ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಕೆಲವು ಬುದ್ದಿ ಜೀವಿಗಳು ಅನ್ನಿಸಿಕೊಂಡವರು ಸೆಟ್ ಬ್ಯಾಕ್ ಬಿಡದೆ ಮನೆಕಟ್ಟೊದು ಅಲ್ಲದೆ ರಸ್ತೆಗಳನ್ನು ಆವರಿಸಿಕೊಂಡು ಹೂವಿನ ತೋಟ ಮಾಡಿಕೊಂಡು ರಸ್ತೆ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವುದು ಶೋಚನೀಯ
ಇಂದು ನಗರಸಭೆ ವತಿಯಿಂದ ಇಂತಹ ಬೇಲಿಗಳನ್ನು ತೆರವುಗೊಳಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

ಕೆಲವು ಸಾರ್ವಜನಿಕರು ತಮ್ಮ ಜವಬ್ದಾರಿಯನ್ನು ಅರಿತು, ತಮ್ಮ ಮನೆಮುಂದೆ ರಸ್ತೆಯ ಬದಿಯಲ್ಲಿ ಹೂದೋಟಗಳನ್ನು ತೆರುವು ಗೊಳಿಸಿ ನಗರಸಭೆಯೊಂದಿಗೆ ಸಹಕರಿಸಿದರೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ ಹಾಗೆ ಆಗುತ್ತದೆ.

ಹೂದೋಟ / ಬೇಲಿ ನಿರ್ಮಾಣ ತಮ್ಮ ಜಾಗದ ಆವರಣ ಒಳಗೆ ನಿರ್ಮಿಸಬೇಕು , ಸಾರ್ವಜನಿಕ ರ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನಗರಸಭೆ ಈ ಮೂಲಕ ವಿನಂತಿಸಿದೆ