ನಾಳೆಯಿಂದ ಧರ್ಮಸ್ಥಳದಲ್ಲಿ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ.

0

ನಾಳೆಯಿಂದ ಧರ್ಮಸ್ಥಳದಲ್ಲಿ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ. ಅನ್ನಸಂತರ್ಪಣೆ, ಸೇವೆ, ವಸತಿ ಸೌಕರ್ಯ ಸ್ಥಗಿತಗೊಳಿಸಿರುವ ಬಗ್ಗೆ ದೇವಾಲಯದ ಪ್ರಕಟಣೆ.
ಜತೆಗೆ ವಾರಾಂತ್ಯದಲ್ಲಿ ಅಂದ್ರೆ ಶನಿವಾರ ಮತ್ತು ಭಾನುವಾರ ದೇವಾಲಯದಲ್ಲಿ ದರ್ಶನವು ಸಂಪೂರ್ಣ ಬಂದ್.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19ರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸರ್ಕಾರದ ನಿರ್ದೇಶನದಂತೆ ಮಾರ್ಗಸೂಚಿಯನ್ನು ನೀಡಿದ ಮೇರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ದಿನಾಂಕ: 05-08-2021 ರಿಂದ 15-08-2021ರ ವರೆಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಸೇವೆ, ಪ್ರಸಾದ, ಅನ್ನಸಂತರ್ಪಣೆ, ವಸತಿ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಲಾಗಿದೆ. ಹಾಗೂ ವಾರಾಂತ್ಯದಲ್ಲಿ (ಶನಿವಾರ/ಭಾನುವಾರ) ದೇವರ ದರ್ಶನವನ್ನೂ ನಿರ್ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here