ಹೊನ್ನಾಳಿಯ ದೇವರ ಗಣಮಗನ ಹತ್ಯೆ ಪ್ರಕರಣ : ಹಾಸನದ ದಿನೇಶ್ ದೊರೆಸ್ವಾಮಿ (38) ಸೇರಿ ಐವರು ಆರೋಪಿಗಳ 48ಗಂಟೆ ಒಳಗೆ ಬಂಧನ

0

ಹೊನ್ನಾಳಿಯ ದೊಡ್ಡಕೇರಿ ಬೀರಲಿಂಗೇಶ್ವರ ದೇವರ ಗಣಮಗ HK. ಕುಮಾರ್ ಅವರ ಕೊಲೆ ಪ್ರಕರಣವ ದೇವರಾಜ್(CPI) ಅವರು ಕೊಲೆಯಾದ 48 ಗಂಟೆಗಳಲ್ಲಿಯೇ ತಮ್ಮ ಕೌಶಲದಿಂದ ಬಸವನಗೌಡ ಬಿರಾದರ್(PSI) ಹಾಗೂ ಇತರೆ ಸಾಕ್ಷಿದಾರರ ತ್ವರಿತ ವಿಚಾರಣೆಯಿಂದ ಪತ್ತೆ ಹಚ್ಚಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿ ,

ಏನಿದು ಕೊಲೆ ಪ್ರಕರಣ ?
ಹೊನ್ನಾಳಿಯ ಬಿ.ಎಸ್. ಮೋಹನ್, ಹಾಸನದ ದಿನೇಶ್ (ಕಡದಾರವಳ್ಳಿ ಗ್ರಾಮ, ಹಾಸನ ತಾಲ್ಲೂಕು) ಅವರು ಕುಮಾರ್ ಅವರೊಂದಿಗೆ ಕೆಲ ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಇತ್ತೀಚೆಗೆ ಹಣಕಾಸಿನ ವಿಚಾರದಲ್ಲಿ ವೈಷಮ್ಯ ಉಂಟಾಗಿ ‌,  ಕುಮಾರ್ ಅವರು ಮೋಹನ್ ಮತ್ತು ದಿನೇಶ್ ಅವರ ಬಳಿ ರಿಯಲ್ ಎಸ್ಟೇಟ್‌ನಲ್ಲಿ ತಾವು ತೊಡಗಿಸಿದ್ದ ಹಣವನ್ನು ( 20 ಲಕ್ಷ ), ವಾಪಸ್‌ ನೀಡುವಂತೆ ಕೇಳಿದ್ದಾಗಿಯು .  ಹಣವನ್ನು ವಾಪಸ್‌ ಕೊಡದೇ ತಮ್ಮಲ್ಲಿಯೇ ಇಟ್ಟುಕೊಳ್ಳುವ ದುರುದ್ದೇಶದಿಂದ ಮತ್ತು ಇತರ ಹಣದ ವ್ಯವಹಾರವನ್ನು ಮುಚ್ಚಿ ಹಾಕುವ ಯೋಜನೆಯಿಂದ ಮೋಹನ್ ಮತ್ತು ದಿನೇಶ್ ಸೇರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.,

ಕೊಲೆ ಹೇಗಾಯ್ತು ,‌ ಯಾರ್ಯಾರು ಏನೇನು ಸ್ಕೆಚ್ ಹಾಕಿದ್ದರು ?
ಹೊನ್ನಾಳಿಯ ಮೋಹನ್ ಹರಿಹರ ತಾಲ್ಲೂಕಿನ ಹಿಂಡಸಘಟ್ಟ ಕ್ಯಾಂಪ್‌ನ ಕಾರ್ತೀಕ್‍ಕುಮಾರ್ ನಾಯ್ಕ, ಪರಮೇಶ್ ನಾಯ್ಕ , ಸುನೀಲ್ ನಾಯ್ಕ ಅವರಿಗೆ  3 ಲಕ್ಷಕ್ಕೆ ಸುಪಾರಿ ನೀಡಿ , ಈ ಸಂಬಂಧ ಕೇವಲ  2,000 ಮುಂಗಡ(Adv) ನೀಡಿದ್ದಾರೆ. ಈ ಮೂರು ಜನರನ್ನು ಕೊಲೆ ನಡೆಯುವ ಒಂದು ದಿನ ಮುಂಚಿತವಾಗಿ ಹೊನ್ನಾಳಿಗೆ ಕರೆಸಿಕೊಂಡು ಒಳ ಸಂಚು ರೂಪಿಸಿ. ಮರಳಿ ನೀಡಬೇಕಾದ ಹಣವನ್ನು ಕೊಡುತ್ತೇವೆ ಎಂದು ನಂಬಿಸಿ ಕುಮಾರ ಅವರನ್ನು, ಕಾರಿನಲ್ಲಿ ಎಚ್. ಕಡೆದಕಟ್ಟೆ ಸಮೀಪದ ಟವರ್ ಬಳಿ ಇರುವ ಜಮೀನಿಗೆ ಕರೆಸಿಕೊಂಡು ., ಇದಕ್ಕೂ ಮುಂಚಿತವಾಗಿ ಹೊಂಚು ಹಾಕಿ ಕುಳಿತಿದ್ದ ಮೂವರು ಪಾತಕಿಗಳ ಸಮೂಹ ಕುಮಾರ ಅವರ ಕುತ್ತಿಗೆಗೆ ಹಿಂದಿನಿಂದ ಟವೆಲ್ ಹಾಕಿ ಬಿಗಿದು ಕುತ್ತಿಗೆಗೆ ನಾಲ್ಕೈದು ಬಾರಿ ಚಾಕುವಿನಿಂದ ಇರಿದು, ಮಚ್ಚಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ .

ಕೊಲೆಯಾದ 48 ಗಂಟೆಗಳಲ್ಲಿಯೇ ಹೊನ್ನಾಳಿಯ ಬಿ.ಎಸ್. ಮೋಹನ್ ಸಣ್ಣರಾಯಪ್ಪ (28), ಹಾಸನದ ದಿನೇಶ್ ದೊರೆಸ್ವಾಮಿ (38), ಹರಿಹರ ತಾಲ್ಲೂಕಿನ ಹಿಂಡಸಘಟ್ಟ ಕ್ಯಾಂಪ್‌ನ ಕಾರ್ತಿಕ್‍ಕುಮಾರ್ ನಾಯ್ಕ (29), ಪರಮೇಶ್‍ ನಾಯ್ಕ (30), ಸುನೀಲ್ ನಾಯ್ಕ (24) ಅವರ ಪೊಲೀಸರು ಬಂಧಿಸಿ,  ಕೃತ್ಯಕ್ಕೆ ಬಳಸಿದ್ದ ಮೋಟರ್ ಬೈಕ್, ಚಾಕು , ಆಯುಧಗಳನ್ನು ವಶ ಪಡಿಸಿ ಜೈಲಿಗಟ್ಟಿದ್ದಾರೆ .

LEAVE A REPLY

Please enter your comment!
Please enter your name here