ದೇವರು ಎಷ್ಟು ದಿನ ನಮಗೆ ಆಯಸ್ಸು ಕೊಟ್ಟಿದ್ದಾರೋ ಗೊತ್ತಿಲ್ಲ , ಇರೋವರೆಗೂ ಸಂತೋಷದಿಂದ ಸರ್ವ ಧರ್ಮ ಗೌರವಿಸುತ್ತ ದೇವರ ಪ್ರೀತಿಗೆ ಪಾತ್ರರಾಗೋಣ ‘ – ಯು.ಟಿ.ಖಾದರ್ ( ಶಾಸಕರು ಉಳ್ಳಾಲ ವಿಧಾನಸಭಾ ಕ್ಷೇತ್ರ ) ಹಾಸನ : ನಗರದ ಎಂ ಹೆಚ್ ಹಾಲ್ನಲ್ಲಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಅಭಿನಂದನೆ ಸ್ವೇಕರಿಸಿ ಮಾತನಾಡಿದ ಅವರು, ಸಭಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ. ನಾನು ರಾಜಕೀಯ ಪಕ್ಷಕ್ಕೆ ರಾಜಿನಾಮೆ ನೀಡಿ ಈ ಸ್ಥಾನವನ್ನು ಅಲಂಕರಿಸಿದ್ದೇನೆ.
ಸಂವಿಧಾನವೆ ನನ್ನ ಧರ್ಮ, ಸಂವಿಧಾನವೇ ನನ್ನ ಪಕ್ಷ ಇದಕ್ಕೆ ಅನುಗುಣವಾಗಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರು. ಸಂಸದೀಯ ವ್ಯವಸ್ಥೆ ಬಲಿಷ್ಠ ಗೊಂಡಾಗ ಮಾತ್ರ, ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ. ಸಂವಿಧಾನದ ನಿಯಮಗಳು ಬಲಿಷ್ಟಗೊಳ್ಳಬೇಕಾದರೆ, ಸಂಸದೀಯ ನಿಯಮಗಳಲ್ಲಿ ಅಚ್ಚುಕಟ್ಟಾಗಿ ಕೆಲಸಗಳು ನಡೆಯಬೇಕು. ಭಾರತದ ಸರ್ವಜನರು ಸಂತೋಷದಿಂದ ನೆಮ್ಮದಿಯಿಂದ ಜೀವನ ಮಾಡಬೇಕಾದರೆ, ಸಂವಿಧಾನ ಬದ್ಧ ಸರ್ಕಾರ ಬಂದಾಗ ಮಾತ್ರ ಸಾಧ್ಯವಾಗುತ್ತದೆ. ಯಾರೇ ಅಧಿಕಾರಕ್ಕೆ ಬಂದರೂ ಅವರು ಸಂವಿಧಾನದ ಮಾರ್ಗದರ್ಶನದಲ್ಲಿ ಅಧಿಕಾರ ನಡೆಸಿದರೆ.
ಭಾರತ ಸದೃಢವಾಗುತ್ತದೆ ಹಾಗೂ ಈ ದೇಶದ ನಾಗರಿಕರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು. ಭಾರತ ದೇಶದ ಶ್ರೀಸಾಮಾನ್ಯ, ರೈತ ಕೂಲಿಕಾರ್ಮಿಕ, ಮಹಿಳೆಯರು ಅಲ್ಪಸಂಖ್ಯಾತರು, ಶ್ರಮಿಕರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಿರ್ಭಯವಾಗಿ ಓಡಾಡುವಂತಹ ಪರಿಸ್ಥಿತಿ ಇದೆ ಎಂದರೆ ಅದು, ಈ ದೇಶದ ಶಾಸಕರು ಸಂಸದರು ರಾಜ್ಯಪಾಲ, ಮುಖ್ಯಮಂತ್ರಿ ಪ್ರಧಾನಮಂತ್ರಿ ಇಂದು ಅಲ್ಲ, ದೇಶದ ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದರೆ ಅದು ನಮ್ಮ ಸಂವಿಧಾನದಿಂದ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಂತಹ ಸಂವಿಧಾನದಿಂದ ಎಂದು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಗೂ ಅನ್ಯಾಯವಾದಾಗ ಅವನು ಹಕ್ಕು ಕಳೆದುಕೊಂಡಾಗ ಆತ ಭಾರತದ ಸಂವಿಧಾನ ವನ್ನು ಎತ್ತಿ ಹಿಡಿಯುತ್ತಾನೆ ಎಂದು ಹೇಳಿದರು. ಸಂವಿಧಾನಕ್ಕೆ ಪೂರಕವಾದಂತಹ ಆಡಳಿತವರ್ಗ ಇದ್ದಾಗ ಮಾತ್ರ ದೇಶದಲ್ಲಿ ಪ್ರಗತಿ ಸಾಧ್ಯ, ನಮ್ಮ ನಿಮ್ಮ ಜವಾಬ್ದಾರಿ ಅಂದರೆ ಸಂವಿಧಾನಬದ್ಧವಾಗಿ ನಡೆದುಕೊಳ್ಳುವುದು, ಸಂವಿಧಾನದ ಹಕ್ಕನ್ನು ಪಡೆದುಕೊಳ್ಳುವುದು, ಸಂವಿಧಾನವನ್ನು ಉಳಿಸುವುದು ಎಂದರು. ನಾನೇಕೆ ಸಂವಿಧಾನವನ್ನು ಬಲಿಷ್ಟ ಗೊಳಿಸಬೇಕು ಎಂದು ಹೇಳುತ್ತಿದ್ದೇನೆ ಎಂದರೆ, ನಾವು ಬದುಕಿರುವವರೆಗೆ ಮಾತ್ರ ಈ ಭೂಮಿಯ ಮೇಲೆ ಸಮಾಜದ ಮೇಲೆ ನಮ್ಮ ಹಕ್ಕು ಇರುವುದಿಲ್ಲ, ಮುಂದಿನ ಪೀಳಿಗೆಗೆ ಈ ದೇಶ ಉಳಿಯಬೇಕು. ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡಿಕೊಡುವ ಜವಾಬ್ದಾರಿ ನಮ್ಮದಾಗಿರುತ್ತದೆ ಎಂದರು.
