ಹಸಿರು ಪಟಾಕಿ ಬಳಕೆಗೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್, ಷರತ್ತುಗಳು ಏನು?

0

ಹಸಿರು ಪಟಾಕಿ ಎಂದರೆ ಸಾಮಾನ್ಯ ಪಟಾಕಿಗಿಂತ ಕಡಿಮೆ ಮಾಲಿನ್ಯ ಮಾಡುವ ಪಟಾಕಿಯಾಗಿದೆ. ಇವುಗಳನ್ನು ನೀರಿ ಲ್ಯಾಬ್ ಫಾರ್ಮುಲಾದ ಪ್ರಕಾರ ತಯಾರಿಸಲಾಗುತ್ತದೆ. ಇದಕ್ಕೆ ಪೆಟ್ರೋಲಿಯಂ ಆ್ಯಂಡ್ ಎಕ್ಸ್ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್ ಪ್ರಮಾಣೀಕರಣ ನೀಡಿದೆ. ಇದನ್ನು ಗ್ರಾಹಕರು ಸುಲಭವಾಗಿ ಪತ್ತೆ ಹಚ್ಚಬಹುದು. ಹೇಗೆ ಇಲ್ಲಿದೆ ಮಾಹಿತಿ.

ಹಸಿರು ಪಟಾಕಿ ಬಳಕೆಗೆ ಹೈಕೋರ್ಟ್‌ ಷರತ್ತುಬದ್ಧ ಅನುಮತಿ ನೀಡಿದೆ. ಪೊಲೀಸರು ಮಳಿಗೆಗೆ ಭೇಟಿ ನೀಡಿ ಹಸಿರು ಚಿಹ್ನೆ, ನೀರಿ ಸಂಸ್ಥೆ ದೃಢೀಕರಣ ಇರುವ ಹಸಿರು ಪಟಾಕಿ ಮಾತ್ರ ಮಾರಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸರಕಾರ,‌ ಪೊಲೀಸರು, ಸ್ಥಳೀಯಾಡಳಿತಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.‌

ಅಲ್ಲದೇ ಹಸಿರು ಪಟಾಕಿ ಬಳಕೆ ಹಾಗೂ ಮಾರಾಟದ ನಿಯಮದ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು.‌ ಹಸಿರು ಪಟಾಕಿ ಜೊತೆಗೆ ಬೇರೆ ಪಟಾಕಿಗಳ ಬಳಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ.‌ ಆದೇಶ ಜಾರಿಗೊಳಿಸಿದ ವರದಿಯನ್ನು ಸಲ್ಲಿಸುವಂತೆ ಈ ವೇಳೆ ಸರಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ.
ಇನ್ನು ಇದೆ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಗೂ ಕೆಲವೊಂದು ನಿರ್ದೇಶನ ನೀಡಿರುವ ಹೈಕೋರ್ಟ್‌ ಶಬ್ಧ ಮಾಲಿನ್ಯ ಹಾಗೂ ವಾಯುಮಾಲಿನ್ಯ ಅಳೆಯುವಂತೆ ತಿಳಿಸಿದೆ. ಹಸಿರು ಪಟಾಕಿ ನಿಷೇಧಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಗೆ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್‌ ಈ ರೀತಿಯ ಸೂಚನೆ ನೀಡಿದೆ.

ಹಸಿರು ಪಟಾಕಿ ಪತ್ತೆ ಹಚ್ಚುವುದು ಹೇಗೆ?
ಹಸಿರು ಪಟಾಕಿಯನ್ನು ನೀರಿ ಲ್ಯಾಬ್ ಫಾರ್ಮುಲಾದ ಪ್ರಕಾರ ತಯಾರಿಸಲಾಗುತ್ತದೆ. ಇದಕ್ಕೆ ಪೆಟ್ರೋಲಿಯಂ ಆ್ಯಂಡ್ ಎಕ್ಸ್ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್ ಪ್ರಮಾಣೀಕರಣ ನೀಡಿದೆ. ಗ್ರಾಹಕರು ಹಸಿರು ಪಟಾಕಿ ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಹಸಿರು ಪಟಾಕಿ ಬಾಕ್ಸ್ ಮೇಲೆ‌ ನೀರಿ ಮತ್ತು ಪೆಸ್ಕೊ ಲಾಂಛನ ಇರುತ್ತದೆ.
ನಿಮ್ಮ ಮೊಬೈಲ್ನಿಂದ ಪಟಾಕಿ ಬಾಕ್ಸ್ ಮೇಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಪರೀಕ್ಷಿಸಬಹುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಹಸಿರು ಪಟಾಕಿ ಎಂದರೆ ಸಾಮಾನ್ಯ ಪಟಾಕಿಗಿಂತ ಕಡಿಮೆ ಮಾಲಿನ್ಯ ಮಾಡುವ ಪಟಾಕಿಯಾಗಿದೆ.

LEAVE A REPLY

Please enter your comment!
Please enter your name here