ಹಾಸನ ಜಿಲ್ಲೆಯಲ್ಲಿರುವ 6 ಲಕ್ಷಕ್ಕೂ ಅಧಿಕ ಜಾನುವಾರುಗಳಿದ್ದು, ಅವುಗಳನ್ನು ಕಂದು ರೋಗ ಸೇರಿದಂತೆ ವಿವಿಧ ರೀತಿಯ ಸೋಂಕುನಿಂದ ರಕ್ಷಿಸಿಕೊಳ್ಳುವ ಜವಾಬ್ದಾರಿ ಪಶು ವೈದ್ಯರ ಮೇಲಿದೆಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ತಿಳಿಸಿದ್ದಾರೆ.
ಜಿಲ್ಲಾಡಾಳಿತ, ಜಿಲ್ಲಾ ಪಂಚಾಯಿತಿ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಾನುವಾರುಗಳಲ್ಲಿ ಕಂದು ರೋಗ ನಿಯಂತ್ರಣ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆಯ ಕುರಿತು ನಗರದ ರಾಮ ಹೋಟೆಲ್ ಸಭಾಂಗಣದಲ್ಲಿಂದು ಏರ್ಪಡಿಸಿದ್ದ ವಿಶೇಷ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಂದು ರೋಗ ನಿಯಂತ್ರಣ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನವಾದರೆ ಮಾತ್ರ ತಡೆಗಟ್ಟಬಹುದು ಎಂದರು.
ಭಾರತ ಪ್ರಪಂಚದಲ್ಲೇ ಅತಿ ಹೆಚ್ಚು ಜಾನುವಾರುಗಳಿದ್ದು ದೇಶದಲ್ಲಿ ಸುಮಾರು 30 ಕೋಟಿ ಜಾನುವಾರುಗಳಿದ್ದು ವ್ಯವಸಾಯ ಹೈನುಗಾರಿಕೆ ಆಧಾರಿತ ದೇಶವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಮುಖ ಆರ್ಥಿಕ ಚಟುವಟಿಕೆಗಳಲೊಂದಾಗಿದ್ದು ರಾಜ್ಯ ಹಾಲು ಉತ್ಪಾದನೆಯಲ್ಲಿ ಮೂಂಚುಣಿಯಲ್ಲಿದೆ ಎಂದು ಅವರು ತಿಳಿಸಿದರು.
ಕಂದು ರೋಗ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಲಸಿಕೆ ಕಾರ್ಯಕ್ರಮ ಅನುಷ್ಠಾನವಾಗಬೇಕು .ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚು ಜಾಗೃತಿ ಮೂಡಿಸಿ ಚುಚ್ಚುಮದ್ದು ನೀಡುವ ಕಾರ್ಯ ಮಾಡಬೇಕು ಎಂದರು.
ಗೋ ಹತ್ಯೆಯನ್ನು ನಿಯಾಮಾನುಸಾರ ತಡೆಗಟ್ಟಲು ಈಗಾಗಲೇ ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ, ಸಾರ್ವಜನಿಕರು ಹಾಗೂ ರೈತರು ಗೋವುಗಳನ್ನು ಸಾಕಲು ಸಾಧ್ಯವಾಗದಿದ್ದರೆ ಗೋಶಾಲೆಗಳಿಗೆ ನೀಡಬೇಕು ಎಂದು ಅವರು ತಿಳಿಸಿದರು.
ಗೋವುಗಳನ್ನು 5 ಕಿ.ಮೀ. ಮೇಲ್ಪಟ್ಟು ಯಾವುದೇ ರೀತಿಯಲ್ಲಿ ಸಾಗಾಣಿಕೆ ಮಾಡುವತಿಲ್ಲ.13 ವರ್ಷ ಮೇಲ್ಪಟ್ಟ ಎಮ್ಮೆ ಮತ್ತು ಕೋಣಗಳ ಮಾತ್ರ ವ್ಯೆದ್ಯರಿಂದ ದೃಡಿಕರಿಸಿ ಮಾಂಸಕ್ಕೆ ಬಳಸಬೇಕು. ಸಾವರ್ಜನಿಕರಿಗೆ ಹಾಗೂ ರೈತರಿಗೆ ಗೋಹತ್ಯೆ ಕಾಯ್ದೆಯ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದು ಆರ್.ಗಿರೀಶ್ ಅವರು ಹೇಳಿದರು.