ಒಂದು ಮಗು ಜನ್ಮತಾಳುವ ಸಂದರ್ಭದಲ್ಲಿ ಅದು ಅಳುತ್ತದೆ, ಕಾರಣ ಅದಕ್ಕೆ ಭಾಷೆ ತಿಳಿದಿರುವುದಿಲ್ಲ, ಮಗು ಬೆಳದಂತೆ, ಒಂದು ಭಾಷೆಗೆ ಒಂದು ಧರ್ಮಕ್ಕೆ ಸೀಮಿತವಾಗುತ್ತದೆ. ಒಬ್ಬ ಸಂಕಷ್ಟದಲ್ಲಿರುವಾಗ ಅವನು ಹೃದಯ ಮಿಡಿಯುತ್ತದೆ, ಸಂಕಟಕ್ಕೆ ಸ್ಪಂದಿಸುತ್ತದೆ ಇದೆ ಧರ್ಮಗಳು ಸಾರ, ಮಾನವೀಯತೆಯ, ಕನಿಕರದ ಮೂಲಕ ನಾವು ನಾಗರಿಕರಾಗಿ ನಡೆದುಕೊಂಡರೆ ಉತ್ತಮ ಸಮಾಜ ನಿರ್ಮಾಣ ವಾಗುತ್ತದೆ, ಸೌಹಾರ್ದ ಸಮಾಜವನ್ನು ಕಟ್ಟಲು ನಾವೆಲ್ಲರೂ ಶ್ರಮಿಸಬೇಕು ಎಂದರು.
ಅರಸೀಕೆರೆ ಕ್ಷೇತ್ರದ ಕೆ.ಎಂ. ಶಾಸಕ ಶಿವಲಿಂಗೇಗೌಡ ಮಾತನಾಡಿ, ಸ್ವತಂತ್ರ ಭಾರತದ ಇತಿಹಾಸದಲ್ಲಿ 75 ವರ್ಷಗಳ ಕಾಲ ಮಾಡದ ಕೆಲಸವನ್ನು ನಮ್ಮ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಅಲ್ಪಸಂಖ್ಯಾತ ವ್ಯಕ್ತಿಯನ್ನು ಸ್ಪೀಕರ್ ನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು. ಅಭಿನಂದನಾ ಸಮಾರಂಭದಲ್ಲಿ ಶ್ರೀ ವೇನಹಳ್ಳಿ ಮಠದ ಸ್ವಾಮಿಜಿ ಸಂಗಮೇಶ ಸ್ವಾಮೀಜಿ, ಫಾತಿಮಾಪುರದ ಕಥೋಲಿಕ ಕ್ರೈಸ್ತ ಚರ್ಚ್ನ ಪೂಜ್ಯಗುರುಗಳಾದ ರೊನಾಲ್ಡ್ ಕರ್ಡೋಜ಼ಾ ಅವರು ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನುಡಿದರು.
ಇದೆ ವೇಳೆ ಕೆಪಿಸಿಸಿ ಸದಸ್ಯರಾದ ಮಹಮ್ಮದ್ ಆರೀಪ್, ಕಾಂಗ್ರೆಸ್ ಮುಖಂಡರಾದ ಹೆಚ್.ಕೆ. ಜವರೇಗೌಡ, ಹೆಚ್.ಕೆ. ಮಹೇಶ್, ಹಾಸನ ವಿಧಾನ ಸಭಾ ಪರಾಜಿತ ಅಭ್ಯರ್ಥಿ ಬನವಾಸೆ ರಂಗಸ್ವಾಮಿ, ಅಬ್ದೂಲ್ ಕಹಿಂ, ಅಶ್ರು ಆಸೀಪ್, ಶ್ರೇಯಾಸ್ ಪಟೇಲ್, ಮುರುಳಿ ಮೋಹನ್, ಡಾ. ಅಬ್ದೂಲ್ ಬಶೀರ್, ರಾಜಶೇಖರ್, ಅಮ್ಜಾದ್ ಖಾನ್, ದಿಲಿಪ್, ದೀಪಕ್, ಸಲೀಂ ಕೊಲ್ಲಹಳ್ಳಿ, ಜುಬೇರ್ ಅಹಮದ್, ಅಬ್ದೂಲ್ ರಶೀದ್, ನಾಸಿರ್ ಹಜರತ್, ಹೆಚ್.ಕೆ. ಸಂದೇಶ್, ರೊನಾಲ್ಡ್ ಕಾರಡೋಜಾ, ಜುಬೇರ್ ಸಹಮದ್, ನಾಸೀರ್ ಹಜರತ್, ಜಿ.ಓ. ಮಹಾಂತಪ್ಪ ಇತರರು ಉಪಸ್ಥಿತರಿದ್ದರು.