ಮನೆಯ ಸಮೀಪದ ಈ ರಸ್ತೆಯಲ್ಲೇ ಮುಗಿಸಲು ಹೊಂಚು ಹಾಕಲಾಗಿತ್ತು

0

ಹಾಸನ : ನಗರಸಭೆ ಸದಸ್ಯ ಗಾಣಿಗ ಸಮುದಾಯದ ಮುಖಂಡ ದಿ.ಹಾ.ರಾ.ನಾಗರಾಜ್‌ ಅವರ ಪತ್ರ ಪ್ರಶಾಂತ್ ನಾಗರಾಜ್‌ ಹತ್ಯೆಗೆ ಯೋಜನೆ ರೂಪಿಸಿದ್ದು ಕೋತಿ ಶಿವ ಎಂಬ ವ್ಯಕ್ತಿ ಎಂಬುದು ಬೆಳಕಿಗೆ ಈ ಪ್ರಕರಣದ ತನಿಖೆ ನಡೆಸುತಿರುವ CID ತನಿಖಾ ತಂಡದ ಎದುರು ಹತ್ಯೆ ಪ್ರಕರಣದ ಆರೋಪಿಗಳು ಒಂದೊಂದೇ ಅಂಶವನ್ನು ಬಾಯಿ ಬಿಡುತ್ತಿದ್ದಾರೆ. ಇದರಿಂದ ಈ ಹತ್ಯೆ ಪ್ರಕರಣಕ್ಕೆ ಕಳೆದ 6 ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು ಎಂಬುದು ಗೊತ್ತಾಗಿದೆ. ಪ್ರಶಾಂತ್ ನಾಗರಾಜ್ ಅವರನ್ನು ಅಡ್ಲಿಮನೆ ರಸ್ತೆಯ

ಅವರ ಮನೆಯ ಸಮೀಪದಲ್ಲೇ ಮುಗಿಸಲು ಹೊಂಚು ಹಾಕಲಾಗಿತ್ತಂತೆ, ಅಡ್ಲಿಮನೆ ರಸ್ತೆಯಲ್ಲಿ ರುವ ಸಣ್ಣ ಬಾರ್ ಮುಂದೆ ಕೊಚ್ಚಿ ಕೊಲೆ ಮಾಡಲು ಈ ತಂಡ ನಿರ್ಧರಿಸಿತ್ತು. ಆದರೆ ಅಂದು ಪ್ರಶಾಂತ್ ತಮ್ಮ ದ್ವಿಚಕ್ರ ವಾಹನವನ್ನು ಇಲ್ಲಿಯೇ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಅವರ ಸ್ನೇಹಿತರು ಮಾತಿಗೆಳೆದಿದ್ದ ರಿಂದ

ಬಚಾವ್‌ ಆಗಿದ್ದರು. ಈ ಒಂದೊಂದೇ ಅಂಶಗಳು ಈಗ ಬಯಲಾಗುತ್ತಲೇ ಇವೆ. CID ತಂಡ 11 ಜನರನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಇದರಲ್ಲಿ ಪ್ರಮುಖ ಆರೋಪಿಗಳಾದ ಪೂರ್ಣಚಂದ್ರ ಅಲಿಯಾಸ್ ಮೀನು ಚಂದು ಪೂರ್ಣಚಂದ್ರ ಮತ್ತು ಸಚಿನ್ ಇವರಿಬ್ಬರು ಪ್ರಶಾಂತ್ ಮೇಲೆ ಹಗೆತನ ಹೊಂದಿದ್ದರು. ಆರೋಪಿ ಪೂರ್ಣಚಂದ್ರನಂತೂ ಪ್ರಶಾಂತ್ ವಿರುದ್ಧ ಮಸಲತ್ತು ನಡೆಸುತ್ತಲೇ ಪ್ರಶಾಂತ್ ಹತ್ಯೆಗೆ ನಿಜವಾದ ಕಾರಣವೇನು ಎಂಬುದರ ಬಗ್ಗೆಯೂ CID ತಂಡ ಬಾಯಿ ಬಿಡಿಸುತ್ತಿದೆ. ನಂಬಲರ್ಹ ಮೂಲಗಳ ಪ್ರಕಾರ, ಪ್ರಶಾಂತ್ ಹತ್ಯೆಗೆ

