ಹಾಸನದ ಕೊಣನೂರಿನಲ್ಲಿ ನೂತನ 28 ಹಾಸಿಗೆಯ ಕೋವಿಡ್ 19 ಕೇಂದ್ರ ಉದ್ಘಾಟನೆ

0

ಇಂದು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ 28 ಹಾಸಿಗೆಯುಳ್ಳ ಕೋವಿಡ್-19 ಕೇಂದ್ರವನ್ನು ಉದ್ಘಾಟನೆ ಮಾಡಿದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ‌.ಗೋಪಾಲಯ್ಯ. ಈ ಸಂದರ್ಭದಲ್ಲಿ

ಜಿಲ್ಲಾಧಿಕಾರಿಯಾದ ಶ್ರೀ ಗಿರೀಶ್, ಶಾಸಕರಾದ ಶ್ರೀ ಎ ಟಿ ರಾಮಸ್ವಾಮಿ, ಡಿಎಚ್ಒ ಶ್ರೀ ಸತೀಶ್, ಸಿಇಒ ಶ್ರೀ ಪರಮೇಶ್ ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಜನರ ಜೀವ ಮತ್ತು ಜೀವನವನ್ನು ಗಮನದಲ್ಲಿಟ್ಟು ಸತತವಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರ ಮತ್ತು ಅಧಿಕಾರಿಗಳೊಂದಿಗೆ ಜನರು ಕೂಡ ಕೈಜೋಡಿಸುತ್ತಿದ್ದಾರೆ. ಕೋವಿಡ್ ಕೇಂದ್ರದ ಉದ್ಘಾಟನೆ ಸಂದರ್ಭ,

ಶ್ರೀಯುತ ಸುರೇಶ್ ಎಂಬ ಸಾರ್ವಜನಿಕರೊಬ್ಬರು ಮುಖ್ಯಮಂತ್ರಿಗಳ  ಪರಿಹಾರ ನಿಧಿಗೆ ರೂ. 1 ಲಕ್ಷ ದೇಣಿಗೆ ನೀಡಿದ್ದಾರೆ. ಅವರಿಗೆ ಕೃತಜ್ಞತೆಗಳು

Today, K.Gopalaiah inaugurated a new 28 bedded Covid treatment centre at Konanur Taluk of Hassan district. District Commissioner, Shri Girish, MLA, Shri A T Ramaswamy, DHO, Shri Satish, CEO, Shri Paramesh, and other officers were present during the occasion.

Karnataka Government along with its ministers and officers is working tirelessly in defeating the pandemic. And our citizens are also joining the fight in their own way possible. Shri Suresh donated Rs. 1 Lakh to Chief Minister’s Relief Fund and  sincerely thank him for his generosity.

“ಜಿಲ್ಲಾಧಿಕಾರಿ ಕಛೇರಿಯಲ್ಲಿ ವಿಡಿಯೋ ಸಂವಾದ”
ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರು ಕೋವಿಡ್ ೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here