ಇಂದು ದೆಹಲಿಯಲ್ಲಿ ನೂತನ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರನ್ನು ಮಾಜಿ ಪ್ರಧಾನಿ ಹಾಗೂ ರಾಜ್ಯ ಸಭಾ ಸದಸ್ಯರು ಹೆಚ್.ಡಿ.ದೇವೇಗೌಡರು ಭೇಟಿ

0

ಇಂದು ದೆಹಲಿಯಲ್ಲಿ ನೂತನ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರನ್ನು ಮಾಜಿ ಪ್ರಧಾನಿ ಹಾಗೂ ರಾಜ್ಯ ಸಭಾ ಸದಸ್ಯರು ಹೆಚ್.ಡಿ.ದೇವೇಗೌಡರು ಭೇಟಿ ಮಾಡಿ ಜಿಲ್ಲೆಯ ರೈಲ್ವೆ ಯೋಜನೆಗಳಾದ ಹಾಸನ – ಬೇಲೂರು – ಚಿಕ್ಕಮಗಳೂರು ಹೊಸ ಮಾರ್ಗಕ್ಕೆ ಭೂ ಸ್ವಾಧೀನ ಮತ್ತು ಕಾಮಗಾರಿ ಕೈ ಗೊಳ್ಳುವುದು

ಮೈಸೂರು – ಅರಸೀಕೆರೆ ನಡುವೆ ಹೆಚ್ಚುವರಿಯಾಗಿ ಪುಷ್ ಪುಲ್ ಪುಲ್ ರೈಲು ಸಂಚಾರ, ಸ್ವರ್ಣ ಜಯಂತಿ(12781) ಮೈಸೂರು ನಿಜಾಮುದ್ದೀನ್ ರೈಲು (ದೆಹಲಿಗೆ ಸಂಚರಿಸುವ) ಹೊಳೆನರಸೀಪುರ ನಿಲ್ದಾಣದಲ್ಲಿ ನಿಲುಗಡೆ ಕೊಡುವ ಬಗ್ಗೆ , ಹಾಸನದ ಹೊಸ KSRTC ಬಸ್ ನಿಲ್ದಾಣದ ಬಳಿ ಹೊಸ ರೈಲ್ವೆ ನಿಲ್ದಾಣ ನಿರ್ಮಾಣ , ಹೊಳೆನರಸೀಪುರದ ಹಂಗರಹಳ್ಳಿ ಬಳಿ ರೈಲ್ವೆ ಮೇಲ್ಸೆತುವೆ ಕಳಪೆ ಕಾಮಗಾರಿಯಾಗಿದ್ದು ಹೊಸದಾಗಿ ಮೇಲ್ಸೇತುವೆ ನಿರ್ಮಾಣ ಮಾಡುವ ಬಗ್ಗೆ , ಹೊಳೆನರಸೀಪುರ ಪಟ್ಟಣದಲ್ಲಿ LC 78 ರಲ್ಲಿ kilometre 87/575 ಮೈಸೂರು – ಅರಸೀಕೆರೆ ಭಾಗದಲ್ಲಿ ಎರಡು ರೈಲ್ವೆ ಅಂಡರ್ ಪಾಸ್ ನಿರ್ಮಾಣ, LC 78 ರಲ್ಲಿ kilometre ನಲ್ಲಿ ಮೈಸೂರು ಅರಸೀಕೆರೆ ಭಾಗದಲ್ಲಿ ಹೊಸದಾಗಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಯನ್ನು 2021 ರ item No 122 ನ್ನು ರೈಲ್ವೆ ಇಲಾಖೆಯ pink book ನಲ್ಲಿ ಸೇರಿಸಿ ಟೆಂಡರ್ ಕರೆಯಲು ಹಾಗೂ ಜಿಲ್ಲೆಯ ಇನ್ನಿತರ ರೈಲ್ವೆ ಯೋಜನೆಗಳ ಮಂಜೂರಾತಿ ನೀಡುವಂತೆ ಮನವಿ ಮಾಡಿದರು.

ಗೌಡರ ಮನವಿ ಸ್ಪಂದಿಸಿ ಕೇಂದ್ರ ರೈಲ್ವೆ ಸಚಿವರು ಅಶ್ವಿನಿ ವೈಷ್ಣವ್ ರವರು ತಾವು ಸಲ್ಲಿಸಿರುವ ಹಾಸನ ಜಿಲ್ಲೆಯ ಯೋಜನೆ ಗಳಿಗೆ ಅನುಮೋದನೆ ನೀಡಿ ಎಲ್ಲಾ ಯೋಜನೆಗಳನ್ನು ಚಾಲನೆ ನೀಡುವ ಭರವಸೆ ನೀಡಿದರು.ಜೊತೆಯಲ್ಲಿ ಮಾಜಿ ಸಚಿವರು ಹಾಗೂ ಶಾಸಕರು ಹೆಚ್.ಡಿ.ರೇವಣ್ಣನವರು, ವಿಧಾನ ಪರಿಷತ್ ಸದಸ್ಯರು ರಮೇಶ್ ಗೌಡ ಜೊತೆಯಲ್ಲಿ ಇದ್ದರು.

LEAVE A REPLY

Please enter your comment!
Please enter your name here