ಡಾ: ಬಿ.ಆರ್. ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ಹಾಸನ

0

ಹಾಸನ ಡಿ.6 (ಹಾಸನ್_ನ್ಯೂಸ್) ದೇಶದ ಆಡಳಿತದ ದಿಕ್ಕು ಯಾವ ರೀತಿ ಇರಬೇಕು ಎಂದು ಬುನಾದಿ ಹಾಕಿಕೊಟ್ಟ ಹಾಗೂ ಸಮಾನತೆಯಿಂದ ಹೇಗೆ ಬದುಕಬೇಕು ಎಂಬುದನ್ನು ತಿಳಿಸಿ ಕೊಟ್ಟ ಮಹಾನ್ ವ್ಯಕ್ತಿ ಡಾ: ಬಿ.ಆರ್. ಅಂಬೇಡ್ಕರ್ ಅವರು  ಎಂದು ಶಾಸಕ ಹೆಚ್. ಕೆ.ಕುಮಾರಸ್ವಾಮಿ ತಿಳಿಸಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಭಾರತೀಯ ಬೌದ್ಧ ಸಭಾ ಹಾಗೂ ದಲಿತ ಸಂಘಟನೆಗಳ ವತಿಯಿಂದ ಏರ್ಪಡಿಸಿದ್ದ  ಡಾ: ಬಿ.ಆರ್. ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ದಿನಾಚರಣೆ  ಕಾರ್ಯಕ್ರಮ ದಲ್ಲಿ ಅವರು ಭಾಗವಹಿಸಿ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅವರು ಮಾತನಾಡಿ ದೇಶದ ಕೊಳಕನ್ನು ನಿವಾರಿಸಿದ ಮಹಾನ್ ಚೈತನ್ಯ, ಬಹಳಷ್ಟು ಕಾಲ ಬದುಕಬೇಕಿತ್ತು ಅವರು ಹಾಕಿಕೊಟ್ಟ ಸಂವಿಧಾನದ ಅಡಿಯಲ್ಲಿ ನಾನು ಶಾಸಕನಾಗಿದ್ದೇನೆ, ಡಾ: ಬಿ.ಆರ್ ಅಂಬೇಡ್ಕರ್ ಅವರು ಕೇವಲ ದಲಿತ ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ ಇತರೆ ಎಲ್ಲಾ ವರ್ಗಗಳಿಗೆ ಹಾಗೂ ದೇಶದ ಏಕತೆಗೆ  ತೋರಿದ ದಾರಿಯಲ್ಲಿ ನಡೆಯಬೇಕೆಂದು ಹೆಚ್.ಕೆ ಕುಮಾರಸ್ವಾಮಿ ತಿಳಿಸಿದರು.

     ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್ ಅವರು ಮಾತನಾಡಿ ಈ ದಿನ ನಮ್ಮ ದೇಶದ ಬೆಳಕು ಕೊನೆಯುಸಿರೆಳೆದ ದಿನ ಡಾ: ಬಿ .ಆರ್. ಅಂಬೇಡ್ಕರ್ ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತ ವರ್ಗಕ್ಕೂ ಸಮಾನತೆ ನೀಡಿದವರು ಅವರ ಆಶಯದಂತೆ ಹೆಣ್ಣುಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗದಂತೆ ಪೋಷಕರು ಆದ್ಯತೆ ನೀಡಬೇಕೆಂದರು.

    ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ದೇವಾಲಯಗಳಿಗಿಂತ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಬೇಕು ಎಂದು ಕೋವಿಡ್ ಕಾಲದಲ್ಲಿ ಆಸ್ಪತ್ರೆಗಳು ಉಪಯೋಗವಾಗಿದೆ ವರೆತು ದೇವಾಲಯಗಳಲ್ಲ ಎಂದು ಹೇಳಿದರು.

   ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ನಮ್ಮ ದೇಶಕ್ಕೆ 60 ದೇಶಗಳ ಸಂವಿಧಾನ ಅಧ್ಯಯನ ನಡೆಸಿ ಪ್ರಪಂಚದಲ್ಲೇ ಬೃಹತ್ ಸಂವಿಧಾನ ಕೊಟ್ಟು ದೇಶದ ಏಕತೆಗೆ   ಡಾ. ಬಿ.ಆರ್. ಅಂಬೇಡ್ಕರ್ ಅವರು ಬಲ ನೀಡಿದ್ದಾರೆ ಎಂದರು.

   ಸಂವಿಧಾನ ಆಶ್ರಯದಲ್ಲಿರುವ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಉತ್ತಮವಾದ ರೀತಿಯಲ್ಲಿ ಸೇವೆ ಸಲ್ಲಿಸಿದರೆ ಅವರ ಆಶಯಗಳನ್ನು ಈಡೇರಿಸಿದಂತೆ ಎಂದು ತಿಳಿಸಿದರು.

   ನಾವೆಲ್ಲರೂ ಒಂದೇ ಜಾತಿ ಒಂದೇ ಮತ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಜೊತೆ ಗೂಡಿ ಮುಂದೆ ಸಾಗಬೇಕೆಂದರು.

    ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ವರಿಷ್ಠ ಅಧಿಕಾರಿ ಬಿ.ಎನ್.ನಂದಿನಿ,  ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂಚಲಕುಮಾರಸ್ವಾಮಿ, ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ.ಶಿವಣ್ಣ ಮತ್ತು ವಿವಿಧ ಅಧಿಕಾರಿಗಳು ಹಾಗೂ ದಲಿತ ಪರ ಸಂಘಟನೆ ಮುಖಂಡರುಗಳ ಮತ್ತಿತರು  ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here