“ವೈದ್ಯರ ನಡೆ-ಹಳ್ಳಿಯ ಕಡೆ”
‘ಕೋವಿಡ್-19’ ಸೋಂಕು ಪ್ರಕರಣಗಳು ಹಳ್ಳಿಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿಭಿನ್ನ ಯೋಜನೆ “ವೈದ್ಯರ ನಡೆ- ಹಳ್ಳಿ ಕಡೆ” ಯನ್ನು ಇಂದು
ಹಾಸನ ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಮಾನ್ಯ ಉಸ್ತುವಾರಿ ಸಚಿವರಾದ ಶ್ರೀ ಗೋಪಾಲಯ್ಯನವರು ಉದ್ಘಾಟಿಸಿದರು . ವೈದ್ಯರ ತಂಡವು ಪ್ರತಿ ಗ್ರಾಮಗಳಿಗೆ ತೆರಳಿ ಕೋವಿಡ್ ಸೋಂಕಿತರಿಗೆ ಪ್ರಾಥಮಿಕ ಉಪಚಾರ ನೀಡಿ , ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವರು.
ಈ ಸಂದರ್ಭದಲ್ಲಿ
ಜಿಲ್ಲಾಧಿಕಾರಿಗಳು, ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಜೆ ಗೌಡ , ಜಿ.ಪಂ ಸಿಇಓ, ಡಿ.ಹೆಚ್.ಓ , ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು .
ಹಾಸನ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮಾಡಲು ‘ವೈದ್ಯರ ನಡೆ ಹಳ್ಳಿಯ ಕಡೆ’ ಅಭಿಯಾನದಡಿ 49 ವಾಹನಗಳಿಗೆ ಚಾಲನೆ ನೀಡಲಾಗುದ್ದು , ನಂತರ
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೊರೋನಾ ನಿಯಂತ್ರಣ ಕುರಿತಂತೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾಸಭೆ ನಡೆಸಿ ಕೋವಿಡ್ ಬಗ್ಗೆ ಮಾಹಿತಿ ಪಡೆದು ಸಲಹೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಈ ಸಂದರ್ಭದಲ್ಲಿ
ಡಿ.ಸಿ ಗಿರೀಶ್, ಶಾಸಕ ಪ್ರೀತಮ್ ಗೌಡ, ಸಿ.ಇ .ಒ ಪರಮೇಶ್, ಡಿ.ಹೆಚ್.ಒ ಸತೀಶ್ ಸೇರಿದಂತೆ ಜಿಲ್ಲಾ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.