ಹಾಸನ ಜಿಲ್ಲೆಗೆ ರಾಷ್ಟ್ರೀಯ ಪುರಸ್ಕಾರ ಹಸ್ತಾಂತರ

0

ಹಾಸನ ಜಿಲ್ಲಾ ಪಂಚಾ ಯಿತಿಗಿಂದು ಅವಿಸ್ಮರಣೀಯ ದಿನ. ಏಕೆಂದರೆ ರಾಜ್ಯದಲ್ಲೇ ಉತ್ತಮ ಸಾಧನೆಗಾಗಿ ಜಿಲ್ಲೆಗೆ ಅಧಿಕೃತವಾಗಿ ರಾಷ್ಟ್ರೀಯ ಪ್ರಶಸ್ತಿ ಹಸ್ತಾಂತರಗೊಂಡಿದೆ.

ರಾಷ್ತ್ರೀಯ ಪಂಚಾಯತ್ ರಾಜ್ ದಿವಸದ ಅಂಗವಾಗಿ ನವದೆಹಲಿಯಲ್ಲಿ‌ ನಡೆಯ ಬೇಕಿದ್ದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕೊವಿಡ್ 19 ಹಿನ್ನಲೆಯಲ್ಲಿ ವರ್ಚುವಲ್ ವೇದಿಕೆ ಮುಖಾಂತರ ಮಾಡಲಾ ಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗ್ರಾಮೀಣಾ ಭಿವೃದ್ಧಿ ಸಚಿವರಾದ ನರೇಂದ್ರ ಸಿಂಹ ತೋಮರ್,ರಾಜ್ಯದ ಮುಖ್ಯ ಮಂತ್ರಿ ಬಿ. ಎಸ್.ಯಡಿ ಯೂರಪ್ಪ ಹಾಗೂ ವಿವಿಧ ರಾಜ್ಯದ ಮುಖ್ಯಮಂತ್ರಿಗಳು
ಸೇರಿದಂತೆ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದ ಕಾರ್ಯಕ್ರಮ ದಲ್ಲಿ ವಿವಿಧ ಗ್ರಾಮೀಣ ಸಶಕ್ತೀ ಕರಣ ಪ್ರಶಸ್ತಿಗಳನ್ನು ಸಾಂಕೇತಿ ಕವಾಗಿ ವಿತರಿಸಲಾಯಿತು.

ದೆಹಲಿಯಲ್ಲಿ ಕಾರ್ಯಕ್ರಮ ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿ ಪ್ರಶಸ್ತಿ ವಿಜೇತ ಜಿಲ್ಲಾ ‌ಪಂಚಾ ಯಿತಿ ,ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ಅದರ ಅಧಿಕಾರಿಗಳಿಗೆ ಶುಭ ಕೋರಿದರು.

ದೇಶದ ಶಕ್ತಿ ಗ್ರಾಮಗಳಲ್ಲಿದ್ದು ಹಳ್ಳಿಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಸಂಪೂರ್ಣ ಪ್ರಗತಿ ಸಾಧ್ಯ.ಹಳ್ಳಿಗಳು ಮತ್ತು ಬಡವರ ಉದ್ದಾರ ಸರ್ಕಾರದ ಆದ್ಯತೆ .ಆ‌ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ಅವುಗಳನ್ನು ಸಕಾಲದಲ್ಲಿ ಅರ್ಹರಿಗೆ ತಲಿಪಿಸುವುದು ನಮ್ಮೆಲ್ಲರ ಜವಾಬ್ದಾರಿ .ಇದಕ್ಕೆ
ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾ ಪಂಚಾಯಿತಿ ,
ಗ್ರಾಮ ಪಂಚಾಯಿತಿಗಳ ಸಂಪೂರ್ಣ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಹಾಗಾಗಿ ಈ ಕಾರ್ಯದಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡುವ , ಸಮರ್ಪಕ ಸಾಧನೆ ಮಾಡುವ ಜಿಲ್ಲಾ ಪಂಚಾಯಿತಿ ,ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ಅಧಿಕಾರಿ ಗಳನ್ನು ಪ್ರೋತ್ಸಾ ಹಿಸಲು ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಇನ್ನಷ್ಟು ಮಾದರಿಯಾಗಿ ಕೆಲಸ ಮಾಡಿ ಎಂದು ಪ್ರಧಾನಿ ಕರೆ ನೀಡಿದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ನರೇಂದ್ರ ಸಿಂಹ ತೋಮರ್ ಅವರು ಪಂಚಾಯಿತಿ ಸಶಕ್ತೀಕರಣ ಯೋಜನೆಯ ಉದ್ದೇಶ , ಆಶಯ ಆಯ್ಕೆ ಸ್ವರೂಪ ಪ್ರಶಸ್ತಿ ಪಡೆವ ಸಂಸ್ಥೆಗಳ ಜವಾಬ್ದಾ ರಿಗಳನ್ನು ವಿವರಿಸಿ ಎಲ್ಲಾ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಪಂಚಾಯಿತಿ ,ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಹಾಗೂ ಜನಪ್ರತಿನಿಧಿಗಳು , ಅಧಿಕಾರಿ ಗಳನ್ನು ಅಭಿನಂದಿಸಿದರು.

ದೆಹಲಿಯಲ್ಲಿ ಸಾಂಕೇತಿಕವಾಗಿ ಪ್ರಶಸ್ತಿ ವಿತರಣೆ,ಹಾಗೂ ಪ್ರಶಸ್ತಿ ಮೊತ್ತವನ್ನು ಆಯಾಯ ಜಿಲ್ಲಾ ಪಂಚಾಯಿತಿಗಳಿಗೆ ಆನ್ ಲೈನ್ ಮೂಲಕ ವರ್ಗಾವಣೆ ಮಾಡಿದ ನಂತರ ಇತ್ತ ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರಿಗೆ ಪ್ರಶಸ್ತಿ ಫಲಕವನ್ನು ಹಸ್ತಾಂತರ ಮಾಡಿ ಅಭಿನಂದನೆ ಸಲ್ಲಿಸಿದರು.

ಇದೊಂದು ಹೆಮ್ಮೆಯ ‌ಸಾಧನೆ

LEAVE A REPLY

Please enter your comment!
Please enter your name here