ಕೂದಲು ಉದುರುವ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದೀರಾ?ಕಾಂತಿಯುಕ್ತವಾದ ತ್ವಚೆ ಬೇಕೆ?
ಇದನ್ನು ಸೇವಿಸಿ

0

ಪ್ರಾಚೀನ ಕಾಲದಿಂದಲೂ ಸಹ ಬೆಳೆಸಿಕೊಂಡು ಬರುತ್ತಿರುವ ಫ್ಲೆಕ್ಸ್ ಸೀಡ್ಸ್ ಅಥವಾ ಅಗಸೆ ಬೀಜಗಳು ಆರೋಗ್ಯಕ್ಕೆ ಬಹಳ ಉತ್ತಮ.

ಅಗಸೆ ಬೀಜಗಳಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಬಿ ,ಫೈಬರ್, ಕಾಪರ್, ಮೆಗ್ನೀಸಿಯಂ ಫಾಸ್ಫರಸ್ ಅಂಶಗಳು ಇದನ್ನು ಹೆಚ್ಚು ಉಪಯೋಗಕರವಾಗಿ ಮಾಡುತ್ತದೆ.

ಪ್ರಯೋಜನಗಳು:

ಕಾಂತಿಯುಕ್ತವಾದ ತ್ವಚೆಯನ್ನು ನೀಡುತ್ತದೆ:
ನಾವು ತಿನ್ನುವ ಪದಾರ್ಥಗಳು ನಮ್ಮ ಚರ್ಮದ ಮೇಲೆ ಕೂಡ ಪರಿಣಾಮ ಬೀರುತ್ತದೆ ಅದಕ್ಕಾಗಿ ನಾವು ಒಳ್ಳೆಯ ಪದಾರ್ಥಗಳನ್ನು ಸೇವಿಸಬೇಕು. ಫ್ಲಕ್ಸ್ ಬೀಜದಲ್ಲಿ ಒಮೆಗಾ ಕೊಬ್ಬಿನ ಆಮ್ಲಗಳು ಇವೆ ಇದು ಸಾಮಾನ್ಯವಾಗಿ ಮೀನುಗಳಲ್ಲಿ ದೊರಕುತ್ತದೆ ,ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಿ ಸುಂದರ ತ್ವಚೆಯನ್ನು ನೀಡುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :
ಅಗಸೆ ಬೀಜಗಳಲ್ಲಿರುವ ಲಿನೊಲಿಕ್ ಆಮ್ಲಗಳು ಅರ್ಥರಿಟಿಸ್, ಅಸ್ತಮಾ, ಮಧುಮೇಹ ಇಂತಹ ಹಲವಾರು ರೋಗಗಳನ್ನು ತಡೆಯುತ್ತದೆ.ಜತೆಗೆ ಕ್ಯಾನ್ಸರ್ ರೋಗವನ್ನು ಕೂಡ ಇದು ತಡೆಯುತ್ತದೆ .

ಕೂದಲು ಉದುರುವ ಸಮಸ್ಯೆಗಳಿಂದ ಪಾರು ಮಾಡುತ್ತದೆ.
ಅಗಸೆ ಬೀಜಗಳಲ್ಲಿ ವಿಟಮಿನ್ ಬಿ ಕೂದಲಿನ ಕಿರುಚೀಲಗಳ ಜೀವ ತುಂಬಿ ಕೂದಲನ್ನು ಆರೋಗ್ಯಕರವಾಗಿ ಮಾಡುತ್ತದೆ .ಕೂದಲ ಬುಡಗಳನ್ನು ಗಟ್ಟಿ ಮಾಡಿ ನಿಮಗೆ ದಟ್ಟವಾದ ಕೂದಲನ್ನು ನೀಡುತ್ತದೆ.

ಆರೋಗ್ಯದಲ್ಲಿ ಸಮಸ್ಯೆ ಬಂದಾಗ ಮಾತ್ರೆ ಸೇವಿಸುವ ಬದಲು ಇಂತಹ ಪದಾರ್ಥಗಳನ್ನು ನಿಮ್ಮ ದಿನ ದಿನಿತ್ಯದ ಆಹಾರದಲ್ಲಿ ಸೇವಿಸಿದರೆ ನೀವು ಬಹಳ ಆರೋಗ್ಯವಂತ ಆಗಬಹುದು.

-ತನ್ವಿ .ಬಿ

LEAVE A REPLY

Please enter your comment!
Please enter your name here