ಸರಳವಾಗಿ ಕನಕದಾಸ ಜಯಂತಿ ಆಚರಿಸಲು ನಿರ್ಧಾರ

0

ಜಿಲ್ಲಾಡಳಿತದ ವತಿಯಿಂದ ಡಿ.3 ರಂದು ಸಂತ ಶ್ರೇಷ್ಠ ಕನಕದಾಸ ಜಯಂತಿಯನೂ ಜಿಲ್ಲಾಧಿಕಾರಿಯವರ ನ್ಯಾಯಾಂಗ ಸಂಭಾಗಣದಲ್ಲಿ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಂಭಾಗಣದಲ್ಲಿ ಅಪರ ಜಿಲ್ಲಾಧಿಕಾರಿ ಕವಿತರಾಜರಾಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋವಿಡ್-19 ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಕನಕದಾಸ ಜಯಂತಿಯನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅವರು ಮಾತನಾಡಿ ಈಗಾಗಲೇ ಕೋವಿಡ್-19 ನಿಂದ ಸಾಕಷ್ಟು ಸಮಸ್ಯೆಯಾಗಿದೆ. ಅಲ್ಲದೆ ಎರಡನೇ ಹಂತದಲ್ಲಿ ಕೋವಿಡ್-19 ಹರಡುವ ಸಾದ್ಯತೆ ಇದೆ. ಈ ನಿಟ್ಟಿನಲ್ಲಿ ಸಭೆ ಸಮಾಂರಭಗಳ ಮುಂಜಾಗ್ರತೆಯಿಂದ ಏರ್ಪಡಿಸಲು ಸೂಚಿಸಿದೆ ಆದ್ದರಿಂದ ಸಂತ ಶ್ರೇಷ್ಠ ಕನಕದಾಸ ಜಯಂತಿಯನ್ನು ಸರಳವಾಗಿ ಆಚರಿಸುವುದು ಸೂಕ್ತ ಎಂದರು.
ಕುರುಬ ಸಮುದಾಯದ ಜಿಲ್ಲಾ ಅಧ್ಯಕ್ಷರಾದ ಪಟೇಲ್ ಶಿವಪ್ಪ ಅವರು ಮಾತನಾಡಿ ಸರ್ಕಾರದ ಸಲಹೆ ಸೂಚನೆಗಳನ್ನು ಪಾಲಿಸುವುದು ಸೂಕ್ತ ಕೋವಿಡ್-19 ತಡೆಗಟ್ಟುವಲ್ಲಿ ಕನಕದಾಸರ ಜಯಂತಿ ಮಾದರಿಯಾಗಲಿ ಸಮುದಾಯದ ಕೆಲವು ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸುದರ್ಶನ್ ಕಾರ್ಯಕ್ರಮದ ರೂಪುರೇಷಯ ಬಗ್ಗೆ ಮಂಡಿಸಿದರು. ಸಭೆಯಲ್ಲಿ ತಾಲ್ಲೂಕು ಕುರುಬ ಸಂಘದ ಅಧ್ಯಕ್ಷರಾದ ಸಿದ್ದೇಗೌಡ, ಜಿಲ್ಲಾ ಕುರುಬ ಸಂಘದ ನಿರ್ದೇಶಕರಾದ ಮಾಳಪ್ಪ, ತಾಲ್ಲೂಕು ಕುರುಬ ಸಂಘದ ನಿರ್ದೇಶಕರಾದ ಡಿ.ರಂಗೇಗೌಡ, ಅರಸೀಕೆರೆಯ ಪ್ರಗತಿ ಪರ ಸಂಘಟನೆಗಳ ಅಧ್ಯಕ್ಷರಾದ ವೆಂಕಟೇಶ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here