Home NATIONAL NEWS ಸಾಧ್ಯವಾದರೆ ಕೋವಿಡ್ ನಿಂದ ಸಮಸ್ಯೆಗೊಳಗಾದವರಿಗೆ, ಹಿರಿಯ ನಾಗರೀಕರಿಗೆ, ಬಡವರಿಗೆ ಸಹಾಯಮಾಡಿ – ಪ್ರಜ್ವಲ್ ರೇವಣ್ಣ

ಸಾಧ್ಯವಾದರೆ ಕೋವಿಡ್ ನಿಂದ ಸಮಸ್ಯೆಗೊಳಗಾದವರಿಗೆ, ಹಿರಿಯ ನಾಗರೀಕರಿಗೆ, ಬಡವರಿಗೆ ಸಹಾಯಮಾಡಿ – ಪ್ರಜ್ವಲ್ ರೇವಣ್ಣ

0

ಹಾಸನ‌ ಲೋಕಸಭಾ ಕ್ಷೇತ್ರದ ಸದಸ್ಯರು ಆದ ಶ್ರೀ ಪ್ರಜ್ವಲ್ ರೇವಣ್ಣ ಅವರಿಗೆ ಇಂದು 31 ನೇ ಹುಟ್ಟು ಹಬ್ಬದ ಸಂಭ್ರಮ

ಪ್ರಜ್ವಲ್ ರೇವಣ್ಣ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ ಅವರ ಮನವಿ ಹೀಗಿದೆ :

” ಪ್ರೀತಿಯ ಸ್ನೇಹಿತರೇ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರೇ,

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಾಳೆ 05.08.2021 ನನ್ನ ಹುಟ್ಟಿದ ದಿನ, ಪ್ರತಿವರ್ಷ ನೀವೆಲ್ಲಾ ನಾನು ಇರುವಲ್ಲಿಗೆ ಬಂದು ವಿವಿಧ ರೀತಿಯ ಉಡುಗೊರೆಗಳೊಂದಿಗೆ ಶುಭ ಹಾರೈಕೆಗಳನ್ನು ಸಲ್ಲಿಕೆ ಮಾಡುತ್ತಿದ್ದಿರಿ. ಆದರೆ ಕಳೆದ ಎರಡು ವರ್ಷಗಳಿಂದ ಕೊರೋನಾ ಎಂಬ ಸಾಂಕ್ರಾಮಿಕ ರೋಗದಿಂದ ಇಡೀ ವಿಶ್ವವೇ ನರಳುತ್ತಿದೆ ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ನಾವೆಲ್ಲರೂ ವೈಯಕ್ತಿಕ ಅಂತರದ ಜೊತೆಗೆ ಸರ್ಕಾರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಜೊತೆಗೆ ದೆಹಲಿಯಲ್ಲಿ ನಡೆಯುತ್ತಿರುವ ಲೋಕಸಭಾ ಅಧಿವೇಶನದಲ್ಲಿ ಪಾಲ್ಗೊಂಡಿರುವ ಕಾರಣದಿಂದ ನಾನು ಯಾರಿಗೂ ಲಭ್ಯವಿರುವುದಿಲ್ಲ.

ಈ ಕಾರಣದಿಂದ ನನ್ನ ಅಭಿಮಾನಿಗಳು, ಸ್ನೇಹಿತರು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ನೀವಿರುವಲ್ಲಿಂದಲೇ ಶುಭ ಹಾರೈಕೆಗಳನ್ನು ಸಲ್ಲಿಸಿ,ನಿಮ್ಮ ಶುಭಾಶಯಗಳು ನನಗೆ ತಲುಪುತ್ತವೆ. ಸಾಧ್ಯವಾದರೆ ಕೋವಿಡ್ ನಿಂದ ಸಮಸ್ಯೆಗೊಳಗಾದವರಿಗೆ, ಹಿರಿಯ ನಾಗರೀಕರಿಗೆ, ಬಡವರಿಗೆ ಹಾಗೂ ವಿಶೇಷ ಚೇತನರಿಗೆ ಸಹಾಯ ಮಾಡುವ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ.

ಕಡೆಯದಾಗಿ ನನ್ನ ಎಲ್ಲ ಹಿತೈಷಿಗಳಿಗೆ, ಮಾರ್ಗದರ್ಶಕರಿಗೆ ಹಾಗೂ ಗುರುಹಿರಿಯರಿಗೆ ವಂದಿಸಿ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಆಶಿಸುತ್ತೇನೆ “. ಎಂದು ಮನವಿ ಮಾಡಿದ್ದಾರೆ

NO COMMENTS

LEAVE A REPLY

Please enter your comment!
Please enter your name here

error: Content is protected !!
%d bloggers like this: