Hassan Nagarasabha Budget 2022-23 Highlights

0

ಹಾಸನ ತಾಲ್ಲೂಕಿನ ಗೊರೂರು ಹೇಮಾವತಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ನಗರಸಭೆ ಅಧ್ಯಕ್ಷ ಆರ್‌. ಮೋಹನ್‌ ತಮ್ಮ ಚೊಚ್ಚಲ ಬಜೆಟ್ ಮಂಡನೆ :

ಬಜೆಟ್ ಹೈಲೈಟ್ಸ್ ಇಂತಿದೆ :
• ನಗರದ ಪಿಕ್ಚರ್‌ ಪ್ಯಾಲೇಸ್‌ ಚಿತ್ರಮಂದಿರದ ಹಿಂಭಾಗ ನಗರಸಭೆ ಹಳೇ ಕಚೇರಿ ಜಾಗದಲ್ಲಿ ಮತ್ತು ಕಸ್ತೂರಬಾ ರಸ್ತೆಯಲ್ಲಿರುವ ಹಳೆಯ ಪಂಪ್‌ಹೌಸ್‌ ಕಟ್ಟಡದ ಜಾಗದಲ್ಲಿ ಸುಸಜ್ಜಿತ ಮತ್ತು ಹೈಟೆಕ್‌ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ತಲಾ 5 ಕೋಟಿ‌ ರೂ ಮೀಸಲು
• ನಗರಸಭೆ ಕಚೇರಿ ಮುಂದುವರಿದ ಕಾಮಗಾರಿಗೆ  8 ಕೋಟಿ
• ಹೊಸ ಸುಸಜ್ಜಿತವಾದ ಸಗಟು ಮತ್ತು ಮೀನು ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕೆ 50 ಲಕ್ಷ
• ಆಧುನಿಕ ಕಸಾಯಿಖಾನೆ ನಿರ್ಮಾಣಕ್ಕೆ  50 ಲಕ್ಷ
• N.R. ವೃತ್ತದಲ್ಲಿ ರಸ್ತೆ ದಾಟಲು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ತಪ್ಪಿಸಲು ಮೇಲ್ಸೇತುವೆಗಳ ನಿರ್ಮಾಣ ಮಾಡಲು 2 ಕೋಟಿ ರೂ ಮೀಸಲು
• ನಗರದ ಎಲ್ಲಾ ವಾರ್ಡ್‌ಗಳಲ್ಲಿ ಇರುವ ಉದ್ಯಾನಗಳ ಅಭಿವೃದ್ಧಿಗೆ 2 ಕೋಟಿ
•  ನಗರದ ಹಸಿರೀಕರಣ ಉದ್ದೇಶದಿಂದ ಕೆರೆಗಳ ಪುನಶ್ಚೇತನ 20, 25ಲಕ್ಷ
• ಪಾರಂಪರಿಕ ಹಾಸನ ದನಗಳ ಜಾತ್ರಾ ಮಹೋತ್ಸವಕ್ಕೆ 5 ಲಕ್ಷ
• ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸೋ ಕಾರ್ಯಕ್ರಮಗಳಿಗೆ 15 ಲಕ್ಷ
• ಚಿಣ್ಣರ ಮೇಳ ಬೇಸಿಗೆ ಶಿಬಿರ ಆಯೋಜನೆಗೆ 5 ಲಕ್ಷ
• ಸಾಹಿತ್ಯ ಸಮ್ಮೇಳನ ಮತ್ತು ಪತ್ರಿಕಾ ದಿನಾಚರಣೆಗೆ 5 ಲಕ್ಷ
• ಸ್ಥಳೀಯ ಕ್ರೀಡಾಪಟುಗಳ ಪ್ರೋತ್ಸಾಹ ಧನ ನೀಡಲು 3 ಲಕ್ಷ 
• ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ 41 ಮನೆ ನಿರ್ಮಿಸಲು 42 ಲಕ್ಷ
• ಸಾರ್ವಜನಿಕ ಶೌಚಾಲಯಗಳ ಅಭಿವೃದ್ಧಿ, ಪೈಂಟಿಂಗ್, ಪ್ರಮುಖ ವೃತ್ತಗಳಲ್ಲಿ ಹೂವು ಗಿಡ ನೆಡುವುದು, ಗೋಡೆ ಬರಹ, ನೀರಿನ ಕಾರಂಜಿ ಅಭಿವೃದ್ಧಿ, ಡಿಸಿ ಕಚೇರಿ ಹಾಗೂ ಹೇಮಾವತಿ ಪ್ರತಿಮೆ ಮುಂಭಾಗ LED ಸ್ಕ್ರೀನ್ ಅಳವಡಿಕೆ, ಶಾಲೆ, ಆಸ್ಪತ್ರೆ, ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣೆಗೆ ಅರಿವು ಮೂಡಿಸೋದು ಈ ಎಲ್ಲ ವಿಷಯಕ್ಕೆ ಒಟ್ಟು  1 ಕೋಟಿ
• ನಗರದ ಎಲ್ಲಾ ವಾರ್ಡ್‌ಗಳ ಉಳಿಕೆ ರಸ್ತೆ ಕಾಮಗಾರಿಗಳಿಗೆ 8 ಕೋಟಿ, ನೀರು ಸರಬರಾಜು ಕಾಮಗಾರಿಗೆ  3 ಕೋಟಿ, ಒಳಚರಂಡಿಯ ಪ್ರಮುಖ ಮಾರ್ಗಗಳ UGD ಪೈಪ್‌ಗಳ ಅಳವಡಿಕೆಗೆ 1.5 ಕೋಟಿ 

2022–23ನೇ ಸಾಲಿನ ಒಟ್ಟು  130 ಕೋಟಿ ಆದಾಯ ನಿರೀಕ್ಷೆ : 2022–23ನೇ ಸಾಲಿಗೆ 2.57 ಕೋಟಿ ಉಳಿತಾಯದ ಬಜೆಟ್‌ ಮಂಡನೆಯಾಗಿದೆ

LEAVE A REPLY

Please enter your comment!
Please enter your name here