ಲಾಟರಿಯಲ್ಲಿ ಒಲಿದ ಅಧ್ಯಕ್ಷ ಸ್ಥಾನ

0

ಲಾಟರಿಯಲ್ಲಿ ಒಲಿದ ಅಧ್ಯಕ್ಷ ಸ್ಥಾನ.

ಸಕಲೇಶಪುರ : ತಾಲ್ಲೂಕಿನ ಆನೆ ಮಹಲ್ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ತಿಮ್ಮಯ್ಯ ಉಪಾಧ್ಯಕ್ಷ ಸ್ಥಾನ ಕ್ಕೆ ಸಹರಾ ಸಲೀಂ ಆಯ್ಕೆ ಯಾಗಿದ್ದಾರೆ.
ಈ ಹಿಂದೆ ಅದ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಗಳಿಗೆ ಇಂದು ಚುನಾವಣಾ ಅಧಿಕಾರಿಗಳಾಗಿದ್ದ ತಾಲ್ಲೂಕು ಪಂಚಾಯತ್ ಇಓ ಹರೀಶ್ ರವರ ಸಮ್ಮುಖದಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ರ ಆಯ್ಕೆ ಸಂದರ್ಭದಲ್ಲಿ 10 ಜನ ಪಂಚಾಯ್ತಿ ಸದಸ್ಯರ ಪೈಕಿ ತಿಮ್ಮಯ್ಯ ಮತ್ತು ಪ್ರತಿಸ್ಪರ್ಧಿ ಹಸೇನರ್ ಗೆ ತಲಾ 5-5 ಮತಗಳು ಚಲಾವಣೆಯಾಯಿತು. ನಂತರ ಚುನಾವಣೆ ಅಧಿಕಾರಿಗಳು ಲಾಟರಿ ಎತ್ತುವ ಮೂಲಕ ತಿಮ್ಮಯ್ಯ ಅವರನ್ನು ಅಧ್ಯಕ್ಷರಾಗಿ ಸಹಾರ ಸಲೀಂ ಅವರನ್ನು ಉಪಾಧ್ಯಕ್ಷೆ ಯಾಗಿ ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಪಿಡಿಓ ಚಂದ್ರು ಕಾರ್ಯದರ್ಶಿ ವಿರೇಶ್ ಮತ್ತು ಸದಸ್ಯರುಗಳು ಹಾಜರಿದ್ದರು.

     – ಬೈರಪ್ಪ ಸಕಲೈಶ್ವರ್

LEAVE A REPLY

Please enter your comment!
Please enter your name here