ಮುಖವೇ ವಿರೂಪಗೊಂಡು ಮದುವೆ ಕ್ಯಾನ್ಸಲ್ ಆದ ದುರಂತ ಘಟನೆ ಹಾಸನದ ಅರಸೀಕೆರೆಯಲ್ಲಿ

0

ಹಾಸನ : ಮದುವೆಯಾಗಬೇಕಿದ್ದ ವಧು ದುರ್ಗತಿ ಎಂಬಾಕೆ ಹೊಸ ಮಾದರಿಯ ಮೇಕಪ್‍ ಮಾಡಿಸಲು ಹೋಗಿ ಯಡವಟ್ಟು ಮಾಡಿಕೊಂಡಿದ್ದು, ಮೇಕಪ್ ಮಾಡುವುದಾಗಿ ಹೇಳಿ ಅದ್ಯಾವುದೋ ಸ್ಟೀಮ್ ತೆಗೆದುಕೊಂಡಿದ್ದು. ಇದಾದ ಬಳಿಕ ವಧುವಿನ ಮುಖ ಊದಿಕೊಂಡು , ಸುಟ್ಟಂತೆ ಕಪ್ಪಾಗಿದೆ. ಯುವತಿಯ ಮುಖ ನೋಡಿ ಮದುವೆಯಾಗಲು ವರ ಹಾಗೂ ವರನ ಕುಟುಂಬ ಸದ್ಯ ನಿರಾಕರಿಸಿಯೇ ಬಿಟ್ಟಿದ್ದು, ಮದುವೇ ಮುಂದೂಡಲಾಗಿದೆ , ವಧುವಿನ ಕುಟುಂಬಸ್ಥರು ಬೇಸರಗೊಂಡು

ಇದೀಗ ಕಂಗಾಲಾಗಿದ್ದು , ಸಹಜ ಸ್ಥಿತಿಗೆ ಬರಲು ಕಾಯಬೇಕಿದೆ . , ಯುವತಿ ಬೆಚ್ಚಿಬಿದ್ದಿದ್ದು .  ಬ್ಯೂಟಿಪಾರ್ಲರ್‌ ಮಾಲೀಕರಾದ ಗಂಗಾ ಎಂಬುವರ ಪಾರ್ಲರ್‌ನಲ್ಲಿ ಈ ಘಟನೆ ನಡೆದಿದ್ದು, ವಧುವಿನ ಕುಟುಂಬಸ್ಥರು ಅವಘಡದ ಕುರಿತು ಪೊಲೀಸರಿಗೆ ದೂರು ನೀಡಿಲ್ಲ ಎಂದು , ಬ್ಯೂಟಿ‌ ಪಾರ್ಲರ್ ಮಹಿಳೆ ತಿಳಿಸಿದ್ದು , ಮಾಲೀಕರಾದ ಗಂಗಾ ಅವರನ್ನು ವಿಚಾರಣೆ ನಡೆಸಿಲ್ಲ ಎನ್ನಲಾಗಿದೆ ,  ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುವ ಸಾಧ್ಯತೆಯಿದೆಯೇ ಕಾದು ನೋಡಬೇಕಿದೆ. , ಇತ್ತೀಚಿನ ದಿನಗಳಲ್ಲಿ ಮದುವೆ ಅಂದಾಗ

ಬ್ಯೂಟಿಪಾರ್ಲರ್‌ಗಳಿಗೆ ತೆರಳದವರೇ ಇಲ್ಲ ಬಿಡಿ . ಮದುವೆ ದಿನ ವಧು ಚೆನ್ನಾಗಿ ಕಾಣಿಸಬೇಕೆಂದು ಎಗ್ಗಿಲ್ಲದ ಸರ್ಕಸ್‌ ಮಾಡ್ತಾರೆ , ಹಾಗೂ ಅದೊಂದು ಡ್ರೀಮ್ ಕೂಡ. ಅದಕ್ಕಾಗಿ ಪಾರ್ಲರ್‌ಗೆ ತೆರಳಿ ಮುಖವನ್ನು ಅಂದಗೊಳಿಸಲು ಹೋಗಿ ಮುಖವೇ ವಿರೂಪಗೊಂಡು ಮದುವೆ ಕ್ಯಾನ್ಸಲ್ ಆದ ದುರಂತ ಘಟನೆ ನಡೆದಿರೋದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.. ಒಂದು ಮೇಕಪ್ ಮದುವೆಗಾಗಿ ಯುವತಿಯ ಭವಿಷ್ಯವೇ ಅಲ್ಲೋಲ ಕಲ್ಲೋ ಸೃಷ್ಟಿಸಿದೆ .

ಈಗಿನ ಹೆಣ್ಣು ಮಕ್ಕಳಿಗೆ ಮೇಕಪ್ ಸಹಜ , ಅತಿ ಹೆಚ್ಚು ಮೇಕಪ್ ಅಥವಾ ಅನವಶ್ಯಕ ಮೇಕಪ್ ದೇವರು ಕೊಟ್ಟ ನೈಜ ಸೌಂದರ್ಯವನ್ನೆ ಹಾಳುಮಾಡಬಹುದು ಎಚ್ಚರ .

LEAVE A REPLY

Please enter your comment!
Please enter your name here