ಹಾಸನ ಸೆ.14 : ಮುಖ್ಯ ಮಂತ್ರಿಯವರ ಆದೇಶದಂತೆ ಸೆ.17ರಂದು ರಾಜ್ಯಾದ್ಯಂತ ಕೋವಿಡ್ ಲಸಿಕಾ ಮೇಳ ನಡೆಯುತ್ತಿದ್ದು, ಹಾಸನ ಜಿಲ್ಲೆಯಲ್ಲಂದು 80 ಸಾವಿರದಂತೆ ಗರಿಷ್ಠ ಜನರಿಗೆ ಲಸಿಕೆ ಹಾಕುವುದರ ಮೂಲಕ ಉದ್ದೇಶಿತ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಸೆ.17ರಂದು ಬೃಹತ್ ಲಸಿಕಾ ಮೇಳ ನಡೆಸುವಂತೆ ಮುಖ್ಯಮಂತ್ರಿಯವರು ಆದೇಶ ನೀಡಿದ್ದು, ಜಿಲ್ಲೆಯಲ್ಲಿ 80 ಸಾವಿರ ಕೋವಿಡ್ ಲಸಿಕಾ ಗುರಿ ಸಾಧಿಸುವುದರ ಮೂಲಕ ಲಸಿಕಾ ಮೇಳವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಮಾತನಾಡಿ ರಾಜ್ಯಕ್ಕೆ 30 ಲಕ್ಷ ಲಸಿಕೆ ನೀಡುವಂತೆ ನಿರ್ದಿಷ್ಟ ಗುರಿ ನಿಗದಿಪಡಿಸಲಾಗಿದೆ. ಪ್ರತಿನಿತ್ಯ ಮೂರುವರೆ ಲಕ್ಷದಷ್ಟು ಪೂರೈಕೆಯಾಗುತ್ತಿದ್ದು, ಲಸಿಕಾ ಮೇಳದಂದು 11 ಲಕ್ಷದಷ್ಟು ಲಸಿಕೆ ನೀಡಲಾಗಿದೆ ಎಂದರಲ್ಲದೇ, ಸೆ.17 ರಂದು ಸಂಪೂರ್ಣ ಲಸಿಕಾ ಗುರಿ ತಲುಪುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಬಳ್ಳಾರಿ, ಯಾದಗಿರಿ, ರಾಯಚೂರು ಹಾಗೂ ಗುಲ್ಬರ್ಗಾ ಜಿಲ್ಲೆಗಳು ಶೇ.60 ಕ್ಕಿಂತ ಕಡಿಮೆ ಲಸಿಕಾ ಗುರಿ ಸಾಧಿಸಿದ್ದು, ಹೆಚ್ಚಿನ ಗಮನ ಹರಿಸುವಂತೆ ತಿಳಿಸಿದರಲ್ಲದೇ, ಹಾಸನ ಜಿಲ್ಲೆಯು ನಿರ್ದಿಷ್ಠ ಗುರಿ ಸಾಧಿಸಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲಾ ಜಿಲ್ಲಾಧಿಕಾರಿಗಳು ಖಾಸಗಿ ಆಸ್ಪತ್ರೆಯ ವೈದ್ಯರೊಂದಿಗೆ ಸಭೆ ನಡೆಸಿ ಗುರಿ ತಲುಪುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎ.ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ಸತೀಶ್, ಆರ್.ಸಿ.ಹೆಚ್. ಅಧಿಕಾರಿ ಡಾ|| ಕಾಂತ್ರಾಜ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ||ಕೃಷ್ಣಮೂರ್ತಿ ಹಾಗೂ ಮತ್ತಿತರರು ಹಾಜರು #hassandc #covidupdates #covidupdateskarnataka #covidawareness #basavarajbommai
Home COVID-19 Updates Hassan District Updates ರಾಜ್ಯದಲ್ಲಿ ಸೆ.17ರಂದು ಬೃಹತ್ ಲಸಿಕಾ ಮೇಳ : ಹಾಸನದಲ್ಲಿ ಬರೋಬ್ಬರಿ 80,000 ಜನರಿಗೆ ಕೋವಿಡ್ ಲಸಿಕೆ...