ಸ್ಥಳೀಯ ಸಂಸ್ಥೆಗಳು ಜನಪ್ರತಿನಿಧಿಗಳಿಂದ ನಡೆಯಬೇಕೇ ವಿನಹ ಸರ್ಕಾರದ ಆಡಳಿತಾಧಿಕಾರಿಗಳಿಂದಲ್ಲ

0

ಸ್ಥಳೀಯ ಸಂಸ್ಥೆಗಳು ಜನಪ್ರತಿನಿಧಿಗಳಿಂದ ನಡೆಯಬೇಕೇ ವಿನಹ ಸರ್ಕಾರದ ಆಡಳಿತಾಧಿಕಾರಿಗಳಿಂದಲ್ಲ. ಎರಡು ವರ್ಷಗಳಿಂದ ನಗರಸಭೆ ಆಡಳಿತವನ್ನು ರಚನೆ ಮಾಡದೇ ಇರುವುದು ಗಂಭೀರವಾದ ವಿಷಯ ಎಂದು ರಾಜ್ಯ ಉಚ್ಚ ನ್ಯಾಯಾಲಯವು ಇಂದು ಕಳವಳ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಶ್ರೀಮತಿ ಬಿ.ವಿ.ನಾಗರತ್ನ ಮತ್ತು ಶ್ರೀ ಎನ್.ಎಸ್.ಸಂಜಯ್ ಗೌಡ ರವರ ಪೀಠವು ರಾಜ್ಯ ಸರ್ಕಾರವು ಅಕ್ಟೋಬರ್ 8 ರಂದು ಹೊರಡಿಸಿದ್ದ ನಗರಸಭಾ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಅಧಿಸೂಚನೆಗೆ ಏಕಸದಸ್ಯ ನ್ಯಾಯಮೂರ್ತಿಯವರ ಪೀಠ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿದೆ.

ರಾಜ್ಯ ಸರ್ಕಾರವು 08-10-2020 ರಂದು ಹೊರಡಿಸಿದ್ದ ನಗರಸಭಾ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಅಧಿಸೂಚನೆಯಂತೆ ನವೆಂಬರ್ 2ನೇ ತಾರೀಖಿನೊಳಗೆ ಚುನಾವಣೆ ನಡೆಸುವಂತೆ ಆದೇಶ ನೀಡಿದೆ.

ಹಾಸನ, ಅರಸೀಕೆರೆ, ಹರಿಹರ, ಕೊಪ್ಪಳ ಮತ್ತು ಶಿಡ್ಲಘಟ್ಟ ನಗರಸಭೆಗಳಿಗೆ ಸಲ್ಲಿಕೆಯಾಗಿರುವ ರಿಟ್ ಪಿಟಿಷನ್ ಮೇಲೆ ವಾದ ಪ್ರತಿವಾದ ನಡೆದು, ಅದರ ತೀರ್ಪು ಬರುವ ವರಗೆ ಈ ನಗರಸಭೆಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಅಕ್ಟೋಬರ್ 8 ರ ಅಧಿಸೂಚನೆಯಂತೆ ಇರಲಿದ್ದು, ನ್ಯಾಯಾಲಯದ ತೀರ್ಮಾನ ಬಂದ ಮೇಲೆ ಅದರ ಪ್ರಕಾರ ಮೀಸಲಾತಿ ಜಾರಿಯಾಗಲಿದೆ.

LEAVE A REPLY

Please enter your comment!
Please enter your name here