ಜಿಲ್ಲಾಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಪರಮೇಶ್ ಅವರು ಮಾತನಾಡಿ ಕಂದು ರೋಗವನ್ನು ನಿಯಂತ್ರಿಸಲು ವ್ಯೆದ್ಯರು ಲಸಿಕೆ ನೀಡುವುದನ್ನು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಬೇಕು ಎಂದರು.
ಲಸಿಕಾ ಕಾರ್ಯಕ್ರಮದ ವೇಳೆಯಲ್ಲಿ ಕಂದು ರೋಗದ ಬಗ್ಗೆ ರೈತರಿಗೆ ಮಾಹಿತಿಯನ್ನು ನೀಡಬೇಕು. ಗ್ರಾಮ ಪಂಚಾಯತಿಗಳಿಂದ ಪಶು ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನೂ ನೀಡಲು ಕ್ರಮವಹಿಸಲಾಗುತ್ತಿದೆ ಎಂದರು.
ರೋಗ ತಡೆಗಟ್ಟಲು ಪಶು ವೈದ್ಯರು ಹೆಚ್ಚು ಪಾತ್ರವಹಿಸಬೇಕು, ಗ್ರಾಮೀಣ ಪ್ರದೇಶದಲ್ಲಿ ರೈತರ ಆರ್ಥಿಕತೆ ವೃದಿಸಲು ಸಹಕಾರಿಯಾಗಬೇಕು ಎಂದರು.
ಪಶು ಪಾಲನಾ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದಶಕರಾದ ವೀರಭದ್ರಯ್ಯ ಅವರು ಮಾತನಾಡಿ ಪಶು ವೈದ್ಯರು ಕೋವಿಡ್ ಸಂದರ್ಭದಲ್ಲಿಯೂ ರೈತರಿಗೆ ಸೇವೆಯನ್ನು ನೀಡಿದ್ದಾರೆ. ಕಂದು ರೋಗದ ಲಸಿಕಾ ಸೆ. 6ರಂದು ಪಶು ಇಲಾಖೆ ಸಚಿವರಿಂದ ಚಾಲನೆಗೊಳ್ಳಲಿದೆ ಈ ಅವಧಿಯಲ್ಲಿ ಜವಾಬ್ದಾರಿಯಾಗಿ ನಿರ್ವಹಿಸಬೇಕು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು ಎಂದರು.
ಸಾರ್ವಜನಿಕ ಹಾಗೂ ರೈತರಿಗೆ ಪಶುವೈದ್ಯರು ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆಯೂ ಕೂಡ ಮಾಹಿತಿಯನ್ನು ನೀಡಬೇಕು. ಸರ್ಕಾರದ ಮಹತ್ವಾಕಾಂಕ್ಷಿ ಸಹಾಯವಾಣಿಯಲ್ಲಿ ವೈದ್ಯರು ರೈತರಿಗೆ ಸಹಕಾರ ನೀಡಬೇಕು ನೀಡಬೇಕು.
ಪಶುಪಾಲನಾ ಹಾಗೂ ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕರಾದ ರಮೇಶ್ ಅವರು ಮಾತನಾಡಿ ಜಾನುವಾರು ರಾಷ್ಟ್ರೀಯ ಸಂಪತ್ತು ಗೋವು ಮಾನವ ಜನಾಂಗದ ಎರಡನೇ ತಾಯಿ ಎಂದು ಅವರು ತಿಳಿಸಿದರು
ಕಾಲುಬಾಯಿ ಜ್ವರ ,ಕಂದುರೋಗದಿಂದ ಜಾನುವಾರು ಸಂತತಿಯನ್ನು ಕಾಪಾಡಿಕೊಳ್ಳಬೇಕು ಇದರಿಂದ ಹಲವು ರೀತಿಯಲ್ಲಿ ಈ ರೋಗವನ್ನು ತಡೆಗಟ್ಟಬಹುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 52 ಸಾವಿರ ಕರುಗಳಲಿದ್ದು, ಅವುಗಳನ್ನು ಲಸಿಕೆ ಒಳಪಡಿಸಿದರೆ ಕಂದುರೋಗವನ್ನು ತಡೆಯಬಹುದಾಗಿದೆ ಜಿಲ್ಲೆಯಲ್ಲಿ 41 ಗೋಹತ್ಯೆ ಪ್ರಕರಣಗಳು ವರದಿಯಾಗಿದ್ದು 15 ಪ್ರಕರಣ (ಈIಖ) ದಾಖಲಿಸಿದೆ 135 ಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ ಮಾಡಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಪಶು ವೈದ್ಯರು ಹಾಗೂ ಡೈರಿ ಅಧಿಕಾರಿಗಳು ಹಾಜರಿದ್ದರು.