ಆನೆಮಹಲ್ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷ ತಿಮ್ಮಯ್ಯ

0

ಪಂಚಾಯತಿ ಅಭಿವೃದ್ಧಿ ಮಾಡುವುದೇ ನನ್ನ ಗುರಿ : ತಿಮ್ಮಯ್ಯ.

ಸಕಲೇಶಪುರ: ಆನೇಮಹಲ್ ಗ್ರಾಮ ಪಂಚಾಯತಿ ಅಭಿವೃದ್ಧಿ ಮಾಡುವುದೇ ನನ್ನ ಗುರಿ ಎಂದು ನೂತನ ಗ್ರಾಮ ಪಂಚಾಯತಿ ಅಧ್ಯಕ್ಷ ತಿಮ್ಮಯ್ಯ ಹೇಳಿದರು.

ಸಕಲೇಶಪುರ ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಆನೇಮಹಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ಸಮಸ್ಯೆಗಳಿವೆ. ಜಲಜೀವನ್ ಮಿಷನ್ ಯೋಜನೆ ಯಲ್ಲಿ ಕುಡಿಯುವ ನಿರಿನ ಕೆಲಸ ಆಗುತ್ತಿದೆ. ರಸ್ತೆ. ಕುಡಿಯುವ ನೀರು. ವಿದ್ಯತ್. ವಸತಿ ಮನೆಗಳ ಮೂಲಭೂತ ಸೌಕರ್ಯ. ಚರಂಡಿ ಶುಚಿತ್ವ ಮುಂತಾದ ಹಳ್ಳಿಗಳ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಾಗು ನಮ್ಮ ಗ್ರಾಮ ಪಂಚಾಯತಿ ಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಿಕೊಡಲು ಒತ್ತಾಯಿಸಿದರು. ಶಾಸಕರಾದ ಹೆಚ್.ಕೆ. ಕುಮಾರ ಸ್ವಾಮಿ ಯವರೂ ಕೂಡ ಅನುದಾನ ಬಿಡುಗಡೆಗೆ ಒತ್ತಾಯ ಮಾಡಲು ಮನವಿ ಮಾಡಿದರು. ನನ್ನ ಗೆಲುವಿಗೆ ಸಹಕರಿಸಿದ ಗ್ರಾಮ ಪಂಚಾಯತಿ ಸದಸ್ಯರಿಗೆ. ಜೆಡಿಎಸ್ . ಎಸ್ ಡಿ ಪಿ ಐ . ಕಾಂಗ್ರೇಸ್. ಮತ್ತು ಬಿಎಸ್ ಪಿ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು. ಆನೆಮಹಲ್ ಗ್ರಾಮ ಪಂಚಾಯತಿ ಎಲ್ಲಾ ಹತ್ತೂ ಜನ ಸದಸ್ಯರಿಗೂ ತಾರತಮ್ಯ ಮಾಡದೆ ಸಮಾನವಾಗಿ ಕೆಲಸ ಮಾಡುವುದಾಗಿ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ವೀರಭದ್ರ. ಕಾಂಗ್ರೇಸ್ ಅಸಂಗಟಿತ ಕಾರ್ಮಿಕರ ಸಂಘದ ಮುಖಂಡ ಕಲ್ಗಣೆ ಗಿರೀಶ್. ಗ್ರಾ.ಪಂ.ಸದಸ್ಯ ಮಹಮದ್ ಅಶ್ರಫ್. ಬೇಬಿ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here