ಖಾಲಿ ಇರುವ / ತೆರವಾದ ಗ್ರಾ.ಪಂ ಸದಸ್ಯ ಸ್ಥಾನಕ್ಕೆ ಚುನಾವಣೆ : 27ಕ್ಕೆ ಮತದಾನ : 17ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ : ಮತ ಎಣಿಕೆ ಡಿ.30

0

ಹಾಸನ ಜಿಲ್ಲೆಯಲ್ಲಿ ವಿವಿಧ ಕಾರಣ ಗಳಿಂದ ಖಾಲಿ ಇರುವ ಹಾಗೂ ತೆರವಾದ ಗ್ರಾಮ ಪಂಚಾಯಿತಿಯ ಸದಸ್ಯ ಸ್ಥಾನಗಳಿಗೆ ಮಾಹಿತಿ
• ಡಿ.27ರಂದು ಉಪಚುನಾವಣೆ
• ಡಿ.17 ರಂದು ನಾಮಪತ್ರ ಸಲ್ಲಿಸಲು ಕೊನೆ ದಿನ
• ಉಮೇದುವಾರಿಕೆ ಹಿಂಪಡೆಯಲು 20ರಂದು ಕಡೆಯ ದಿನ
• 27 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ
• ಮತ ಎಣಿಕೆಯು ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಡಿ.30
• ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾನ ಮತ್ತು ಮತ ಎಣಿಕೆ ದಿನದಂದು ಮದ್ಯಪಾನ ಮಾರಾಟ ಮತ್ತು ಸಾಗಣೆಯನ್ನು ನಿಷೇಧ
• ಚುನಾವಣೆ ಹಿನ್ನೆಲೆ ಆಲೂರು, ಅರಕಲಗೂಡು, ಅರಸೀಕೆರೆ, ಚನ್ನರಾಯಪಟ್ಟಣ , ಹಾಸನ ತಾಲ್ಲೂಕು ಕೇಂದ್ರಗಳಲ್ಲಿರುವ ಮದ್ಯದಂಗಡಿಗಳ ಅಂದು ಮುಚ್ಚಲು ಜಿಲ್ಲಾಧಿಕಾರಿ ಆದೇಶ
• ಜಿಲ್ಲೆಯಲ್ಲಿ ಒಟ್ಟು 8 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ :

• ಆಲೂರು ತಾಲ್ಲೂಕು ಕಣತೂರು ಗ್ರಾ.ಪಂ
• ಅರಕಲಗೂಡು ತಾಲ್ಲೂಕು ಯಲಗತವಳ್ಳಿ ಪಂಚಾಯಿತಿ
• ಕಾಳೇನಹಳ್ಳಿ ಗ್ರಾ.ಪಂ ವ್ಯಾಪ್ತಿ
• ಚನ್ನರಾಯಪಟ್ಟಣ ತಾಲ್ಲೂಕು ಬಾಗೂರು ಪಂಚಾಯಿತಿ
• ಗೌಡಗೆರೆ ಗ್ರಾಮ ಪಂಚಾಯಿತಿ
• ಹಾಸನ ತಾಲೂಕು ಕೌಶಿಕ ಪಂಚಾಯಿತಿಯ
• ಉಗನೆ ಮತ್ತು ಇಬ್ದಾಣೆಯ ಗ್ರಾಮ. ಪಂ.

ಅವಧಿ ಮುಗಿದ ಪಂಚಾಯ್ತಿ ಇಂತಿದೆ : ಆಲೂರು ತಾಲ್ಲೂಕಿನ ಹಂಚೂರು ಗ್ರಾಮ ಪಂಚಾಯಿತಿಯ 11 ಸದಸ್ಯ ಸ್ಥಾನ, ಅರಕಲಗೂಡು ತಾಲ್ಲೂಕು ಕೊಣನೂರು ಗ್ರಾಮ ಪಂಚಾಯಿತಿಯ 21 ಸ್ಥಾನ, ಅರಸೀಕೆರೆ ತಾಲ್ಲೂಕು ಬಾಣಾವರ  ಗ್ರಾಮ ಪಂಚಾಯಿತಿಯ 22 ಸ್ಥಾನ, ಚನ್ನರಾಯಪಟ್ಟಣ ತಾಲ್ಲೂಕು ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯ 17 ಸ್ಥಾನ, ಹಾಸನ ತಾಲ್ಲೂಕು ಅಂಬುಗ ಗ್ರಾಮ ಪಂಚಾಯಿತಿಯ 8 ಸ್ಥಾನ, ಅಂಕಪುರ ಗ್ರಾಮ ಪಂಚಾಯಿತಿಯ 14, ಚನ್ನಂಗಿಹಳ್ಳಿ ಗ್ರಾಮ ಪಂಚಾಯಿತಿಯ 13 ಮತ್ತು ಕಟ್ಟಾಯ ಗ್ರಾಮ ಪಂಚಾಯಿತಿಯ 15 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ

ಅಭ್ಯರ್ಥಿಗಳು ಸಿದ್ದತೆ ಮಾಡಿಕೊಳ್ಳಬೇಕಾಗಿ ಈ ಮೂಲಕ ಕರೆ ನೀಡಲಾಗಿದೆ.

LEAVE A REPLY

Please enter your comment!
Please enter your name here