ಅಕ್ರಮ ಸಂಬಂಧ ಕಲಹ ಚಾಕು ಇರಿತದಿಂದ ವ್ಯಕ್ತಿ ಸಾವು : ಮಹಿಳೆಗೆ ಗಂಭೀರ ಗಾಯ

0

ಹೊಳೆನರಸೀಪುರ: ಅಕ್ರಮ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯೊಬ್ಬ ದಂಪತಿಗೆ ಚಾಕುವಿನಿಂದ ಇರಿದಿರುವ ಘಟನೆ ತಾಲೂಕಿನ ಕ್ಯಾತನ ಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಗಂಭೀರ ಗಾಯಗೊಂಡ ಜವರಯ್ಯ (45) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿರುವ ಮೃತರ ಪತ್ನಿ ಮಂಜುಳಾ ಎಂಬುವರನ್ನು

ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವಿವರ: ಜವರಯ್ಯ ಅವರಿಗೆ ಸೇರಿದ ಹಳೇ ಮನೆಯ ದುರಸ್ತಿ ಕಾರ್ಯವನ್ನು ಸಮೀಪದ ಮಾಚಗೌಡನ ಹಳ್ಳಿಯ ಮೂಡ್ಲಿಗಿರಿ ಅಲಿಯಾಸ್ ಸ್ವಾಮಿ ಎಂಬಾತ ಹಲವು ದಿನಗಳಿಂದ ಕೈಗೊಂಡಿದ್ದಾರೆ. ಈ ನಡುವೆ ಸ್ವಾಮಿ ಮತ್ತು ಜವರಯ್ಯ ಪತ್ನಿ ಮಂಜುಳಾ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಇದನ್ನು ಜವರಯ್ಯ ಪ್ರಶ್ನೆ ಮಾಡಿದ್ದ. ಇದರಿಂದ

ಕೆರಳಿದ ಸ್ವಾಮಿ, ದಂಪತಿ ಇಬ್ಬರಿಗೂ ಮಧ್ಯಾಹ್ನ 2 ಗಂಟೆ ಸುಮಾರಿಗೆ ಚಾಕುವಿನಿಂದ ಬಲವಾಗಿ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡ ಜವರಯ್ಯ ಸ್ಥಳದಲ್ಲೇ ಮೃತಪಟ್ಟಿದ್ದು, ಪತ್ನಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತ ಜವರಯ್ಯ ಪುತ್ರ ಶಶಿಕುಮಾ‌ ನೀಡಿದ ದೂರು ಆಧರಿಸಿ

ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಘಟನೆ ಸುದ್ದಿ ತಿಳಿದು ಎಸ್ಪಿ ಹರಿರಾಮ್ ಶಂಕರ್ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here