ಹಣ ಕೊಟ್ಟ ಮೇಲೇ ಕೇಳಲೆ ಬಾರದೇನೋ ಎಂಬಂತಿದೆ ಇಂದಿನ ಪರಿಸ್ಥಿತಿ , ಉದ್ಯಮಿ ಸಾವಿಗೆ ವಿಷಾದ ವ್ಯಕ್ತಪಡಿಸಿದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ.ಬಾಲಕೃಷ್ಣ

0

ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಕೃಷ್ಣೇಗೌಡರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಪೊಲೀಸ್ ಇಲಾಖೆ ಜರುರಾಗಿ ಹಿಡಿದು ಕಾನೂನು ರೀತಿ ತಕ್ಕ ಕ್ರಮವನ್ನು ತೆಗೆದುಕೊಳ್ಳಬೇಕು. ಇನ್ನು ಮುಂದೆ ಇಂತಹ ಪ್ರಕರಣಗಳು ಆಗದ ರೀತಿ ಕ್ರಮವನ್ನು ಕೂಡ ತೆಗೆದುಕೊಳ್ಳುವಂತದಾಗಲಿ. ಗೃಹ ಸಚಿವರಿಗೆ, ಸರಕಾರಕ್ಕೆ ಹೇಳುವುದು ಏನೆಂದರೇ ಇಂತಹ ಪ್ರಕರಣ ಆಗದಂತೆ ಇಲಾಖೆ ಹೆಚ್ಚಿನ ನಿಗವನ್ನು ಗುಪ್ತದಳ ಹಾದಿಯಲ್ಲಿ ವಹಿಸುವಂತೆ ಸರಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.

ಹಣಕಾಸು ವ್ಯವಹಾರ ಎಂದು ಮಾಧ್ಯಮಗಳಲ್ಲಿ ಹೇಳಲಾಗಿದ್ದು, ಹಣ ಕೊಟ್ಟವರು ವಾಪಸ್ ಕೇಳಲೆ ಬಾರು ಎನ್ನುವ ಸ್ಥಿತಿ ಬಂದಿದೆ. ಕೃಷ್ಣೇಗೌಡರು ಕೂಡ ಯಾವಾಗಲು ಜನ ಮಧ್ಯೆ ಬೆಳೆದಂತಹ ವ್ಯಕ್ತಿ. ಕೃಷ್ಣೇಗೌಡರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

LEAVE A REPLY

Please enter your comment!
Please enter your name here