ನಿಗಮದ 6 ಸೇವೆಗಳಿಗೆ ಸೇವಾ ಸಿಂದು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ.
ಬಸ್ ಪಾಸ್ ಪಡೆಯಲು ಇಚ್ಚಿಸುವ ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಸೇವಾ ಸಿಂಧು ಪೋರ್ಟಲ್ ಮೂಲಕ ಬಸ್ ಪಾಸ್ ಕೋರಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ

0

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಮಗಳೂರು ವಿಭಾಗದಲ್ಲಿ 2020-2021 ನೇ ಸಾಲಿನಲ್ಲಿ ಸಕಾಲ ಸಂಬಂಧಿತ ನಿಗಮದ 6 ಸೇವೆಗಳಿಗೆ ಸೇವಾ ಸಿಂಧು ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿ ರಿಯಾಯಿತಿ/ ಉಚಿತ ಬಸ್‍ಪಾಸ್ ಹಾಗೂ ವಿಕಲಚೇತನರ ರಿಯಾಯಿತಿ ಬಸ್‍ಪಾಸ್, ಹೊಸ ಪಾಸ್‍ಗಾಗಿ ಅರ್ಜಿ ಸಲ್ಲಿಸಲು ಮತ್ತು ನವೀಕರಣಕ್ಕಾಗಿ, ಸ್ವಾತಂತ್ರ್ಯ ಹೋರಾಟಗಾರರ ಉಚಿತ ಬಸ್‍ಪಾಸ್ ನವೀಕರಣ ಮತ್ತು ವಿಧವಾ ಪತ್ನಿಯರ ಉಚಿತ ಕೂಪನ್ ಪಡೆಯಲು ಹಾಗೂ ಅಪಘಾತ ಪರಿಹಾರ ನಿಧಿಗಾಗಿ ಸೇವಾ ಸಿಂಧು ಪೊರ್ಟಲ್ ಮುಖಾಂತರ ಅರ್ಜಿಸಲ್ಲಿಸಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಬಸ್ ಪಾಸ್ ಪಡೆಯಲು ಇಚ್ಚಿಸುವ ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಸೇವಾ ಸಿಂಧು ಪೋರ್ಟಲ್ ಮೂಲಕ ಬಸ್ ಪಾಸ್ ಕೋರಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಸದರಿ ಅರ್ಜಿಗೆ ವಿದ್ಯಾರ್ಥಿಯ ಆಧಾರ್ ಸಂಖ್ಯೆ ಕಡ್ಡಾಯವಾಗಿದ್ದು ಆಧಾರ್ ಸಂಖ್ಯೆಗೆ ದೂರವಾಣಿ ಸಂಖ್ಯೆ ಲಿಂಕ್ ಆಗಿರುವುದು ಸಹ ಕಡ್ಡಾಯವಾಗಿಬೇಕಾಗುತ್ತದೆ. ವಿದ್ಯಾರ್ಥಿಯು ಅರ್ಜಿಯನ್ನು ಸಲ್ಲಿಸುವಾಗ ಆಧಾರ್ ಕಾರ್ಡ್‍ನ ಸಂಖ್ಯೆಯನ್ನು ನಮೂದಿಸಿದಾಗ ಓ.ಟಿ.ಪಿ ಸಂಖ್ಯೆಯು ಆಧಾರ್ ಲಿಂಕ್ ಆಗಿರುವ ದೂರವಾಣಿ ಸಂಖ್ಯೆಗೆ ಬರುತ್ತದೆ. ಆದುದರಿಂದ ಆಧಾರ್‍ಗೆ ದೂರವಾಣಿ ಸಂಖ್ಯೆ ಲಿಂಕ್ ಆಗಿರುವುದು ಅಗತ್ಯವಾಗಿದೆ.
ವಿದ್ಯಾರ್ಥಿಯು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ದಾಖಲಿಸಿದ ನಂತರ ಅರ್ಜಿಯ ಪ್ರತಿಯನ್ನು ಪಡೆದು ಸದರಿ ಅರ್ಜಿಗೆ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ಹಾಗೂ ತಮ್ಮ ಪೋಷಕರಿಂದ ಸಹಿ ಪಡೆದು ಆನಂತರ ಪೂರ್ಣ ದಾಖಲಾತಿಗಳೊಂದಿಗೆ (ಆಧಾರ್ ಕಾರ್ಡ್ ಪ್ರತಿ, ಶೈಕ್ಷಣಿಕ ಸಂಸ್ಥೆಗೆ ಪ್ರಸಕ್ತ ವರ್ಷದಲ್ಲಿ ದಾಖಲಾಗಿರುವ ಬಗ್ಗೆ ಶುಲ್ಕ ಪಾವತಿ ಮಾಡಿರುವ ರಶೀದಿ ಹಾಗೂ ಶೈಕ್ಷಣಿಕ ಸಂಸ್ಥೆಯಿಂದ ವಿತರಿಸಲಾಗಿರುವ ಗುರುತಿನ ಚೀಟಿ ಪ್ರತಿ) ಅರ್ಜಿ ಸಲ್ಲಿಸಬೇಕಿರುತ್ತದೆ. ವಿದ್ಯಾಥಿಗಳು ಬಸ್ ಪಾಸ್ ಅರ್ಜಿಯನ್ನು ನಿಗದಿತ ಶುಲ್ಕದೊಂದಿಗೆ ಶಾಲಾ ಕಾಲೇಜಿನಾಡಳಿತ ಕಚೇರಿಯಲ್ಲಿ ಸಲ್ಲಿಸಿದ ನಂತರ ಎಲ್ಲಾ ವಿದ್ಯಾಥಿಗಳ ಅರ್ಜಿಗಳನ್ನು ಒಟ್ಟಾಗಿ ಶಾಲಾ ಕಾಲೇಜಿನ ಆಡಳಿತ ಸಿಬ್ಬಂದಿ ಆಯಾ ಘಟಕಗಳಿಗೆ ಸಲ್ಲಿಸಬೇಕಿರುತ್ತದೆ. ಆನಂತರ ಘಟಕದ ವ್ಯವಸ್ಥಾಪಕರು ಅರ್ಜಿಗಳನ್ನು ಪರಿಶೀಲಿಸಿ, ಶಾಲಾ ಕಾಲೇಜಿನ ಆಡಳಿತ ಸಿಬ್ಬಂದಿ ಮುಂಖಾಂತರ ವಿದ್ಯಾರ್ಥಿಗಳು ಪಾಸ್‍ಗಳನ್ನು ಪಡೆದುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here