ಹಾಸನದ ಪ್ರವಾಸಿ ಮಂದಿರದಲ್ಲಿ ಡೆತ್ ನೋಟ್ ಬರೆದು ಕೆ.ಎಸ್.ಆರ್.ಪಿ. ಮುಖ್ಯ ಪೇದೆ ಆತ್ಮಹತ್ಯೆ

0

ಹಾಸನ: ನಗರದ ಎನ್.ಆರ್.ವೃತ್ತದ ಬಳಿ ಇರುವ ಪ್ರವಾಸಿ ಮಂದಿರದ ಕಟ್ಟಡದ ಹಿಂಬಾಗ ಕೆ.ಎಸ್.ಆರ್.ಪಿ.ಮುಖ್ಯ ಪೇದೆ ಓರ್ವ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಸಮಯದಲ್ಲಿ ಹಾಸನ ನಗರದ ಪ್ರವಾಸಿ ಮಂದಿರ ಕಟ್ಟಡ ಹಿಂಬಾಗ ಹಾಸನ ೧೧ನೇ ಕೆ.ಎಸ್.ಆರ್.ಪಿ ಘಟಕ.ವಿಭಾಗದ ಮುಖ್ಯಪೇದೆ ರಾಜೇಂದ್ರ (೫೬) ವರ್ಷ ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ದುರ್ಧೇವಿ.

ಕಟ್ಟಡದ ಹಿಂಬಾಗದಲ್ಲಿ ಹಾದು ಹೋಗಿರುವ ಟೆಲಿಪೋನ್ ಕೇಬಲ್ ನಲ್ಲಿ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಕೇಬಲ್ ವೈರನ್ ಕುತ್ತಿಗೆಗೆ ಬಿಗಿದುಕೊಳ್ಳಲು ಹೋಗಿ ನಂತರ ಕೇಬಲ್ ತುಂಡಾದ ಪರಿಣಾಮ ಕೆಳಗೆ ಆತ ಬಿದ್ದ ಪರಿಣಾಮ ಅಲ್ಲಿನ ಸಿಮೆಂಟ್ ಕಟ್ಟೆಗೆ ತಲೆ ಮೇಲೆ ಪೆಟ್ಟು ಬಿದ್ದು ರಕ್ತ ಸೋರಿಕೆ ಆಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸುಮಾರು ೨ ವರ್ಷಗಳಿಂದ ಹಾಸನ ಕೆ.ಎಸ್.ಆರ್.ಪಿ. ಘಟಕದಲ್ಲಿ ಕೆಲಸ ಮಾಡುತ್ತಿದ್ದರುವುದಾಗಿ, ಆದಕ್ಕೂ ಮುಂಚೆ ರಾಜ್ಯ ಗುಪ್ತಚರ ವಿಭಾಗ ಬೆಂಗಳೂರು ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದುದಾಗಿ ತಿಳಿದು ಬಂದಿದೆ. ೧೧ನೇ ಕೆ.ಎಸ್.ಆರ್.ಪಿ ಘಟಕ ವಿಭಾಗದ ಮುಖ್ಯಪೇದೆ ರಾಜೇಂದ್ರ ಮಾನಸಿಕ ಖಿನ್ನತೆಗೆ ಒಳಗಾದ ಕಾರಣ ನಿಮಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆಂದು ಕೆ.ಎಸ್.ಆರ್.ಪಿ.ಅಧಿಕಾರಿಗಳು ತಿಳಿಸಿದ್ದಾರೆ. ಇವರು ಮಾನಸಿಕ ಅಸ್ವಸ್ಥರಾಗಿರುವುದಾಗಿ ತಿಳಿದು ಬಂದಿದೆ. ಭಾನುವಾರದಂದು ತಮ್ಮ ಕರ್ತವ್ಯ ನಿರ್ವಹಿಸಿರುವುದಾಗಿ ಕೆ.ಎಸ್.ಆರ್.ಪಿ.ಅಧಿಕಾರಿಗಳು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರಾಜೇಶ್ ಕೈ ಬರದಲ್ಲಿ (ಹಸ್ತಾಂತರ) ಡೆತ್ ನೋಟ್ ಪತ್ತೆಯಾಗಿದೆ. ಆದರೇ ಇದರಲ್ಲಿ ಯಾವುದೇ ಸಹಿ ಹಾಕಿರುವುದಿಲ್ಲ. ಹಾಸನ ನಗರ ಠಾಣೆ ಪೊಲೀಸರು ಹಾಗೂ ಮಹಿಳಾ ಸ್ಕೀನ್ ಆಫ್ ಕ್ರೈಂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದಾಖಲಿಸಿದರು.

LEAVE A REPLY

Please enter your comment!
Please enter your name here