ನೋಡಲು ಬಹಳ ಪುಟ್ಟದಾಗಿರುವ ಸಾಸಿವೆ ಎಷ್ಟು ಉಪಯೋಗಕಾರಿ ಗೊತ್ತೇ?

0

ನಮ್ಮ ಭಾರತೀಯ ಎಲ್ಲಾ ಅಡುಗೆಗಳಲ್ಲೂ ಸಾಸುವೆ ಅಗತ್ಯವಾದ ಪದಾರ್ಥ.
ಸಾಸಿವೆಯಲ್ಲಿ ಕ್ಯಾಲ್ಸಿಯಂ, ಮ್ಯಾಂಗನೀಸ್, ಒಮೇಗಾ- ೩ ಫ್ಯಾಟಿ ಆಸಿಡ್, ಕಬ್ಬಿಣಾಂಶ ,ಝಿಂಕ್ ಪ್ರೋಟೀನ್ ಹಾಗೂ ಫೈಬರ್ ಅಂಶವಿದೆ.

ಪ್ರಯೋಜನಗಳು:

• ತೂಕವನ್ನು ಇಳಿಸಬೇಕೇ?
ಸಾಸಿವೆಯಲ್ಲಿರುವ ಬಿ ಕಾಂಪ್ಲೆಕ್ಸ್ ವಿಟಮಿನ್ ಗಳು ನಮ್ಮ ದೇಹದ ಕೊಬ್ಬು ಇಳಿಸಲು ಸಹಾಯ ಮಾಡುತ್ತದೆ ಹಾಗಾಗಿ ನಮ್ಮ ತೂಕ ಕೂಡ ಸುಲಭವಾಗಿ ಇಳಿಯುತ್ತದೆ.

• ಆಸ್ತಮಾ ರೋಗದಿಂದ ತೊಂದರೆ ಅನುಭವಿಸುತ್ತಿದ್ದೀರಾ?
ಸಾಸಿವೆ ಸಾಸಿವೆಯಲ್ಲಿರುವ ಮೆಗ್ನೀಷಿಯಂ ಮತ್ತು ಸೆಲೆನಿಯಂ ಶ್ವಾಸನಾಳದಲ್ಲಿ ಅಡಗಿರುವ ಸೋಂಕು ನಿವಾರಿಸಿ ಅಸ್ಥಮಾ, ಶೀತ ಮತ್ತು ಕಫ ಕಟ್ಟಿರುವುದನ್ನು ತಡೆಗಟ್ಟುತ್ತದೆ.

• ಕರುಳಿನ ಕ್ಯಾನ್ಸರ್ ಸಮಸ್ಯೆಯನ್ನು ತಡೆಗಟ್ಟುತ್ತದೆ :
ಸಾಸಿವೆಯಲ್ಲಿರುವ ಫೈಟೋ ನ್ಯೂಟ್ರಿಯಂಟ್ ಕರುಳು ಮತ್ತು ಜೀರ್ಣಾಂಗಗಳಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

• ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರಬೇಕು. ಸಾಸಿವೆಯಲ್ಲಿರುವ ಖನಿಜಗಳ ಸಂಖ್ಯೆಯೇ ಹೆಚ್ಚು ಹಾಗಾಗಿ ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಮಗೆ ಒಳ್ಳೆಯ ಆರೋಗ್ಯ ನೀಡುತ್ತದೆ.

ಅಡುಗೆ ಮನೆಯಲ್ಲಿಚಟಪಟ ಎಂದು ಸದ್ದು ಮಾಡುವ ಈ ಸಾಸಿವೆ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಹಾಗಾಗಿ ಸಾಸಿವೆಯನ್ನು ಹೆಚ್ಚು ಬಳಿಸಿ ಇದರ ಉಪಯೋಗಗಳನ್ನು ಅನುಭವಿಸೋಣ.


-ತನ್ವಿ. ಬಿ

LEAVE A REPLY

Please enter your comment!
Please enter your name here