ಇಂದಿನಿಂದ ಬೆಂಗಳೂರು ಮೈಸೂರು ನಡುವೆ ಆರಂಭಕ್ಕೆ ಗ್ರೀನ್ ಸಿಗ್ನಲ್

0

ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಹಲವು ರೈಲುಗಳ ಸಂಚಾರಕ್ಕೆ ಇಂದಿನಿಂದ ನೈಋತ್ಯ ರೈಲ್ವೆ ಮೈಸೂರು ವಿಭಾಗ ಗ್ರೀನ್ ಸಿಗ್ನಲ್ ತೋರಿಸಿದೆ.
ಸೀಟು ಕಾಯ್ದಿರಿಸದ ಹಾಗೂ ಕಾಯ್ದಿರಿಸಿದ ಪ್ರಯಾಣಿಕರ ಎಕ್ಸ್ ಪ್ರೆಸ್ ರೈಲುಗಳು ಸಾಮಾನ್ಯ ದರದೊಂದಿಗೆ ಸಂಚಾರ ಕಾರ್ಯಾರಂಭಿಸಲಿವೆ.

ಕೋವಿಡ್ ಹಿನ್ನೆಲೆಯಲ್ಲಿ ಮಾ.25ರಿಂದ ರೈಲು ಸೇವೆಗಳನ್ನು ರದ್ದುಗೊಳಿಸಿದ ನಂತರ ಮೈಸೂರು ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಎಂದಿನಂತೆ ಸಂಚರಿಸಲಿವೆ.

ಈ ರೈಲುಗಳ ಬಳಕೆಯನ್ನು ಅವಲಂಬಿಸಿ ಮುಂದಿನ ವಿಸ್ತರಣೆಯನ್ನು ಪರಿಗಣಿಸಲಾಗುತ್ತದೆ. ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಲಾಗಿದೆ.

ಕೋಲಾರದಿಂದ ಬೆಂಗಳೂರು, ಮೈಸೂರು ರೈಲು ಪುನರಾರಂಭ :

ರೈಲು ಸೇವೆ ಆರಂಭದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೈಲು ನಿಲ್ದಾಣವನ್ನು ಶುಚಿಗೊಳಿಸಿ ಸ್ಯಾನಿಟೈಸ್ ಮಾಡಲಾಗಿದೆ.

ಯಾವ ರೈಲು .? ಎಷ್ಟು ಗಂಟೆಗೆ
ರೈಲ್ವೆ ಇಲಾಖೆ ವೇಳಾ ಪಟ್ಟಿ ಇಂತಿದೆ.
ಬಸವ ಎಕ್ಸ್ ಪ್ರೆಸ್ ಮೈಸೂರು- ಬಾಗಲಕೋಟೆ – ಮಧ್ಯಾಹ್ನ 1.30
ಬಸವ ಎಕ್ಸ್ ಪ್ರೆಸ್ – ಬಾಗಲ ಜನನಕೋಟೆ ಮೈಸೂರು -ಮಧ್ಯಾಹ್ನ 1.50
ಟಿಪ್ಪು ಎಕ್ಸ್ ಪ್ರೆಸ್ -ಮೈಸೂರು – ಬೆಂಗಳೂರು -ಬೆಳಿಗ್ಗೆ 11.30
ಟಿಪ್ಪು ಎಕ್ಸ್ ಪ್ರೆಸ್ -ಬೆಂಗಳೂರು – ಮೈಸೂರು -ಮಧ್ಯಾಹ್ನ 3.15
ತಿರುಪತಿ ಎಕ್ಸ್ ಪ್ರೆಸ್- ಮೈಸೂರು – ಬೆಂಗಳೂರು -ಸಂಜೆ 5.10
ತಿರುಪತಿ ಎಕ್ಸ್ ಪ್ರೆಸ್ -ಬೆಂಗಳೂರು – ಮೈಸೂರು- ಬೆಳಿಗ್ಗೆ 6.55
ತಾಳಗುಪ್ಪ ಎಕ್ಸ್ ಪ್ರೆಸ್- ಮೈಸೂರು- ಬೆಂಗಳೂರು- ಸಂಜೆ 7.30
ತಾಳಗುಪ್ಪ ಎಕ್ಸ್ ಪ್ರೆಸ್- ಬೆಂಗಳೂರು- ಮೈಸೂರು- ಬೆಳಿಗ್ಗೆ 4.30
ತಿರುಪತಿ ಎಕ್ಸ್‌ಪ್ರೆಸ್‌ ಚಾ.ನಗರ -ಮೈಸೂರು- ಮಧ್ಯಾಹ್ನ 3.10
ತಿರುಪತಿ ಎಕ್ಸ್ ಪ್ರೆಸ್-ಮೈಸೂರು- ಚಾ.ನಗರ-ಬೆಳಿಗ್ಗೆ 10.30

LEAVE A REPLY

Please enter your comment!
Please enter your name here