ಇದು ಕೃಷ್ಣನ ಅಚ್ಚುಮೆಚ್ಚಿನ ಪದಾರ್ಥ. ಹಲವರಿಗೆ ಬೆಣ್ಣೆ ಎಂದರೆ ಬಹಳ ಇಷ್ಟ, ಆದರೆ ಇದರಲ್ಲಿ ಅಧಿಕ ಕೊಬ್ಬಿನಂಶವಿರುವುದರಿಂದ ಕೆಲವರು ದೂರವಿಡುತ್ತಾರೆ. ಆದರೂ ಬೆಣ್ಣೆ ಬಹಳ ಆರೋಗ್ಯಕರ.
ಬೆಣ್ಣೆಯ ಉಪಯೋಗಗಳು
• ಮಕ್ಕಳಿಗೆ ಬಹಳ ಸಹಾಯಕಾರಿ:
ಬೆಣ್ಣೆ ಮಕ್ಕಳ ಮೆದುಳಿನ ಬೆಳವಣಿಗೆಗೆ ಬಹಳ ಸಹಾಯಕರಿ ಇದರಲ್ಲಿರುವ ಕೊಬ್ಬಿನಾಂಶ ಮಕ್ಕಳಲ್ಲಿ ಪೋಷಕಾಂಶದ ಕೊರತೆ ಉಂಟುಮಾಡುವುದಿಲ್ಲ ಹಾಗಾಗಿ ಇದು ಮಕ್ಕಳಿಗೆ ಬಹಳ ಲಾಭಕಾರಿ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಮೆದುಳಿನಲ್ಲಿ ಗಡ್ಡೆ ಉಂಟಾಗುವುದನ್ನು ತಡೆಯುತ್ತದೆ.
• ದೈಹಿಕ ಶಕ್ತಿಗಾಗಿ
ಬೆಣ್ಣೆಯಲ್ಲಿ ಕೊಬ್ಬಿನಂಶವಿರುವುದರಿಂದ ಇದು ನಮ್ಮ ದೇಹಕ್ಕೆ ಬಹಳ ಶಕ್ತಿಯನ್ನು ತುಂಬುತ್ತದೆ.
ಇದರಲ್ಲಿ ಯಾವುದೇ ಟ್ರಾನ್ಸ್ ಫ್ಯಾಟ್ ಇರುವುದಿಲ್ಲ ಹಾಗಾಗಿ ಇದು ಶಕ್ತಿ ತುಂಬಲು ಬಹಳ ಸಹಾಯಕಾರಿ.
• ಒಳ್ಳೆಯ ತ್ವಚೆಯನ್ನು ನೀಡುತ್ತದೆ:
ಬೆಣ್ಣೆ ದೇಹಕ್ಕೆ ಮಾತ್ರವಲ್ಲ ತ್ವಚೆಗೆ ಕೂಡ ಉತ್ತಮ ಪರಿಣಾಮಗಳನ್ನು ಬೀರುತ್ತದೆ. ನಮ್ಮ ಮೈಗೇ ಇದನ್ನು ಹಚ್ಚಿಕೊಳ್ಳುವುದರಿಂದ ಯಾವುದೇ ನೆರಿಗೆಯೂ ಬೀಳುವುದಿಲ್ಲ ಮತ್ತು ನಮ್ಮ ಭಾಷೆಯನ್ನು ನೈಸರ್ಗಿಕವಾಗಿ ಮೊಯಿಶ್ಚರೈಸ್ ಮಾಡುತ್ತದೆ.
• ಗಾಯವನ್ನು ಒಣಗಿಸಲು ಲಾಭಕಾರಿ:
ಬೆಣ್ಣೆಯಲ್ಲಿ ವಿಟಮಿನ್ ಕೆ ಹೆಚ್ಚಿನ ಪ್ರಮಾಣದಲ್ಲಿದ್ದು ಗಾಯವಾದರೆ ರಕ್ತ ಬೇಗನೆ ಹೆಪ್ಪುಗಟ್ಟಿ ಅಧಿಕ ರಕ್ತ ಹರಿಯುವುದನ್ನು ನಿಲ್ಲಿಸುತ್ತದೆ ಮತ್ತು ಗಾಯವನ್ನು ಬೇಗ ಗುಣಪಡಿಸಲು ಸಹಾಯಕಾರಿಯಾಗುತ್ತದೆ.
• ಥೈರಾಯಿಡ್ ರೋಗಿಗಳಿಗೆ ಸಹಾಯಕಾರಿ:
ಬೆಣ್ಣೆ ತಿನ್ನುವುದರಿಂದ ವಿಟಮಿನ್ ಕೆ ಅಂಶ ಅಧಿಕವಾಗಿ ದೊರೆಯುತ್ತದೆ ಹಾಗಾಗಿ ಇದು ಥೈರಾಯಿಡ್ ಗ್ರಂಥಿ ಸರಿಯಾಗಿ ಕಾರ್ಯ ನಡೆಸುವಂತೆ ಮಾಡುತ್ತದೆ.
ಬೆಣ್ಣೆಯಲ್ಲಿ ಹಲವಾರು ಉಪಯೋಗಕರವಾದ ಗುಣಗಳಿವೆ ಹಾಗಾಗಿ ಕೊಬ್ಬಿನಂಶವೆಂದು ದೂರವಿಡಿ. ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶ ಮುಖ್ಯ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.
– ತನ್ವಿ. ಬಿ