ಮನುಷ್ಯರಿಗೆ ಬರುವ ಜ್ವರದ ಕಾರಣವನ್ನು ನಿಖರವಾಗಿ ಪತ್ತೆ ಹಚ್ಚುವ ‘ಸೆಲ್ ಫೇಸ್’ ಎಂಬ ಆಧುನಿಕ ತಂತ್ರಜ್ಞಾನ

0

ಮನುಷ್ಯರಿಗೆ ಬರುವ ಜ್ವರದ ಕಾರಣವನ್ನು ನಿಖರವಾಗಿ ಪತ್ತೆ ಹಚ್ಚುವ ‘ಸೆಲ್ ಫೇಸ್’ ಎಂಬ ಆಧುನಿಕ ತಂತ್ರಜ್ಞಾನದ ಸಲಕರಣೆಯೊಂದನ್ನು ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಯುವ ವಿಜ್ಞಾನಿ ಡಾ. ಕೋಮಲ್ ಕುಮಾರ್ ಸಂಶೋಧಿಸಿದ್ದಾರೆ., ಈ ಬಗ್ಗೆ ಅವರು ಮಂಡಿಸಿರುವ ಪ್ರಬಂಧವು ಇಂಗ್ಲೆಂಡ್‌ನ ವಿಜ್ಞಾನ ಮಾಧ್ಯಮ ‘ಸೆಲೆಕ್ಟ್ ಸೈನ್ಸ್‌’ನಲ್ಲಿ ಪ್ರಕಟವಾಗಿದೆ , ಡಾ.ಕೋಮಲ್ ಕುಮಾರ್, ಜರ್ಮನಿ ದೇಶದ ಟುಮ್ ಸಂಸ್ಥೆಯ ಪ್ರೊ.ಅಲಿವರ್ ಹೈಡನ್ ಮತ್ತು ಪ್ರೊ. ಪರ್ಸಿನೊಲ್ಲೆ ಮಾರ್ಗದರ್ಶನದಲ್ಲಿ ಸಂಶೋಧಿಸಿರುವ ಈ ಉಪಕರಣದಿಂದ, ಮನುಷ್ಯರಿಗೆ ಬರುವ ಜ್ವರವು ವೈರಸ್‌ನಿಂದ ಬಂದಿದೆಯೇ ಅಥವಾ ಬ್ಯಾಕ್ಟೀರಿಯಾದಿಂದ ಬಂದಿದೆಯೇ ಎಂಬುದನ್ನು ಖಚಿತವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಹಾಯಕವಾಗಿದೆ.

‘ಇದುವರೆಗಿನ ವೈದ್ಯಕೀಯ ತಂತ್ರಜ್ಞಾನದ ಸಲಕರಣೆಗಳಲ್ಲಿ ಜ್ವರದ ಕಾರಣದ ಪತ್ತೆ ಕಾರ್ಯ ಶೇ 50% ಮಾತ್ರ ಸಾಧ್ಯತೆ ಇತ್ತು. ಹೊಸ ತಂತ್ರಜ್ಞಾನದ ಸಲಕರಣೆಯ ಮೂಲಕ ಶೇ 100ರಷ್ಟು ಖಚಿತವಾಗಿ ಕಾರಣವನ್ನು ಪತ್ತೆ ಮಾಡಿ, ಅಗತ್ಯ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ’ ಎಂದು ಡಾ.ಕೋಮಲ್ ತಿಳಿಸಿದ್ದಾರೆ. , ಪಟ್ಟಣದ ರತ್ನಮ್ಮ ಹಾಗೂ ದಿ.ಜವರಪ್ಪ ಅವರ ಪುತ್ರರಾದ ಕೋಮಲ್ ಕುಮಾರ್, ಸಿಂಗಪುರದ ಸಂಶೋಧನಾ ಕೇಂದ್ರ ‘ಟುಮ್ ಕ್ರಿಯೇಟ್‌’ನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

https://www.selectscience.net/product-news/new-technology-provides-unprecedented-insights-for-fever-diagnostics?artid=60044&preview=1

LEAVE A REPLY

Please enter your comment!
Please enter your name here