ಹಾಸನ ಮೈಸೂರು ಹೆದ್ದಾರಿ ‘ ಹಂಗರಹಳ್ಳಿ ಸೇತುವೆ ಕಾಮಗಾರಿ ನಡೆಯಲಿದೆ ‘ ಬದಲಿ ರಸ್ತೆ ಮಾರ್ಗದ ವಿವರ ಇಂತಿದೆ ನೋಡಿ ಶೇರ್ ಮಾಡಿ

0

ರಾಷ್ಟ್ರೀಯ ಹೆದ್ದಾರಿ 373ರ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಹಂಗರಹಳ್ಳಿ ಗ್ರಾಮದ ಹತ್ತಿರ ಬೇಲೂರು-ಬಿಳಿಕೆರೆ ರಸ್ತೆಯ (ಹಂಗರಹಳ್ಳಿ) ರೈಲ್ವೆ ಸೇತುವೆ ಚಟುವಟಿಕೆ ಕಾರ್ಯ ಹಮ್ಮಿಕೊಳ್ಳಲಿದ್ದು. ಆದ್ದರಿಂದ ನಾಲ್ಕು ತಿಂಗಳ ವರೆಗೆ ಸದರಿ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಸಾಧ್ಯವಿರುವುದಿಲ್ಲಾ. ಸದರಿ ರಸ್ತೆಯಲ್ಲಿ ಕಾಮಗಾರಿಯನ್ನು ಕೈಗೊಂಡಿದ್ದು, ಕಾಮಗಾರಿ ಮುಕ್ತಾಯದವರೆಗೂ ವಾಹನ ಸಂಚಾರವನ್ನು ನಿರ್ಬಂಧಿಸಿ , ಬದಲಿ ರಸ್ತೆಯಾದ ಹೊಳೆನರಸೀಪುರ-ಪಡುವಲಹಿಪ್ಪೆ-ಹಂಗರಹಳ್ಳಿ-ಹಾಸನ ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಲು ಮತ್ತು ಹಳೇಕೋಟೆ-ಕಬ್ಬನಹಳ್ಳಿ-ಹೊಸಹಳ್ಳಿ ಮಾರ್ಗವಾಗಿ ಲಘು ವಾಹನಗಳು ಸಂಚರಿಸಲು ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ರಾಷ್ಟ್ರೀಯ ಹೆದ್ದಾರಿ 373 ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಹಂಗರಹಳ್ಳಿ ಗ್ರಾಮದ ಹತ್ತಿರ ಬೇಲೂರು-ಬಿಳಿಕೆರೆ ರಸ್ತೆಯ (ಹಂಗರಹಳ್ಳಿ) ರಲ್ಲಿ ನಾಲ್ಕು ತಿಂಗಳ ವರೆಗೆ ಎಲ್ಲಾ ವಿಧದ ವಾಹನ ಸಂಚಾರವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ

ಪೊಲೀಸ್ ಅಧೀಕ್ಷಕರು ಹಾಸನರವರು ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಹಂಗರಹಳ್ಳಿ ಗ್ರಾಮದ ಹತ್ತಿರ ಬೇಲೂರು-ಬಿಳಿಕೆರೆ ರಸ್ತೆಯ (ಹಂಗರಹಳ್ಳಿ) ರವರೆಗೆ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಭಂಧಿಸಿ ಬದಲಿ ರಸ್ತೆಯಾದ ಹೊಳೆನರಸೀಪುರ-ಪಡುವಲಹಿಪ್ಪೆ-ಹಂಗರಹಳ್ಳಿ-ಹಾಸನ ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಲು ಮತ್ತು ಹಳೇಕೋಟೆ-ಕಣ್ಣನಹಳ್ಳಿ-ಹೊಸಹಳ್ಳಿ ಮಾರ್ಗವಾಗಿ ಲಘು ವಾಹನಗಳು ಸಂಚಾರ ಮಾಡಬಹುದಾಗಿರುತ್ತದೆ

LEAVE A REPLY

Please enter your comment!
Please enter your name here