ಸಾರ್ವಜನಿಕ ಸ್ಥಳದಲ್ಲಿ‌ ಮದ್ಯಸೇವನೆ ಮಾಡುತ್ತಿದ್ದನ್ನ ಪ್ರಶ್ನಿಸಿದ್ದಕ್ಕೆ‌ ಹಲ್ಲೆ

0

ಹಾಸನ : ಸಾರ್ವಜನಿಕ ಸ್ಥಳದಲ್ಲಿ‌ ಮದ್ಯಸೇವನೆ ಮಾಡುತ್ತಿದ್ದನ್ನ ಪ್ರಶ್ನಿಸಿದ್ದಕ್ಕೆ‌ ಹಲ್ಲೆ ನಡೆದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಲ್ಲಿಪಟ್ಟಣ ರಸ್ತೆಯ ಎಂಎಲ್‌ಐಎಲ್ ಎಂಬ ಮದ್ಯದಂಗಡಿ ಬಳಿ ಘಟನೆಯಾಗಿದ್ದು, ಮದ್ಯದಂಗಡಿಯ ಪಕ್ಕದ ಬಿಲ್ಡಿಂಗ್‌ನ ಮುಂಭಾಗ ಕಾರಿನಲ್ಲಿ ಮದ್ಯಸೇವನೆ ಮಾಡುತ್ತಿದ್ದ ನಾಲ್ಕೈದು ಮಂದಿಯು ಸಾರ್ವಜನಿಕ ಸ್ಥಳದಲ್ಲಿ, ಕಾರಿನಲ್ಲಿ‌ ಕೂತು ಕುಡಿಯೋದನ್ನ ಅಲ್ಲಿನ ಕಟ್ಟಡ ಮಾಲೀಕ ಪ್ರಶ್ನೆ ಮಾಡಿರುತ್ತಾರೆ.

ಪ್ರಶ್ನೆ ಮಾಡಿದ್ದಕ್ಕೆ ಪಾನಮತ್ತರಾಗಿದ್ದ ಆ ನಾಲ್ಕೈದು ಮಂದಿಯಿಂದ ಕಟ್ಟಡ ಮಾಲೀಕನ ಮೇಲೆ ಹಲ್ಲೆಯಾಗಿದ್ದು, ಈ ಘಟನೆಯಲ್ಲಿ ಬಿಲ್ಡಿಂಗ್ ಮಾಲೀಕ ವಸಂತ್ ಕುಮಾರ್ ಗೆ ಗಾಯಗಳಾಗಿವೆ, ಗಲಾಟೆ ಮಾಡಿ ವಸಂತ್ ಕುಮಾರ್‌ ಮೇಲೆ‌ ಹಲ್ಲೆ‌ ಮಾಡೋ‌ ವಿಡಿಯೋ ಸಿಸಿಕ್ಯಾಮರಾದಲ್ಲಿ‌ ಸೆರೆಯಾಗಿದೆ, ಹಲ್ಲೆ‌ಮಾಡಿದವರನ್ನ ಬಂಧಿಸಿ ಮದ್ಯದಂಗಡಿಯನ್ನ ತೆರವು ಮಾಡಬೇಕೆಂದು ಸ್ಥಳೀಯರು ಒತ್ತಾಯಸಿದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದೋಗಿದೆ

LEAVE A REPLY

Please enter your comment!
Please enter your name here