ಚನ್ನರಾಯಪಟ್ಟಣ – ಕೊಡ್ಲಿಪೇಟೆ ಮಾರ್ಗವಾಗಿ ಮಾಕುಟ್ಟ ರಸ್ತೆಯನ್ನು ಮೇಲ್ದರ್ಜೆಗೇರಿಸುವಂತೆ ಮನವಿ.
ಮಾಜಿ ಪ್ರಧಾನಿ ಹಾಗೂ ರಾಜ್ಯ ಸಭಾ ಸದಸ್ಯರಾದ ಹೆಚ್.ಡಿ ದೇವೇಗೌಡರು ನವದೆಹಲಿಯಲ್ಲಿ ಇಂದು ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಹಾಸನ ಜಿಲ್ಲೆಯಲ್ಲಿ ಹಾದು ಹೋಗುವ ಕೇರಳ ರಾಜ್ಯ ಸಂಪರ್ಕಿಸುವ ಚನ್ನರಾಯಪಟ್ಟಣ- ಮಾಕುಟ್ಟ ರಸ್ತೆ (ಹೊಳೆನರಸೀಪುರ- ಅರಕಲಗೂಡು-ಮಲ್ಲಿಪಟ್ಟಣ – ಕೊಡ್ಲಿಪೇಟೆ – ಮಡಿಕೇರಿ – ಮಾಕುಟ್ಟ ಕೇರಳ) ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಯಾಗಿ ಮೇಲ್ದರ್ಜೆಗೆ ಏರಿಸಿ ನಾಲ್ಕು ಪಥದ ರಸ್ತೆ ಯನ್ನಾಗಿ ಪರಿವರ್ತಿಸಲು ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದರು .

ಸಚಿವರಾದ ನಿತಿನ್ ಗಡ್ಕರಿಯವರು ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಶೀಘ್ರದಲ್ಲೇ ಅನುಮೋದನೆ ನೀಡುವ ಭರವಸೆ ನೀಡಿದರು.
ಇದೇ ರೀತಿ ಜಿಲ್ಲೆಯ ಮತ್ತೊಂದು ರಾಷ್ಟ್ರೀಯ ಹೆದ್ದಾರಿ ಹೊಳೆನರಸೀಪುರ ತಾಲ್ಲೂಕಿನ ಯಡೆಗೌಡನಹಳ್ಳಿ- ಬಿಳಿಕೆರೆ ನಡುವಿನ ರಸ್ತೆ ಮತ್ತು ಹಾಸನ ಬೇಲೂರು ನಡುವಿನ ಎರಡು ಪಥದ ರಸ್ತೆಗಳನ್ನು ನಾಲ್ಕು ಪಥದ ರಸ್ತೆಗಳನ್ನಾಗಿ ಪರಿವರ್ತಿಸುವ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಅನುಮೋದನೆ ನೀಡುವಂತೆ ಮಾಜಿ ಪ್ರಧಾನಿ ಮನವಿ ಮಾಡಿದರು.ಇದಕ್ಕೂ ಸ್ಪಂದಿಸಿದ ಕೇಂದ್ರ ಹೆದ್ದಾರಿ ಸಚಿವರು ನಿತಿನ್ ಗಡ್ಕರಿಯವರು ಟೆಂಡರ್ ಕರೆಯಲು ಅನುಮೋದನೆಗೆ ಸಮ್ಮತಿಸಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ, ಶಾಸಕರುಗಳಾದ ಹೆಚ್.ಡಿ.ರೇವಣ್ಣನವರು, ಪುಟ್ಟರಾಜು ರವರು , ವಿಧಾನ ಪರಿಷತ್ ಸದಸ್ಯರಾದ ರಮೇಶ್ ಗೌಡ ಅವರು ಉಪಸ್ಥಿತರಿದ್ದರು