2010 ರಲ್ಲಿ ಪುರಸಭೆ ಅಧ್ಯಕ್ಷರಾಗಿದ್ದವರು ಹೀಗೆ ಆತ್ಮಹತ್ಯೆ ಗೆ ಶರಣಾಗಿದ್ದು

0

ಹೊಳೆನರಸೀಪುರ: ಸ್ಥಳೀಯ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಜಿಕ್ರುಲ್ಲಾ ಷರೀಫ್ (55).ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪಟ್ಟಣದ ದೊಡ್ಡ ಮಸೀದಿ ಬೀದಿ ನಿವಾಸಿ ಯಾಗಿರುವ ಜಿಕ್ರುಲ್ಲಾ ಷರೀಫ್,ಬುಧವಾರ ಮುಂಜಾನೆ ವಿಷ(ಆಸಿಡ್) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಕೂಡಲೇ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಿ ನಂತರ ಹಾಸನ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ವೃತ್ತಿಯಲ್ಲಿ ಹಣ್ಣಿನ ವ್ಯಾಪಾರಿ ಯಾಗಿದ್ದ ಇವರು, ಸರಳ ಜೀವನ ನಡೆಸುತ್ತಿದ್ದರು. ಆದರೆ ವ್ಯಾಪಾರ ಕೈಕೊಟ್ಟಿದ್ದರಿಂದ ವಿಪರೀತ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಇದೇ ಕಾರಣಕ್ಕೆ ವಾಸದ ಮನೆ ಮಾರಾಟ ಮಾಡಲು ಮುಂದಾಗಿದ್ದರು. ಗುರುವಾರ ಅದರ ರಿಜಿಸ್ಟ್ರೇಷನ್ ಇತ್ತು. ಇದಕ್ಕೂ ಮುನ್ನ ಜಿಕ್ರುಲ್ಲಾ ಷರೀಫ್ ತೀವ್ರವಾಗಿ ನೊಂದು ಖಿನ್ನತೆಗೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ. ಕಳೆದ 20 ವರ್ಷಗಳಿಂದ 3ನೇ ವಾರ್ಡ್‌ನಿಂದ ಮೃತರು ತಾಯಿ, ಪತ್ನಿ ಹಾಗೂ ಐವರು ಜೆಡಿಎಸ್ ಸದಸ್ಯರಾಗಿ ಗೆದ್ದು ಪುರಸಭೆ ಸದಸ್ಯರಾಗಿದ್ದ ಮಕ್ಕಳನ್ನು ಅಗಲಿದ್ದಾರೆ. ಸಂಜೆ ಅಂತ್ಯಕ್ರಿಯೆ ನಡೆಯಿತು

ಮೃತರು, 2010 ರಲ್ಲಿ ಪುರಸಭೆ ಅಧ್ಯಕ್ಷರಾಗಿದ್ದವರು ಹೀಗೆ ಆತ್ಮಹತ್ಯೆ ಗೆ ಶರಣಾಗಿದ್ದು ಹೊಳೆನರಸೀಪುರ ದಲ್ಲಿ ಸಾರ್ವಜನಿಕ ವಲಯದಲ್ಲಿ ಆಶ್ಚರ್ಯವಾಗಿದೆ.

LEAVE A REPLY

Please enter your comment!
Please enter your name here