ಹಾಸನ : ಗ್ರಾನೈಟ್ ಉದ್ಯಮಿ ಕೃಷ್ಣೇಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟ ಒಟ್ಟು 12 ಆರೋಪಿಗಳಲ್ಲಿ ಸದ್ಯ ಪೊಲೀಸರು ಇಬ್ಬರು ಮಹಿಳೆಯರು ಸೇರಿ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ., ಪ್ರಕರಣದ ಪ್ರಮುಖ ಆರೋಪಿ ಯೋಗಾನಂದ ಎಂದು ತಿಳಿದು ಬಂದಿದ್ದು, ಸದ್ಯ ಆತ ತಲೆಮೆರೆಸಿಕೊಂಡಿದ್ದಾನೆ.
ಉಳಿದ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಪಬ್ಲಿಕ್ ಸ್ಟಾರ್ ಎಂಬ ಚಾನೆಲ್ ಹಾಗು ಸಿನಿಮಾ ನಿರ್ಮಾಣಕ್ಕೆ ಕೃಷ್ಣೇಗೌಡರಿಂದ ಹಣ ಹೂಡಿಕೆ ಮಾಡಿಕೆ ಮಾಡಿಸಿದ್ದು, ಆ ಹಣವನ್ನು ವಾಪಸ್ ಕೇಳಿದಾಗ ಯೋಗಾನಂದ ಹಾಗೂ ಸುರೇಶ್ ಸೇರಿಕೊಂಡು ಕೃಷ್ಣೇಗೌಡರ ಕೊಲೆಗೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ಹತ್ಯೆ ಮಾಡಿದ ಆರೋಪಿಗಳ ಜೊತೆ ಯೋಗನಂದ ತಲೆ ಮರೆಸಿಕೊಂಡಿದ್ದು, ಕೃಷ್ಣೇಗೌಡರ ಹತ್ಯೆಗೆ ಪ್ಲ್ಯಾನ್ ರೂಪಿಸಿದ್ದ ಆರು ಮಂದಿಯನ್ನು ಬಂಧಿಸಲಾಗಿದೆ.
ಈ ಕೊಲೆಗೆ ಆರು ತಿಂಗಳ ಹಿಂದೆಯೇ ಸಂಚು ರೂಪಿಸಲಾಗಿತ್ತು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.