ಹಾಸನ: ಪ್ರತಿ ವರ್ಷದಂತೆ ಈ ವರ್ಷವು ಕೂಡ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧೆ ಭಕ್ತಯಿಂದ ಜನತೆ ಆಚರಿಸುತ್ತಿದ್ದು, ಹಬ್ಬದ ವ್ಯಾಪಾರಕ್ಕಾಗಿ ಎರಡು ದಿವಸದ ಮೊದಲೆ ನಗರದ ಮುಖ್ಯ ಮಾರುಕಟ್ಟೆಗಳಲ್ಲಿ ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವ್ಯಾಪಾರ ಮಾಡಲು ಮುಗಿ ಬಿದ್ದಿದ್ದರು.
ನಗರದ ಮಹಾವೀರ ವೃತ್ತ, ಕಸ್ತೂರಬಾ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ, ಬಿ.ಎಂ. ರಸ್ತೆ, ಸಾಲಗಾಮೆ ರಸ್ತೆ , ಹೊಸಲೈನ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ವ್ಯಾಪಾರ ಜೋರಾಗಿಯೇ ನಡೆಯಿತು. ಪ್ರಮುಖವಾಗಿ ಸೇವಂತಿಗೆ ಒಂದು ಮಾರಿಗೆ 6೦ ರಿಂದ 8೦ ರೂಗಳಿದ್ದು, ಪುಟ್ಟಬಾಳೆ ಒಂದು ಕೆಜಿಗೆ 100 ರಿಂದ 140 ರೂಗಳ ವರೆಗೆ,
ತಾವರ ಎರಡಕ್ಕೆ 100 ರಿಂದ 120, ಸೇಬು ಒಂದು ಕೆಜಿಗೆ 100 ರಿಂದ 120, ಅನಾನಸ್ ಎರಡಕ್ಕೆ 100 ರಿಂದ 130, ಬಾಳೆಕಂದು ಎರಡಕ್ಕೆ 89 ರಿಂದ 100 ರೂಗಳು, ಮಾವಿನ ಎಲೆ ಕಟ್ಟಿಗೆ 20 ರೂಗಳು ಇದ್ದರೇ, ಬಳೆಗಳಲು, ಬಟ್ಟೆ ಫೀಸ್ , ಚಿಕ್ರ ತಾಮ್ರದ ಬಿಂದಿಗೆ 1,000 ದಿಂದ 3,600 , ಪೂಜೆ ತಾಮ್ರದ ಚಂಬು 330 ರಿಂದ 660 ಹಾಗೂ ಇತರೆ ವಸ್ತುಗಳ ವ್ಯಾಪಾರ ಜೋರಾಗಿಯೇ ನಡೆಯಿತು. ಇನ್ನು ಕೆಲ ವ್ಯಾಪಾರಸ್ತರು ಬೇಗ ಮನೆಗೆ ಹೋಗಲು ಕಡಿಮೆ ಬೆಲೆಗೆ ಕೊಡುತ್ತಿದ್ದದ್ದು ಕಂಡು ಬಂತು . ಈಗ ಅವರ ವಿಳಾಸ ಹೇಳಿ ಪ್ರಯೋಜನ ವಿಲ್ಲ ಬಿಡಿ, ಕೆಲ ರಸ್ತೆಗಳಲ್ಲಿ ಮಹಿಳೆಯರಲ್ಲದೆ ಪುರುಷರು ಚೌಕಾಸಿಗಿಳಿದಿದ್ದರು