಾಂಶವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ವಿಮಾ ಯೋಜನೆ, ಪಹಣಿಯಲ್ಲಿ ಬೆಳೆ ವಿವರ ದಾಖಲಿಸುವ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ನೀಡುವ ನಷ್ಟ ಪರಿಹಾರ ವಿತರಿಸಲು ಉಪಯೋಗಿಸಲಾಗುತ್ತಿದ್ದು, ಜ.15 ರೊಳಗಾಗಿ ಎಲ್ಲಾ ರೈತರು ತಮ್ಮ ಜಮೀನಿನ ಬೆಳೆಗಳ ಸಮೀಕ್ಷೆಯನ್ನು ಮಾಡಿಸಿಕೊಳ್ಳಬೇಕು -ಸಹಾಯಕ ಕೃಷಿ ನಿರ್ದೇಶಕರು

LEAVE A REPLY

Please enter your comment!
Please enter your name here