ಹಾಸನ / ಚಿಕ್ಕೋಡಿ : ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ನೌಕರರ ಹೆದರಿಸಿ/ಬೆದರಿಸಿ ಆನ್ಲೈನ್ ಮೂಲಕ ಹಣ ಸುಲಿಗೆ ಮಾಡಿದ ಇಬ್ಬರು ವಂಚಕರಾದ , ಚಿಕ್ಕೋಡಿ ಮೂಲದ ಮುರುಗೆಪ್ಪ ನಿಂಗಪ್ಪ ಕುಂಬಾರ ಮತ್ತು ಸಕಲೇಶಪುರ ತಾಲೂಕು ಮೂಗಲಿ ಗ್ರಾಮದ ರಜನಿಕಾಂತ್ ಬಂಧಿತ ಆರೋಪಿಗಳ ಬಂಧನ ಆಗಿದೆ .
ಇವರಿಬ್ಬರು ಈ ಹಿಂದೆ ರಾಜ್ಯಾದ್ಯಂತ ವಿವಿಧ ಇಲಾಖೆಯ ಅಧಿಕಾರಿಗಳ ವಂಚಿಸಿರುವ ಆರೋಪದಡಿ ಪ್ರಕರಣ ದಾಖಲಾಗಿತ್ತು. ಇವರನ್ನು ಬಂಧಿಸಲು ವಿಶೇಷ ACB ತಂಡ ರಚನೆ ಮಾಡಲಾಗಿ., ಶುಕ್ರವಾರ (27.05.2022) ಇಬ್ಬರೂ ವಂಚಕರು ಹಾಸನದಲ್ಲಿ ಸಿಕ್ಕಿಬಿದ್ದಿದ್ದೇ ರೋಚಕ., ಆರೋಪಿಗಳಿಂದ ಸಿಮ್ ಕಾರ್ಡ್ ಮೊಬೈಲ್ ಇತರೆ ವಸ್ತುಗಳ ವಶಪಡಿಸಿಕೊಳ್ಳಲಾಗಿದೆ.

ಮುರುಗೆಪ್ಪ ನಿಂಗಪ್ಪ ಕುಂಬಾರ ರಾಜ್ಯಾದ್ಯಂತ ಸುಮಾರು 40+ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ರಜನಿಕಾಂತ್ ಎಂಬುವವ 6+ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಎನ್ನಲಾಗಿದ್ದು ಆರೋಪಿಗಳು ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ , ಮೊಬೈಲ್ ಖರೀದಿಸಿ ವಿವಿಧ ಇಲಾಖೆ ನೌಕರರಿಗೆ ಕರೆ ಮಾಡಿ ACB ದಾಳಿ ಮಾಡುವುದಾಗಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರಂತೆ .
ಅಂತೂ ಈ ಮದ್ಯೆ ಭ್ರಷ್ಟ ಅಧಿಕಾರಿಗಳ ಹಿಡಿಯೋ ಹೆಸರಿನಲ್ಲಿದ್ದ ಮಹಾ ಭ್ರಷ್ಟರ ಎಡೆಮುರಿ ಜಿಲ್ಲಾ ಪೊಲೀಸರು ಕಟ್ಟಿದ್ದಾರೆ .
ಅಭಿನಂದನೆಗಳು ಇವರಿಗೆ ಹಾಸನ ಜನತೆಯ ಪರವಾಗಿ.