ನೀರು ಕುಡಿಯಬೇಕಾದರೆ ಈ ಕೆಳಗಿನ ವಿಷಯವನ್ನು ಪಾಲಿಸಿ.

0

     ನೀರು ಎಲ್ಲರ ಅವಶ್ಯಕತೆ. ಆದರೆ ನೀರು ಕುಡಿಯುವಾಗ ಹಲವಾರು ತಪ್ಪುಗಳನ್ನು ನಾವು ಮಾಡುತ್ತೇವೆ. ನೀರನ್ನು ಯಾವಾಗ ಯಾವ ರೀತಿ     ಕುಡಿಯಬೇಕೆನ್ನುವುದು ಎಲ್ಲರಿಗೂ ತಿಳಿಯಬೇಕಾದ ವಿಚಾರ. ನೀರು ಕುಡಿಯುವ ರೀತಿ ತಪ್ಪಾಗಿದ್ದರೆ ನಮಗೆ ಹಲವಾರು ತೊಂದರೆಗಳು ಉಂಟಾಗಬಹುದು.

ಹಾಗಾಗಿ ನೀರು ಕುಡಿಯಬೇಕಾದರೆ ಈ ಕೆಳಗಿನ ವಿಷಯವನ್ನು ಪಾಲಿಸಿ.

ನಿಂತುಕೊಂಡು ನೀರು ಕುಡಿಯಬೇಡಿ:

                ಗಮನವಿಡಿ ನೀರು ಕುಡಿಯ ಬೇಕಾದರೆ ತಪ್ಪದೇ ಕೂತು ಕುಡಿಯಿರಿ. ನಿಂತುಕೊಂಡು ಕುಡಿದರೆ ಅದು ನೇರವಾಗಿ ನಮ್ಮ ಜೀರ್ಣಾಂಗ ವ್ಯವಸ್ಥೆಗೆ , ವೇಗವಾಗಿ ಸರಿಯುತ್ತದೆ. ಈ ಕಾರಣದಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಮುಖ್ಯವಾಗಿ ಬೇಕಾಗಿರುವ ಪೋಷಕಾಂಶಗಳನ್ನು ಅದು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕುಳಿತಿಕೊಂಡು ನೀರು ಕುಡಿಯಿರಿ.

ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯಿರಿ:
                     ಅನಗತ್ಯವಾಗಿ ನೀರು ಕುಡಿಯುವುದು ಬಹಳ ತಪ್ಪು. ನಮ್ಮ ದೇಹಕ್ಕೆ ಅಗತ್ಯವಿದ್ದರೆ ಬಯರಿಕೆಯಾಗುವುದು ಸಹಜ ಹಾಗಾಗಿ ಕಟ್ಟುಕಥೆಗಳನ್ನು ನಂಬಿ ನೀರು ಕುಡಿಯಬೇಡಿ. ಅನಗತ್ಯವಾಗಿ ನೀರು ಕುಡಿದಾಗ ಅದು ನಮ್ಮ ಮೆದುಳಿಗೆ ತೊಂದರೆ ಸೃಷ್ಟಿ ಮಾಡಬಹುದು. ಬಾಯಾರಿಕೆ ಆದಾಗ ನೀರು ಕುಡಿದರೆ ದೇಹಕ್ಕೆ ನೀರನ್ನು ನುಂಗಲು ಕಷ್ಟವಾಗಬಹುದು. ವಿಪರೀತವಾದ ನೀರಿಂದ ನಮ್ಮ ದೇಹದ ಜೀವಕೋಶಗಳು ಹಿಗ್ಗಿಕೊಳ್ಳಬಹುದು.

ಊಟ ಮಾಡುವ ವೇಳೆ ನೀರು ಕುಡಿಯಬೇಡಿ:

                ಹಲವರು ಊಟವನ್ನು ಬಹಳ ವೇಗವಾಗಿ ಮುಗಿಸಲು ನೀರು ಕುಡಿಯುತ್ತಾರೆ ಆದರೆ ಇದು ಬಹಳ ಅನಾರೋಗ್ಯಕರ ಅಭ್ಯಾಸ. ವಿಪರೀತವಾದ ನೀರು ಆಹಾರವನ್ನು ಸರಿಯಾದ ರೀತಿಯಲ್ಲಿ ಜೀರ್ಣಗೊಳ್ಳಲು ಬಿಡುವುದಿಲ್ಲ . ಹಾಗಾಗಿ ನಾವು ಊಟ ಮಾಡುವ 30 ನಿಮಿಷದ ಮುಂಚೆ ನೀರು ಕುಡಿಯಬೇಕು ಅಥವಾ ಊಟ ಮಾಡಿದ ನಂತರ ನೀರು ಕುಡಿಯಬೇಕು.
           ಬಹಳ ತಣ್ಣಗಿರುವ ನೀರನ್ನು ಕೂಡ ಕುಡಿಯುವುದು ಬಹಳ ಅಪಾಯಕಾರಿ ಇದು ನಮ್ಮ ರಕ್ತದೊತ್ತಡವನ್ನು ಕಡಿಮೆಗೊಳಿಸಬಹುದು ಹಾಗಾಗಿ ನೀರು ಕುಡಿಯುವಾಗ ತಪ್ಪದೇ ಈ ನಿಯಮಗಳನ್ನು ಪಾಲಿಸಿ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.
– ತನ್ವಿ. ಬಿ

LEAVE A REPLY

Please enter your comment!
Please enter your name here