ಹಾಸನ ನಗರದ ಹೊರವಲಯದಲ್ಲಿ ಒಂಟಿ ಮಹಿಳೆ ಭೀಕರ ಕೊಲೆ

1

ಹಾಸನ : ಹಾಸನ ನಗರದ ಹೊರವಲಯದ ಗೊರೂರು ರಸ್ತೆಯ ಹನುಮಂತಪುರದಲ್ಲಿ ನಿನ್ನೆ (ಸೆ.2.2021) ಅಪರಾಹ್ನ : ಒಂಟಿ ಮಹಿಳೆಯನ್ನು ಗ್ರಾಮದ ನಿವಾಸಿ ಹನುಮಂತನ ದೇವಸ್ಥಾನದ ಅಣತಿ ದೂರದ ಗೌರಮ್ಮ(55) ರನ್ನು ಮನೆಯ ಬಾಗಿಲಿನಲ್ಲೇ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ .,  ಗುರುವಾರ ಸಂಜೆ ಕಾರಿನಲ್ಲಿ ಬಂದ ಹಂತಕರು (ಸಂಬಧಿಕನೊಬ್ಬ ಆಸ್ತಿ ವಿಚಾರ ಎಂದು ಶಂಕಿಸಲಾಗಿದೆ) ,  ಮಾರಕಾಸ್ತ್ರಗಳಿಂದ ಗೌರಮ್ಮ ಅವರ ಮುಖ/ಕುತ್ತಿಗೆಯ ಮೇಲೆ ಕೊಚ್ಚಿ ಕೊಚ್ಚಿ ಕೊಲೆಗೈದು ಪರಾರಿಯಾಗಿರು ಘಟನೆ ನಡೆದಿದೆ

ಗೌರಮ್ಮ ತನ್ನ ಗಂಡನಿಗೆ ಕಿರಿಯ ಹೆಂಡತಿ , ಕಳೆದ ಹಲವು ವರ್ಷಗಳಿಂದ ಗೌರಮ್ಮ ಒಂಟಿಯಾಗಿ ವಾಸವಾಗಿದ್ದರಂತೆ ,  ಇದನ್ನು ಮೊದಲೇ ಗಮನಿಸಿ ಸಂಚು ರೂಪಿಸಿದ್ದ ಹಂತಕರು, ಕಾರಿನಲ್ಲಿ ಬಂದು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ., . ಸುದ್ದಿ ಇಡೀ ಹಾಸನದಾದ್ಯಂತ ಕಾಡ್ಗಿಚ್ಚಿನಂತೆ ಹರಡಿದೆ ., ಅಷ್ಟು ಕ್ರೂರವಾಗಿ ಕೊಲೆಗೈದವರ ಹುಡುಕಲು ಹಾಸನ ಎಸ್ಪಿ ಆರ್.ಶ್ರೀನಿವಾಸ್‌ಗೌಡ, ಎಎಸ್ಪಿ ಬಿ.ಎನ್. ನಂದಿನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ,  ಅಲ್ಲದೇ ಶ್ವಾನದಳ, ಬೆರಳಚ್ಚು ತಜ್ಞರು ಸಹ ದೌಡಾಯಿಸಿ ಸ್ಥಳದಲ್ಲಿ ಇದ್ದ ರಕ್ತದ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿ  ಸಂಬಂಧ ಹಾಸನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಹಂತಕರ ಹಿಡಿಯಲು ಬಲೆಬೀಸಿದ್ದಾರೆ .,

ಘಟನೆ ಹಿನ್ನೆಲೆ: ಕೊಲೆಯಾಗಿರುವ ಗೌರಮ್ಮ, ಜಮೀನು ವಿವಾದ ವಿಷಯಲ್ಲಿ ಹಂತಕರೊಬ್ಬರು ಕೊಲೆಗೈದಿದ್ದಾರೆ ಎನ್ನಲಾಗಿದೆ : , ಏನಿದ್ದರೂ ತನಿಖೆ ನಂತರವಷ್ಟೇ ತಿಳಿದುಬರಬೇಕಿದೆ


#crimedairyhassan #hassan #hassannews

1 COMMENT

LEAVE A REPLY

Please enter your comment!
Please enter your name here