ಸತ್ತಿರೋನು ನನ್ನ ತಮ್ಮ , ನನ್ನ ತಮ್ಮನ ಧಾರೂಣ ಸಾವಿಗೆ ನೀವು ನ್ಯಾಯ ಕೊಡಿಸಬೇಕು

0

ದಿನಾಂಕ 04-09-2023 ರಂದು ಮದ್ಯಾಹ್ನ 03-00 ಗಂಟೆ ಸಮಯದಲ್ಲಿ, ಪಿ ರಶ್ಮಿತ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಹೊಳೆನರಸೀಪುರ ತಾಲೂಕು ಲಕ್ಷ್ಮಿಪುರ ಗ್ರಾಮದ ವಾಸಿ ಕಿರಣ್ ಕುಮಾರ್ ರವರ ಪತ್ನಿಯಾಗಿದ್ದು ಪತಿ ಕಿರಣ್ ಕುಮಾರ್ ರವರು ಬಿಇಓ ಕಛೇರಿ ಹೊಳೆನರಸೀಪುರದಲ್ಲಿ, ಪ್ರಥಮ ದರ್ಜೆ ಸಹಾಯಕ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸದರಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ಸಿಬ್ಬಂದಿಗಳಲ್ಲೊಬ್ಬರು , ಇ,ಒ ಅಧಿಕಾರಿ ಮತ್ತು ಪ್ರಥಮ ದರ್ಜೆ ಸಹಾಯಕರು ಹಾಗೂ ಇತರ ಸಿಬ್ಬಂದಿಗಳು ಮತ್ತು ನೌಕರರು ತನ್ನ ಗಂಡನಿಗೆ ನಿಂದನೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಾನಸಿಕವಾಗಿ ಕಿರುಕುಳ ನೀಡಿ ಕಛೇರಿಯಲ್ಲಿ, ಕರ್ತವ್ಯ ನಿರ್ವಹಿಸಲು ಅಡಿಪಡಿಸುತ್ತಿದ್ದರು ಎಂಬ ವಿಚಾರವಾಗಿ ಪ್ರತಿ ದಿನ ಬಳಿ ಬಂದು ಹೇಳಿಕೊಂಡು ಆಳುತ್ತಿದ್ದರು

ಅಲ್ಲದೆ ಕರ್ತವ್ಯದಲ್ಲಿ, ಪ್ರಾಮಾಣಿಕವಾಗಿ ಸೇವೆ ಸಲಿಸುತ್ತಿದ್ದರು ಸಂಬಳ ನೀಡದೆ ಕೆಲವು ತಿಂಗಳುಗಳಿಂದ ಹಾಜರಾತಿ ಸಹಿ ನಿರ್ವಹಿಸಲು ಸಹ ಬಿಡದೆ ಮಾನಸಿಕವಾಗಿ ಹಿಂಸಿಸಿ ನಿಂದನೆ ಮಾಡುತ್ತಿದ್ದರು ಆಲ್ಲದೆ ನೀನು ನಾನು ಹೇಳಿದ ಕಡೆ ಕೆಲಸ ನಿರ್ವಹಿಸಬೇಕು ಎಂದು ಹಿಂಸಿಸಿ ಬಲವಂತವಾಗಿ ಗಂಡನಿಂದ ಪತ್ರ ಬರೆಸಿಕೊಂಡಿರುತ್ತಾರೆ ಆಲ್ಲದೆ ಪ್ರತಿ ದಿನ ಹೆಚ್ಚುವರಿಯಾಗಿ ರಾತ್ರಿ ಸುಮಾರು 10-30 ರಿಂದ 11 ಗಂಟೆ ತನಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದರು ಅಲ್ಲದೆ ನಾವು ಹೇಳಿದಂತೆ ಕರ್ತವ್ಯ ನಿರ್ವಹಿಸದಿದ್ದರೆ ನಿಮ್ಮನ್ನು ಕೆಲಸದಿಂದ ವಜಾ ಮಾಡುತ್ತೇನೆಂದು ಬೆದರಿಕೆ ಹಾಕುತ್ತಿದ್ದರು ಇಷ್ಟೆಲಾ ನಡೆದರು ಕಛೇರಿಯ ಹಿರಿಯ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು ಸಹ ಯಾವುದೇ ಕ್ರಮ ಕೈ ಗೊಂಡಿರುವುದಿಲ್ಲ

ಇಷ್ಟೆಲಾ ಬೆಳವಣಿಗೆಗಳಿಂದ ಗಂಡ ಮಾನಸಿಕ ಖಿನ್ನತೆ ಗೆ ಓಳಗಾಗಿ ಆರೋಗ್ಯದಲ್ಲಿ ವ್ಯತ್ಯಾಸವಾದರಿಂದ ದಿನಾಂಕ 03-09-2023 ರಂದು ಸಮಯ ಬೆಳಗೆ 11 ಗಂಟೆಯಲ್ಲಿ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ಅತ್ತೆ ತಂಗ್ಯಮ್ಮ ಹಾಗೂ ದೇವರಾಜು ರವರುಗಳು ಆಸ್ಪತ್ರೆಗೆ ದಾಖಲು ಮಾಡಿರುತ್ತೇವೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಆದ್ದರಿಂದ ಪಿರ್ಯಾದಿ ಗಂಡನ ಸಾವಿಗೆ ಕಾರಣರಾದವರು ಕಛೇರಿಯಲ್ಲಿ , ಕಿರುಕುಳ ಒತ್ತಡ ಕರ್ತವ್ಯಕ್ಕೆ ಅಡಿಪಡಿಸಿ ಬೆದರಿಕೆ ಹಾಕಿರುವ ಬಗ್ಗೆ ಮೊಬೈಲ್ ನಲ್ಲಿ, ಆಡಿಯೋ ಧ್ವನಿ ಸುರುಳಿ ಇದ್ದು ಕಛೇರಿಯಲ್ಲಿ ಸಿಸಿ ಟಿವಿಯಲ್ಲಿ ವಿಡಿಯೋ ದಾಖಲಾಗಿರುವ ಬಗ್ಗೆ ತಿಳಿಸಿರುತ್ತಾರೆ ಈ ದಾಖಲೆಗಳು ಮುಖ್ಯ ಸಾಕ್ಷಿಗಳಾಗಿರುತ್ತವೆ ಆದ್ದರಿಂದ ಕೆಲ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ವರ್ಗದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಹಾಗೂ ಗಂಡನ ಸಾವಿಗೆ ಕಾರಣರಾದ ಮೇಲೆಂಡವರ ಮೇಲೆ ಕ್ರಮ ಕೈ ಕೊಂಡು ಪಿರ್ಯಾದಿ ಗಂಡನ ಸಾವಿನಿಂದ ಅಘಾತಕೊಳ್ಳಗಾಗಿರುವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮೃತ ಪಟ್ಟವನ ಹೆಂಡತಿ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ.

LEAVE A REPLY

Please enter your comment!
Please enter your name here