ವೈಯಕ್ತಿಕ ದ್ವೇಷ ಕಾರಣ ಎಂದು ಗೊತ್ತಾಗಿದೆ. ಪೂರ್ಣಚಂದ್ರ ಹಾಗೂ ಪ್ರಶಾಂತ್ ನಡುವೆ ಸೈಟಿನ ವಿವಾದವು ಆಗಾಗ್ಗೆ ಗಲಾಟೆಗೂ ಕಾರಣವಾಗಿತ್ತು. ಪ್ರಶಾಂತ್ ಈ ನಿವೇಶನವನ್ನು ಮಾರಾಟ ಮಾಡಿಸಿದ್ದರು. ಪೂರ್ಣಚಂದ್ರ ಹಾಗೂ ಈತನ ಪತ್ನಿಗೆ ಸಮಾನವಾಗಿ ಹಂಚಿಕೆ ಯನ್ನೂ ಮಾಡಿದ್ದರು. ನಂತರ ಈ ಪ್ರಗತಿಯಲ್ಲಿ ಅದೇಕೋ. ಘಟನೆ ದ್ವೇಷಕ್ಕೂ ಕಾರಣವಾಯಿತು. ಈ ನಡುವೆ ಪೂರ್ಣಚಂದ್ರಗೆ ಕೆಲವು ಪುಡಿ ರೌಡಿಗಳು ಬೆಂಬಲ ನೀಡಿದ್ದು ಈಗಾಗಲೇ ಬಯಲಾಗಿದೆ. ಹಾಗಾಗಿ

ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಈ ಪ್ರಕರಣವನ್ನು . ಸಿಐಡಿಗೆ ಒಪ್ಪಿಸಲೇಬೇಕೆಂದು ಒತ್ತಡ ಹೇರಿದ್ದರು. ಸಿಐಡಿ ತಂಡ ತನಿಖೆ ಆರಂಭಿಸಿ. ಪೂರ್ಣಚಂದ್ರ ಸಚಿನ್, ಸಂತೋಷ್, ಅಮಿತ್, ಕುಳ್ಳ ರಾಮ, ಕೋತಿ ಶಿವ, ವಿಶ್ವನಾಥ್, ಶ್ರೀನಿವಾಸ್, ಉಮೇಶ್ ಮತ್ತು ರಾಜೇಶ್ ಆರೋಪಿಗಳಾಗಿದ್ದಾರೆ. ಹತ್ಯೆ ಮಾಡಿದ ತಂಡಕ್ಕೆ ಸಂತೋಷ್ ಸ್ಥಳಕ್ಕೆ ಆಟೋದಲ್ಲಿ ಎಲ್ಲರನ್ನೂ ಕರೆತಂದಿದ್ದನು. ಈ ಆಟೋ ವಿಶ್ವನಾಥ್‌ ಗೆ ಸೇರಿದ್ದು, ಇನ್ನೂ ತನಿಖೆ ಪ್ರಶಾಂತ್‌ಗೆ ಹಿಂದಿನಿಂದಲೂ ವೈರಿಗಳಿದ್ದರು. ಇತ್ತೀಚೆಗೆ ಪ್ರಶಾಂತ್ ಬದಲಾವಣೆಯಾಗಿದ್ದರು. ಯಾರೊಂದಿಗೂ ದ್ವೇಷ ಸಾಧಿಸುತ್ತಿರಲಿಲ್ಲ. ಆದರೆ

ರೌಡಿ ಶೀಟರ್‌ನಲ್ಲಿ ಅವರು ದಾಖಲಾಗಿ ಹತ್ಯೆಗೆ ಸಂಬಂಧಿಸಿದಂತೆ ಪ್ರಶಾಂತ್ ಕೂಡ ಸುಳಿವಿತ್ತು. ಅವರು ನಿರ್ಲಕ್ಷಿಸಿದ್ದೇ ಅನಾಹುತಕ್ಕೆ ಕಾರಣ ವಾಯಿತು. ಈ ನಡುವೆ ಸಿಐಡಿ ತಂಡ ದೊಂದಿಗೆ ನಗರ ಪೊಲೀಸರು ತನಿಖೆಗೆ ಸಹಕಾರ ನೀಡಿದ್ದಾರೆ. – ಉದಯವರದಿ (ಬೆಳಗಿನ ದಿನ ಪತ್ರಿಕೆ ಓದಿ)

LEAVE A REPLY

Please enter your comment!
Please enter your name here