ಹಾರಂಗಿ ಬಲದಂಡೆ ನಾಲೆಯಲ್ಲಿ ಕಾಲುಜಾರಿ ಬಿದ್ದಿದ್ದು ಮಗುವಿನ ಶೋಧ ಕಾರ್ಯವನ್ನು ಅಗ್ನಿಶಾಮಕ ದಳದ ತಂಡ ನಡೆಸಿತು

0

ಹಾಸನ : ಅರಕಲಗೂಡು ತಾಲ್ಲೋಕು ರಾಮನಾಥಪುರ ಹೋಬಳಿ ಮಧುರನಹಳ್ಳಿ ಗ್ರಾಮದ ವಾಸಿ ರೇವಣ್ಣ ಹಾಗೂ ಭಾಗ್ಯರವರ ದಂಪತಿಗಳ ಮಗಳು ಸುಪ್ರೀತ ಎಂಬ 5 ವರ್ಷದ ಹೆಣ್ಣು ಮಗಳು ಇಂದು ಕರ್ನಾಟಕ ಬಂದ್ ಆದ ಕಾರಣ ಶಾಲೆಗೆ ರಜೆ ಇದ್ದದ್ದರಿಂದ ಮಕ್ಕಳೊಂದಿಗೆ ಬೆಳಿಗ್ಗೆ 9-30ರ ಸಮಯದಲ್ಲಿ ಆಟವಾಡುವಾಗ ಗ್ರಾಮದ ಪಕ್ಕದಲ್ಲಿರುವ ಹಾರಂಗಿ ಬಲದಂಡೆ ನಾಲೆಯಲ್ಲಿ ಕಾಲುಜಾರಿ ಬಿದ್ದಿದ್ದು ಮಗುವಿನ ಶೋಧ ಕಾರ್ಯವನ್ನು ಅರಕಲಗೂಡು ಅಗ್ನಿಶಾಮಕ ದಳದ ತಂಡ ನಡೆಸಿತು ಸುಮಾರು 6 ಕಿಲೋಮೀಟರ್ ಶೋಧ ಕಾರ್ಯನಡೆಸಿದರು ಮಗುವಿನ ಶವ ಪತ್ತೆಯಾಗಿರುವುದಿಲ್ಲ ಗ್ರಾಮಸ್ಥರುಎಡೆಬಿಡದೇ ಶೋಧ ಮುಂದುವರೆಸಿರುತ್ತಾರೆ

ಈ ಸಂಧರ್ಭದಲ್ಲಿ ತಾಲ್ಲೋಕು ಕಛೇರಿಯ ಶಿರೆಸ್ತೇದಾರರಾದ ಸಿ.ಸ್ವಾಮಿ . ಉಪತಹಶೀಲ್ದಾರರಾದ ರವಿ ಗ್ರಾಮ ಆಡಳಿತ ಅಧಿಕಾರಿ ಪ್ರದೀಪ್ ಕಾಂಬ್ಳೆ ಹಾಗೂ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

LEAVE A REPLY

Please enter your comment!
Please enter your name here