ಹೊಳೆನರಸೀಪುರ ಪಟ್ಟಣದ ಠಾಣೆ ಆವರಣಕ್ಕೆ ಶನಿವಾರ ಮರದ ದೊಡ್ಡ ಕೊಂಬೆ ಮುರಿದು ಬಿದ್ದು ಪೊಲೀಸರು ವಶಪಡಿಸಿಕೊಂಡು ಠಾಣೆ ಮುಂದೆ ನಿಲ್ಲಿಸಿದ್ದ ವಾಹನ ಜಖಂ ಆಗಿದೆ.

0

ಹಾಸನ : ಹೊಳೆನರಸೀಪುರ ಪಟ್ಟಣದ ಠಾಣೆ ಆವರಣಕ್ಕೆ ಶನಿವಾರ ಮರದ ದೊಡ್ಡ ಕೊಂಬೆ ಮುರಿದು ಬಿದ್ದು ಪೊಲೀಸರು ವಶಪಡಿಸಿಕೊಂಡು ಠಾಣೆ ಮುಂದೆ ನಿಲ್ಲಿಸಿದ್ದ ವಾಹನ ಜಖಂ ಆಗಿದೆ. , ಮಹಾರಾಜ ಪಾರ್ಕಿನಲ್ಲಿ ಬೆಳೆದಿದ್ದ ಮರದ ದೊಡ್ಡ ಕೊಂಬೆ ರಾತ್ರಿ ಮುರಿದು ಬಿದ್ದಿದೆ. ಪ್ರಕರಣವೊಂದರಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ಮಹೀಂದ್ರ ಗೂಡ್ಸ್ ವಾಹನ ಜಖಂಗೊಂಡಿದೆ.

ಕೊಂಬೆ ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಪರಿಣಾಮ ಎರಡು ಕಂಬಗಳು ವಾಲಿದ್ದು, ವಿದ್ಯುತ್ ತಂತಿಗಳು ಜೋತು ಬಿದ್ದಿವೆ.

ರಸ್ತೆಗೆ ಅಡ್ಡಲಾಗಿ ತಂತಿಗಳು ಜೋತು ಬಿದ್ದಿರುವ ಕಾರಣ ಮುನ್ನೆಚರಿಕೆ ಕ್ರಮವಾಗಿ ಗಣಪತಿ ಪೆಂಡಾಲ್ ಪಕ್ಕದ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ.

LEAVE A REPLY

Please enter your comment!
Please enter your name here