ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮ

0

ಅರಕಲಗೂಡು ವಿಧಾನಸಭಾ ಕ್ಷೇತ್ರದ ಮಕ್ಕಳಿಗೆ ಮಾತ್ರವೇ ಸೀಮಿತ.

ಸ್ಪರ್ಧೆ-1: ಏಕ ಪಾತ್ರಭಿನಯ


(ಪುರಾಣ, ಐತಿಹಾಸಿಕ, ಸಾಮಾಜಿಕ ಪರಿಣಾಮ ಬೀರುವ ಪಾತ್ರ)

ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಷರತ್ತುಗಳು ಅನ್ವಯ:

1. ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು.
2. ಯಾವುದೇ ರಾಜಕೀಯ ಪ್ರೇರಿತವಾಗಿರಬಾರದು.
3. ಒಬ್ಬರಿಗೆ ಒಂದು ಸ್ಪರ್ಧೆಯಲ್ಲಿ ಮಾತ್ರವೇ ಅವಕಾಶ.
4. ವಯಸ್ಸಿನ ಮಿತಿ 7 ರಿಂದ 12 ರ ಮತ್ತು 13 ರಿಂದ 16 ವರೆಗೆ ಮಾತ್ರ. (ಪ್ರತ್ಯೇಕ ಎರಡು ವಿಭಾಗ)
5. ವೀಡಿಯೋ 3 ರಿಂದ 5 ನಿಮಿಷಗಳವರೆಗೆ.
6. ಅರಕಲಗೂಡು ತಾಲ್ಲೂಕಿನ ಮಕ್ಕಳಿಗೆ ಮಾತ್ರವೇ ಸೀಮಿತ.


ಸ್ಪರ್ಧೆ-2: ವೇಷ ಭೂಷಣ ಸ್ಪರ್ಧೆ (ಛದ್ಮ ವೇಷ- Fancy Dress)ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಷರತ್ತುಗಳು ಅನ್ವಯ:

1. ವಯಸ್ಸಿನ ಮಿತಿ 2 ರಿಂದ 6, 7 ರಿಂದ 12 ಹಾಗೂ 13 ರಿಂದ 16 ವರೆಗೆ ಮಾತ್ರ. (ಪ್ರತ್ಯೇಕ ಮೂರು ವಿಭಾಗಗಳಲ್ಲಿ ಆಯ್ಕೆ ಮಾಡಲಾಗುತ್ತದೆ).

2.ಈ ಹಿಂದೆ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿರುವ ವೇಷಭೂಷಣದ ಫೋಟೋಗಳನ್ನು ಕಳಿಸಬಾರದು. (ಈ ಕಾರ್ಯಕ್ರಮಕ್ಕೆ ಮಾತ್ರವೇ ಪ್ರತ್ಯೇಕವಾಗಿ ಸಿದ್ಧಗೊಳಿಸಿದ ವೇಷಭೂಷಣವಾಗಿರಬೇಕು).

3. ಒಬ್ಬರಿಗೆ ಒಂದು ಸ್ಪರ್ಧೆಯಲ್ಲಿ ಮಾತ್ರವೇ ಅವಕಾಶ.

4. ಅರಕಲಗೂಡು ತಾಲ್ಲೂಕಿನ ಮಕ್ಕಳಿಗೆ ಮಾತ್ರವೇ ಸೀಮಿತ.

ಸ್ಪರ್ಧೆ-3: ನೃತ್ಯ (Solo)ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಷರತ್ತುಗಳು ಅನ್ವಯ:

1. ವಯಸ್ಸಿನ ಮಿತಿ 6 ರಿಂದ 12 ಹಾಗೂ 13 ರಿಂದ 16 ವರೆಗೆ ಮಾತ್ರ. (ಪ್ರತ್ಯೇಕ ಎರಡು ವಿಭಾಗಗಳಲ್ಲಿ ಆಯ್ಕೆ ಮಾಡಲಾಗುತ್ತದೆ).

2.ಈ ಹಿಂದೆ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿರುವ ವೀಡಿಯೋ ಕಳಿಸಬಾರದು. (ಈ ಕಾರ್ಯಕ್ರಮಕ್ಕೆ ಮಾತ್ರವೇ ಪ್ರತ್ಯೇಕವಾಗಿ ಮಾಡಿದ ವೀಡಿಯೋವನ್ನು ಪರಿಗಣಿಸಲಾಗುತ್ತದೆ).

3. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳ ನೃತ್ಯದ ವೀಡಿಯೋ 4 ರಿಂದ 6 ನಿಮಿಷಗಳ ಒಳಗಿರಬೇಕು.

4. ಒಬ್ಬರಿಗೆ ಒಂದು ಸ್ಪರ್ಧೆಯಲ್ಲಿ ಮಾತ್ರವೇ ಅವಕಾಶ.


ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳ ವೀಡಿಯೋ ಮತ್ತು ಫೋಟೋಗಳನ್ನು A.Manju (Facebook Official Page) ನಲ್ಲಿ Upload ಮಾಡಲಾಗುವುದು. ಯಾವ ಸ್ಪರ್ಧಾಳುಗಳು ಅತಿ ಹೆಚ್ಚು Like ಪಡೆಯುವ ಮೂಲಕ ಜನರಿಂದ ಪ್ರಶಂಸೆ ಪಡೆದುಕೊಳ್ಳುತ್ತಾರೋ ಅಂತಹ ಮಕ್ಕಳನ್ನು ವಿಜೇತರು ಎಂದು ಪರಿಗಣಿಸಲಾಗುತ್ತದೆ. ವೀಡಿಯೋ ಮತ್ತು ಫೋಟೋ ಕಳಿಸಲು ಡಿಸೆಂಬರ್ 26 ಮಂಗಳವಾರ ಕೊನೆಯ ದಿನ.

ಆಧಾರ್ ಕಾರ್ಡ್ ಕಡ್ಡಾಯ

LEAVE A REPLY

Please enter your comment!
Please enter your name here